»   » ಐಶ್ವರ್ಯ ಪಾಲಿಗೆ ಈ ಯುಗಾದಿ ಚೆನ್ನಾಗಿರಲಿಲ್ಲ

ಐಶ್ವರ್ಯ ಪಾಲಿಗೆ ಈ ಯುಗಾದಿ ಚೆನ್ನಾಗಿರಲಿಲ್ಲ

Subscribe to Filmibeat Kannada

ಮುಂಬಯಿ : ಯುಗಾದಿ ದಿನ (ಏ.2) ನಾಸಿಕ್‌ ಬಳಿ ಶೂಟಿಂಗ್‌ ನೋಡುತ್ತಿದ್ದಾಗ ಆಕಸ್ಮಿಕವಾಗಿ ಆದ ಅಪಘಾತದಿಂದ ನಟಿ ಐಶ್ವರ್ಯ ರೈ ಪಾದದ ಮೂಳೆ ಮುರಿದಿದ್ದು, ಹಿಂದೂಜಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಬುಧವಾರ ಸಂಜೆ 5.45ರ ಸುಮಾರಿನಲ್ಲಿ ಅಮಿತಾಬ್‌ ಬಚ್ಚನ್‌ ಹಾಗೂ ಅಕ್ಷಯ್‌ ಕುಮಾರ್‌ ಜತೆ ಕೂತು ಐಶ್ವರ್ಯ ಹಿಂದಿ ಚಿತ್ರವೊಂದರ ಸ್ಟಂಟ್‌ ದೃಶ್ಯವನ್ನು ನೋಡುತ್ತಿದ್ದರು. ಆಯ ತಪ್ಪಿದ ಸ್ಟಂಟ್‌ ಚಾಲಕ ಗಾಡಿಯನ್ನು ಐಶ್ವರ್ಯ ಕುರ್ಚಿಗೆ ಗುದ್ದಿದ. ಕುರ್ಚಿ ಮರಕ್ಕೆ ಬಡಿಯಿತು. ಐಶ್ವರ್ಯಾಗೆ ಗಂಭೀರ ಸ್ವರೂಪದ ಗಾಯಗಳಾದ ಕಾರಣ ತಕ್ಷಣ ನಾಸಿಕ್‌ನ ಆಸ್ಪತ್ರೆಗೆ ಸೇರಿಸಿ ಪ್ರಥಮ ಚಿಕಿತ್ಸೆ ಕೊಡಿಸಲಾಯಿತು. ಈಗ ಆಕೆಯನ್ನು ಹಿಂದೂಜಾ ಆಸ್ಪತ್ರೆಗೆ ಸೇರಿಸಲಾಗಿದೆ. ಗುರುವಾರ (ಏ.3) ಆಕೆಗೆ ಪೂರ್ಣ ಪ್ರಮಾಣದ ವೈದ್ಯಕೀಯ ತಪಾಸಣೆ ಮಾಡಲಾಗುತ್ತಿದೆ ಎಂದು ಆಸ್ಪತ್ರೆಯ ವೈದ್ಯರು ತಿಳಿಸಿದ್ದಾರೆ.

ಐಶ್ವರ್ಯಾ ಹೊರತುಪಡಿಸಿ ಶೂಟಿಂಗ್‌ ಸೆಟ್‌ನಲ್ಲಿದ್ದ ಬೇರೆ ಯಾರಿಗೂ ಯಾವುದೇ ಗಾಯಗಳಾಗಿಲ್ಲ.

(ಪಿಟಿಐ)

Post your views

ಸಿನಿಮಾ ಸಂಚಯ
ಠಾಗೋರರ ಬಿನೋದಿನಿಯಾಗಿ ಐಶ್‌
ನಾನು ಕರ್ನಾಟಕದವಳು, ಆಶೀರ್ವದಿಸಿ : ಐಶ್ವರ್ಯ

ಮುಖಪುಟ / ಸ್ಯಾಂಡಲ್‌ವುಡ್‌

Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada