»   » ಬೆಳಗಾವಿ ಚೆಲುವೆ ಲಕ್ಷ್ಮಿ ರೈ ತಮಿಳು-ತೆಲುಗರ ಕಣ್ಮಣಿ!

ಬೆಳಗಾವಿ ಚೆಲುವೆ ಲಕ್ಷ್ಮಿ ರೈ ತಮಿಳು-ತೆಲುಗರ ಕಣ್ಮಣಿ!

Posted By:
Subscribe to Filmibeat Kannada


ವಾಲ್ಮೀಕಿ’ ಚಿತ್ರ ತೋಪಾಯಿತು. ಆ ಮೂಲಕ ಶಿವರಾಜ್‌ ಕುಮಾರ್‌ ಜೊತೆ ನಟಿಸಿದ್ದ ನಾಯಕಿ, ಕನ್ನಡದ ಹುಡುಗಿ ಲಕ್ಷ್ಮಿ ರೈ ಕನ್ನಡಿಗರಿಗೆ ಅಪರಿಚಿತಳಾಗಿಯೇ ಉಳಿದರು!

18ರ ಬಾಲೆ ಲಕ್ಷ್ಮಿ ರೈ, ಈಗ ತ್ರಿಭಾಷಾ ತಾರೆ. ಬೋಲ್ಡ್‌ ಅಂಡ್‌ ಬ್ಯೂಟಿಫುಲ್‌ ಲಕ್ಷ್ಮಿ ರೈಗೆ ಕನ್ನಡ ಚಿತ್ರಗಳಲ್ಲಿ ನಟಿಸುವ ಬಯಕೆ ಇದ್ದೇ ಇದೆ. ಇದು ಅವರ ಇತ್ತೀಚಿನ ಸಂದರ್ಶನದಲ್ಲಿ ಬಯಲಾಗಿದೆ. ಅಲ್ಲದೇ ಕನ್ನಡ ಚಿತ್ರವೊಂದರಲ್ಲಿ ಈಕೆ ಸದ್ದಿಲ್ಲದೇ ಅಭಿನಯಿಸುತ್ತಿದ್ದಾರೆ.

ಈ ಲಕ್ಷ್ಮಿ ರೈ ಮತ್ತು ಐಶ್ವರ್ಯ ರೈಗೆ ಏನಾದರೂ ನಂಟಿದೆಯಾ ಎನ್ನುವ ಗುಮಾನಿ ಅನೇಕರದು. ಕಾರಣ ಇಬ್ಬರ ಹೆಸರಲ್ಲೂ ‘ರೈ’ ಅಂಟಿಕೊಂಡಿರುವುದು. ‘ಹಾಗೇನೂ ಇಲ್ಲ . ನಮ್ಮಿಬ್ಬರದು ಕೇವಲ ಸಿನಿಮಾ ಸಂಬಂಧ. ಇಂತಹ ರೂಮರ್‌ಗಳನ್ನು ಯಾರು ಹಬ್ಬಿಸುತ್ತಾರೋ ಗೊತ್ತಿಲ್ಲ’ ಎಂದು ನಗುತ್ತಾರೆ ಲಕ್ಷ್ಮಿ ರೈ.

ಈ ಚೆಲುವೆ 2002ರಲ್ಲಿ ಮಿಸ್‌ ಬೆಳಗಾಂ(ಬೆಳಗಾವಿ) ಖ್ಯಾತಿಗೆ ಪಾತ್ರರಾದವರು. ತಮಿಳಿನ ಸ್ಟಾರ್‌ ನಟ ವಿಜಯ್‌ ಅವರ ಕಸಿನ್‌ ವಿಕ್ರಾಂತ್‌ ಜೊತೆ ‘ ಕರ್ಕ ಕಸದರ ’ ಅನ್ನೋ ಚಿತ್ರದ ಮೂಲಕ ತಮಿಳು ಚಿತ್ರರಂಗ ಪ್ರವೇಶ ಮಾಡಿದವರು. ನಂತರ ತಮಿಳಿನ ಜೊತೆಗೆ ತೆಲುಗಲ್ಲೂ ಅವಕಾಶಗಳ ಗಿಟ್ಟಿಸಿದವರು.

ಪತ್ರಿಕೆಯಾಂದಕ್ಕೆ ನೀಡಿದ ಸಂದರ್ಶನದಲ್ಲಿ ಅವರಿಗೆ ಸಂಬಂಧಿಸಿದ ಕೆಲ ಸಂಗತಿಗಳು ದಾಖಲಾಗಿವೆ. ಅವು ಹೀಗಿವೆ;

  • ಮನೆಯಲ್ಲಿ ಕರೆಯೋ ಹೆಸರು : ಕೃಷ್ಣ
  • ಲಕ್ಕಿ ನಂಬರ್‌ : 5
  • ಜಾಸ್ತಿ ಇಷ್ಟಪಡೋದು : ನನ್ನ ನಗು ಹಾಗೂ ಕಣ್ಣು ಗಳು
  • ಇಷ್ಟವಾದ ತಿಂಡಿ : ಕುರುಕುಲು ತಿಂಡಿ
  • ಹವ್ಯಾಸ: ನಿದ್ದೆ ಮಾಡೋದು
  • ಇಷ್ಟವಾದ ಒಂದು ವಾಕ್ಯ : ಡು ನಾಟ್‌ ಡಿಸ್ಟರ್ಬ್‌!

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada