ರಾಜು ಅನಂತಸ್ವಾಮಿ ಆರೋಗ್ಯದಲ್ಲಿ ತುಸು ಚೇತರಿಕೆ
ಬೆಂಗಳೂರು : ಖ್ಯಾತ ಯುವ ಗಾಯಕ, ಸಂಗೀತ ನಿರ್ದೇಶಕ ಮತ್ತು ನಟ ರಾಜು ಅನಂತಸ್ವಾಮಿ ಅವರ ಆರೋಗ್ಯದಲ್ಲಿ ಈಗ ತುಸು ಚೇತರಿಕೆ ಕಂಡುಬಂದಿದೆ.
ಕರುಳು ಬಾವಿನಿಂದ ನರಳುತ್ತಿರುವ ರಾಜು ಅನಂತಸ್ವಾಮಿ ಅವರ ಪಿತ್ತಜನಕಾಂಗದಲ್ಲಿ ತೊಂದರೆ ಕಂಡು ಬಂದಿತ್ತು. ಅವರ ಮನೆ ಸಮೀಪದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರು ರಾಜು ಅನಂತಸ್ವಾಮಿ, ಚಿಕಿತ್ಸೆಗೆ ಸ್ಪಂದಿಸುತ್ತಿದ್ದಾರೆಂದು ಆಸ್ಪತ್ರೆ ವೈದ್ಯರು ತಿಳಿಸಿದ್ದಾರೆ.
ದಿವಂಗತ ಮೈಸೂರು ಅನಂತಸ್ವಾಮಿ ಅವರ ಪುತ್ರರಾದ ರಾಜು ಅನಂತಸ್ವಾಮಿ ವಿಪರೀತ ಕುಡಿತದಿಂದ ಈ ಸ್ಥಿತಿ ತಲುಪಿದ್ದಾರೆ. ಸಂಗೀತ-ಕುಡಿತ ಎರಡರಲ್ಲೂ ರಾಜು, ತಮ್ಮ ತಂದೆಯನ್ನೇ ಅನುಸರಿಸಿದ್ದಾರೆ ಎಂದು ಅವರ ಆಪ್ತವರ್ಗ ಅಭಿಪ್ರಾಯಪಟ್ಟಿದೆ.
(ಇನ್ಫೋ ವಾರ್ತೆ)
Post your views
ಮುಖಪುಟ / ಸ್ಯಾಂಡಲ್‌ವುಡ್


Click it and Unblock the Notifications