»   » ಖ್ಯಾತ ನಿರ್ದೇಶಕ ಮಣಿರತ್ನಂ ಸೋದರನ ಆತ್ಮಹತ್ಯೆ

ಖ್ಯಾತ ನಿರ್ದೇಶಕ ಮಣಿರತ್ನಂ ಸೋದರನ ಆತ್ಮಹತ್ಯೆ

Subscribe to Filmibeat Kannada

ಚೆನ್ನೈ : ದಕ್ಷಿಣಭಾರತದ ಜನಪ್ರಿಯ ಸಿನಿಮಾ ನಿರ್ದೇಶಕ ಮಣಿರತ್ನಂ ಅವರ ಹಿರಿಯ ಸಹೋದರ ಜಿ.ವೆಂಕಟೇಶ್ವರನ್‌ ಮೇ 3ರ ಶನಿವಾರ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ವೆಂಕಟೇಶ್ವರನ್‌ ಅವರು ಶನಿವಾರ ಮಧ್ಯಾಹ್ನ ಚೆನ್ನೈನ ತಮ್ಮ ನಿವಾಸದಲ್ಲಿ ಸೀಲಿಂಗ್‌ ಫ್ಯಾನ್‌ಗೆ ನೇಣು ಹಾಕಿಕೊಂಡಿದ್ದಾರೆ. ಹದಗೆಟ್ಟ ಹಣಕಾಸಿನ ಸ್ಥಿತಿಯೇ ಅವರ ಆತ್ಮಹತ್ಯೆಗೆ ಕಾರಣ ಎಂದು ತಮಿಳು ಸಿನಿಮಾ ಮೂಲಗಳು ತಿಳಿಸಿವೆ. ನೇಣು ಹಾಕಿಕೊಳ್ಳಲು ತಾವು ಬಳಸುತ್ತಿದ್ದ ಪಂಚೆಯನ್ನೇ ವೆಂಕಟೇಶ್ವರನ್‌ ಉಪಯೋಗಿಸಿದ್ದಾರೆ.
ಪತ್ನಿ , ಓರ್ವ ಪುತ್ರ ಹಾಗೂ ಓರ್ವ ಪುತ್ರಿಯನ್ನು ವೆಂಕಟೇಶ್ವರನ್‌ ಅಗಲಿದ್ದಾರೆ.

ವೆಂಕಟೇಶ್ವರನ್‌ ಅವರು ತಮಿಳು ಚಿತ್ರರಂಗದ ಪ್ರಖ್ಯಾತ ನಿರ್ಮಾಪಕರು ಹಾಗೂ ಚಿತ್ರ ವಿತರಕರು. ಅಗ್ನಿ ನಕ್ಷತ್ರಂ, ನಾಯಗನ್‌ ಸೇರಿದಂತೆ ಅನೇಕ ಯಶಸ್ವಿ ಚಿತ್ರಗಳನ್ನು ಅವರು ನಿರ್ಮಿಸಿದ್ದಾರೆ.

(ಪಿಟಿಐ)

ಮುಖಪುಟ / ಸ್ಯಾಂಡಲ್‌ವುಡ್‌

Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada