»   » ಸುದೀಪ್‌ಗೆ ರೋಪು ಹಾಕಿದ ರಕ್ಷಿತಾ !

ಸುದೀಪ್‌ಗೆ ರೋಪು ಹಾಕಿದ ರಕ್ಷಿತಾ !

Posted By: Staff
Subscribe to Filmibeat Kannada

'ಏ, ಸರಿಯಾಗಿ ಗಾಡಿ ಓಡ್ಸು. ಬೇಕಂತ ಹಳ್ಳ ದಿಣ್ಣೆ ಹತ್ತಿಸಬೇಡ. ಈ ಪೋಸೆಲ್ಲ ನನ್ನ ಹತ್ರ ಬೇಡ."

ಕುಲುಕುತ್ತ ಓಡುತ್ತಿದ್ದ ಬೈಕ್‌ ಸವಾರನನ್ನು, ಬೈಕ್‌ನ ಹಿಂಬದಿ ಕೂತಿದ್ದ ನಾಯಕಿ ದಬಾಯಿಸಿದ್ದು ಹೀಗೆ. ಅದು 'ಧಮ್‌" ಚಿತ್ರದ ಚಿತ್ರೀಕರಣ. ಬೈಕ್‌ ಓಡಿಸುತ್ತಿದ್ದುದು ಸುದೀಪ್‌. ಹಿಂಬದಿಯಲ್ಲಿ ಕೂತು ರೋಪು ಹೊಡೆದದ್ದು ಅಪ್ಪು ಖ್ಯಾತಿಯ ರಕ್ಷಿತಾ.

ಸಿಟಿ ಬಸ್ಸಲ್ಲಿ ಓಡಾಡೋದು ರಕ್ಷಿತಾಗೆ ಅಭ್ಯಾಸವಿಲ್ಲ . ದೇಶೀ ಹೆಣ್ಣು ಮಗಳಾದರೂ ವಿದೇಶಿ ಸಂಸ್ಕೃತಿ ಮೆಚ್ಚಿದವಳು. ಲಿಫ್ಟ್‌ ಕೇಳುವುದರಲ್ಲಿ ರಕ್ಷಿತಾ ಪಳಗಿದ ಹುಡುಗಿ. ದಾರಿಯಲ್ಲಿ ಸಾಗುವ ವಾಹನಗಳಿಗೆ ಕೈ ತೋರಿಸುವುದು, ಮಾದಕ ನಗೆಯಾಂದನ್ನು ಚೆಲ್ಲಿ ಕಾಲೇಜ್‌ಗೆ ಲಿಫ್ಟ್‌ ಕೇಳುವುದು.

ಇದೇ ರೀತಿ ನಾಯಕ ಸುದೀಪ್‌ ಬಳಿ ಲಿಫ್ಟ್‌ ಕೇಳಿದ ರಕ್ಷಿತಾ, ಗಾಡಿ ಅಡ್ಡಾದಿಡ್ಡಿಯಾಗಿ ಓಡತೊಡಗಿದಾಗ ಕೆಂಡಾಮಂಡಲ. ಮೈ ಕೈ ಸೋಕಲೆಂದೇ ಆತ ಬೈಕ್‌ ಅಡ್ಡಾದಿಡ್ಡಿಯಾಗಿ ಓಡಿಸುತ್ತಿದ್ದಾನೆ ಎನ್ನುವ ಗುಮಾನಿ ಆಕೆಗೆ. ರಕ್ಷಿತಾಳ ರೋಪಿಗೆ ಸುದೀಪ್‌ ಸೋಲುವುದಿಲ್ಲ . ನಮ್ಮ ರಸ್ತೆಗಳು ಇರೋದೆ ಹೀಗೆ. ನಾನೇನೂ ಪೋಸ್‌ ಕೊಡಲಿಲ್ಲ . ಸುಮ್ಮನೆ ಕಾಲೇಜಿಗೆ ಹೋಗಿ ಎಂದು ಸುದೀಪ್‌ ಮರು ರೋಪು ಹಾಕಿದಾಗ ರಕ್ಷಿತಾ ಕಂಗಾಲು.

ಧಮ್‌ ಚಿತ್ರದ ಈ ದೃಶ್ಯದ ಶೂಟಿಂಗ್‌ ನಡೆದದ್ದು ಪದ್ಮನಾಭ ನಗರ ಬಡಾವಣೆಯ ಬಸ್‌ ಸ್ಟಾಂಡ್‌ ಬಳಿ. ಎಂ.ಎಸ್‌.ರಮೇಶ್‌ ಚಿತ್ರದ ನಿರ್ದೇಶಕರು. ವೇಣು ಛಾಯಾಗ್ರಹಣ, ಗುರುಕಿರಣ್‌ ಸಂಗೀತ, ರಾಮ್‌ಶೆಟ್ಟಿ ಸಾಹಸ ಧಮ್‌ಗಿದೆ. ರಮೇಶ್‌-ರಾಜಶೇಖರ್‌-ಆನಂದ್‌ ತ್ರಿವಳಿ ಕಥೆ- ಚಿತ್ರಕಥೆ- ಸಂಭಾಷಣೆಯ ಹೊಣೆ ಹೊತ್ತಿದೆ. ಸುದೀಪ್‌, ರಕ್ಷಿತಾ ಜೋಡಿಯ ಜೊತೆಗೆ- ರಘು, ಸಾಧು ಕೋಕಿಲಾ, ಅರುಣ್‌ ಸಾಗರ್‌, ಹಂಸ, ಶ್ರೀನಾಥ್‌ ಮುಂತಾದವರು ತಾರಾಗಣದಲ್ಲಿದ್ದಾರೆ.

ಧಮ್‌ ಚಿತ್ರದ ಚಿತ್ರೀಕರಣ ಪ್ರಗತಿಯಲ್ಲಿರುವಂತೆಯೇ, ಸುದೀಪ್‌ ಅಭಿನಯದ ಚಂದು ತೆರೆಗೆ ಬರಲು ಸಿದ್ಧನಾಗುತ್ತಿದ್ದಾನೆ. ಚಂದುವಿನಲ್ಲಿ ಸುದೀಪ್‌ಗೆ ಸೋನಿಯಾ ನಾಯಕಿ. ಈ ಚಿತ್ರದ ಬಗ್ಗೆ ಸುದೀಪ್‌ ಮಾತ್ರವಲ್ಲ , ಉದ್ಯಮ ಕೂಡ ಭಾರೀ ನಿರೀಕ್ಷೆ ಇಟ್ಟುಕೊಂಡಿದೆ.

English summary
Rakshita scolds Sudeep!

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada