ನಿರ್ಮಾಪಕ ಆರ್.ಲಕ್ಷ್ಮಣ್‌ಗೆ ಫಾಲ್ಕೆ ಅಕಾಡೆಮಿ ಪ್ರಶಸ್ತಿ
ಬೆಂಗಳೂರು : ಬಂಗಾರದ ಮನುಷ್ಯ, ಭಲೇ ಹುಚ್ಚ , ಬಂಧಮುಕ್ತ ಸೇರಿದಂತೆ ಅನೇಕ ಯಶಸ್ವಿ ಚಿತ್ರಗಳ ನಿರ್ಮಾಣ ಮಾಡಿದವರು; ಆರ್.ಲಕ್ಷ್ಮಣ್. ಈ ಹಿರಿಯ ನಿರ್ಮಾಪಕರ ಸಾಧನೆಗೀಗ, ದಾದಾ ಸಾಹೇಬ್ ಫಾಲ್ಕೆ ಅಕಾಡೆಮಿ ಪ್ರಶಸ್ತಿ ಸಂದಿದೆ.
ಮುಂಬೈನಲ್ಲಿ ಏ.23ರಂದು ನಡೆಯಲಿರುವ ಸಮಾರಂಭದಲ್ಲಿ ಅವರು ಪ್ರಶಸ್ತಿ ಸ್ವೀಕರಿಸಲಿದ್ದಾರೆ. ಗುಣಮಟ್ಟದ ಚಿತ್ರ ನಿರ್ಮಾಣ ಮಾಡುವ ನಿರ್ಮಾಪಕರಿಗೆ ಅಕಾಡೆಮಿ ಪ್ರಶಸ್ತಿಗಳನ್ನು ನೀಡುತ್ತಾ ಬಂದಿದೆ.
ಆರ್.ಲಕ್ಷ್ಮಣ್ ಈ ಪ್ರತಿಷ್ಠಿತ ಪ್ರಶಸ್ತಿ ಪಡೆದ ಮೂರನೇ ಕನ್ನಡಿಗರು. ಈ ಹಿಂದೆ ಈ ಪ್ರಶಸ್ತಿಗೆ ನಿರ್ಮಾಪಕಿ ಪಾರ್ವತಮ್ಮ ರಾಜ್‌ಕುಮಾರ್ ಮತ್ತು ನಿರ್ಮಾಪಕ ಕೆ.ಸಿ.ಎನ್.ಗೌಡ ಪಾತ್ರರಾಗಿದ್ದರು.
(ದಟ್ಸ್ ಕನ್ನಡ ವಾರ್ತೆ)


Click it and Unblock the Notifications