»   » ‘ನಾನು ಸ್ವಾರ್ಥಿ ’: ಅಮಿತಾಭ್‌ ಮನದಾಳದ ಮಾತುಗಳು!

‘ನಾನು ಸ್ವಾರ್ಥಿ ’: ಅಮಿತಾಭ್‌ ಮನದಾಳದ ಮಾತುಗಳು!

Posted By:
Subscribe to Filmibeat Kannada


ಮುಂಬಯಿ : ಅಭಿ ಮತ್ತು ಐಶ್ವರ್ಯ ರೈ ಮದುವೆಯ ದೃಶ್ಯಗಳನ್ನು ನಾವು ಯಾವುದೇ ಟೀವಿ ಚಾನೆಲ್‌ಗಳಿಗೆ ನೀಡಿಲ್ಲ ಎಂದು ನಟ ಅಮಿತಾಭ್‌ ಬಚ್ಚನ್‌ ಗುರುವಾರ ಹೇಳಿದ್ದಾರೆ.

ಸುದ್ದಿಗಾರರ ಜೊತೆ ಮಾತನಾಡುತ್ತಿದ್ದ ಅವರು, ಈ ಸಂಬಂಧ ಊಹಾಪೋಹಗಳು ಕೇಳಿ ಬರುತ್ತಿವೆ. ಇವೆಲ್ಲವೂ ಸತ್ಯಕ್ಕೆ ದೂರ. ಮದುವೆ ಎನ್ನುವುದು ಬದುಕಿನ ಖಾಸಗಿ ಕ್ಷಣ. ನಮ್ಮ ಬಂಧುಗಳು ಮತ್ತು ಮಿತ್ರರು ಪಾಲ್ಗೊಳ್ಳುವ ಆ ಕ್ಷಣಗಳನ್ನು ಸಾರ್ವಜನಿಕವಾಗಿ ಹಂಚಿಕೊಳ್ಳುವುದು ಸಲ್ಲದು ಎಂದರು.

ನಾನು ಸ್ವಾರ್ಥಿ : ಟೀವಿ ಚಾನೆಲ್‌ಗಳು ಮದುವೆಯನ್ನು ನೇರ ಪ್ರಸಾರ ಮಾಡುವ ಹಕ್ಕುಗಳಿಗೆ ಬೇಡಿಕೆ ಸಲ್ಲಿಸಿದ್ದರೂ, ನಾನು ಒಪ್ಪುತ್ತಿರಲಿಲ್ಲ. ಈಗ ಮದುವೆ ದೃಶ್ಯಗಳನ್ನು 50ಮಿಲಿಯನ್‌ಗೆ ಮಾರಾಟ ಮಾಡಲಾಗಿದೆ ಎಂಬ ಸುದ್ದಿ ಅಪ್ಪಟ ಸುಳ್ಳು. ನನ್ನನ್ನು ಬೇಕಾದರೆ ಸ್ವಾರ್ಥಿ ಎಂದರೂ ಚಿಂತೆ ಇಲ್ಲ. ಈ ವಿಷಯದಲ್ಲಿ ನಾನು ಸ್ವಾರ್ಥಿಯೂ ಹೌದು.

ಕುಟುಂಬದ ಖಾಸಗಿತನವನ್ನು ನಾನು ನಾಶ ಮಾಡುವುದಿಲ್ಲ. ಮಾಧ್ಯಮಗಳು ನನ್ನ ವೃತ್ತಿಯನ್ನು ಹಿಂಬಾಲಿಸಲಿ, ಬಿಂಬಿಸಲಿ. ಆದರೆ ಕ್ಯಾಮೆರಾದೊಂದಿಗೆ ನನ್ನ ಮನೆಗೆ ಬರುವುದನ್ನು ನಾನು ಒಪ್ಪುವುದಿಲ್ಲ ಎಂದು ಅಮಿತಾಭ್‌ ಸ್ಪಷ್ಟವಾಗಿ ಹೇಳಿದರು.

(ಏಜನ್ಸೀಸ್‌)

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada