»   » ‘ಬಾ ಬಾರೋ ...’ ಚಿತ್ರೀಕರಣ ಅಂತ್ಯ

‘ಬಾ ಬಾರೋ ...’ ಚಿತ್ರೀಕರಣ ಅಂತ್ಯ

Posted By: Super
Subscribe to Filmibeat Kannada
Kannada movie Ba Baaro Rasika
'ಬಾ ಬಾರೋ ರಸಿಕ..." ಎಂದು ಚಿತ್ರದ ಶೀರ್ಷಿಕೆಯೇ ಚಿತ್ರ ರಸಿಕರನ್ನು ಕೈ ಬೀಸಿ ಕರೆಯುತ್ತಿದೆ. 'ಬಾ ಬಾರೋ ರಸಿಕ..." ಚಿತ್ರದ ಚಿತ್ರೀಕರಣ ಮುಗಿದಿದೆ. ಚಿತ್ರ ಸಧ್ಯದಲ್ಲೇ ಬಿಡುಗಡೆಗೊಂಡು ಜನ ಮೆಚ್ಚುಗೆಗೆ ಪಾತ್ರವಾಗಲಿದೆ ಎಂಬುದು ಚಿತ್ರ ತಂಡದವರ ಅಭಿಪ್ರಾಯ.

'ಶಾಂತಿ ಕ್ರಿಯೇಷನ್ಸ್‌" ಲಾಂಛನದಲ್ಲಿ ಜಿ. ಪ್ರಸಾದ ರೆಡ್ಡಿ ಹಾಗೂ ಡಿ. ಸಾಯೀಂದ್ರ ರೆಡ್ಡಿ ಅವರು 'ಬಾ ಬಾರೋ ರಸಿಕ..." ಚಿತ್ರ ನಿರ್ಮಿಸಿದ್ದಾರೆ.

'ಬಾ ಬಾರೋ ರಸಿಕ..." ಚಿತ್ರದ ವಿಶಿಷ್ಟತೆಗಳೆಂದರೆ, ನಾಯಕ ನಟ ಸುನಿಲ್‌ ರಾವ್‌ ಈವರೆಗೆ ಅಭಿನಯಿಸಿದ ಪ್ರೀತಿ, ಪ್ರೇಮ, ಪ್ರಣಯ ಮತ್ತು ಎಕ್ಸ್‌ಕ್ಯೂಸ್‌ ಮಿ ಎರಡು ಚಿತ್ರಗಳೂ ಶತದಿನೋತ್ಸವವನ್ನು ಆಚರಿಸಿದೆ. ಎಕ್ಸ್‌ಕ್ಯೂಸ್‌ ಮಿ ಚಿತ್ರವಂತೂ 200 ದಿನಗಳನ್ನು ದಾಟಿಯೂ, ಇನ್ನೂ ಓಡುತ್ತಿದೆ.

ಚಿತ್ರದ ನಾಯಕಿ ಆಶಿತಾ ಚಿತ್ರೀಕರಣದ ಸಮಯದಲ್ಲಿ ಸ್ವಲ್ಪ ಕಿರಿಕಿರಿ ನಡೆಸಿದ್ದಳಂತೆ. ಮತ್ತು ಕೊಡುವ ದೃಶ್ಯಗಳಿಗೆ ಒಲ್ಲೆ ಎಂದೂ ಹೇಳಿದ್ದಳಂತೆ. ಆದರೆ ಆಮೇಲೇನಾಯ್ತೋ ಗೊತ್ತಿಲ್ಲ; ಒಲ್ಲೆ ಎಂದವಳು ಎಲ್ಲವನ್ನೂ ಬಲ್ಲೆ ಎಂದು ಒಪ್ಪಿದಳಂತೆ. ಈ ಹೊಳಪು ಕಂಗಳ ಹುಡುಗ ಅದೇನು ಮೋಡಿ ಮಾಡಿದನೋ ಗೊತ್ತಿಲ್ಲ.

ಚಿತ್ರದ ವಿಶಿಷ್ಟ ಪಾತ್ರದಲ್ಲಿ ರಮ್ಯ ಕೃಷ್ಣ ಅವರು ಕಾಣಿಸಲಿದ್ದಾರೆ. ನಲವತ್ತರ ಹರೆಯದ ನವ ಯುವತಿ ರಮ್ಯ ಕೃಷ್ಣ ಮತ್ತು ಇಪ್ಪತ್ತರ ತುಂಟಾದ ಹುಡುಗ ಸುನಿಲ್‌ ರಾವ್‌ ಜೊತೆ ನಟಿಸಿದ ಹಸಿಬಿಸಿ ದೃಶ್ಯಗಗಳಲ್ಲಿ ಅತಿ ಸಹಜವಾಗಿ ಬಂದಿದೆಯೆಂಬುದು ನಿರ್ದೇಶಕರ ಅಂಬೋಣ.

ಚಿತ್ರದ ವಾಲ್‌ ಪೇಪರ್‌ಗಳಲ್ಲಿನ ಸುನಿಲ್‌ ರಾವ್‌ ಮತ್ತು ರಮ್ಯ ಜೋಡಿ ನೋಡಿದ್ರೇ ಮೈಯಲ್ಲೆಲ್ಲ ಕರೆಂಟು ಪಾಸಾಗುತ್ತೆ ಅನ್ನೋದು ಚಿತ್ರದ ಪೋಸ್ಟರ್‌ ನೊಡಿದ ರಸಿಕರ ಪ್ರವರ. ಇಷ್ಟೆಲ್ಲ ಹೊತ್ತು ತರುತ್ತಿರುವ ರಸಿಕ ಗೆಲ್ಲಲಿ. ಸುನಿಲ್‌ ರಾವ್‌ ಹ್ಯಾಟ್ರಿಕ್‌ ಹೀರೋ ಪಟ್ಟ ಗಳಿಸಲಿ ಎಂದು ಹಾರೈಸೋಣ.

ಇವರೆಲ್ಲ ಅಭಿನಯಿಸಿರುವ ಈ ಚಿತ್ರದ ಮೇಲೆ ಬಹು ಜನರ ಅಪಾರ ನಿರೀಕ್ಷೆಯಿದೆ. 'ಓ, ಬುಡಿ ಸಾರ್‌, ಇಬ್ರೂ ಸಕತ್ತಾಗವ್ರೆ, ಪಿಚ್ಚರು ಹಿಟ್‌ ಆದಂಗೇನೆ..." ಎಂಬುದು ಗಾಂಧಿನಗರದ ಚಿತ್ರ ರಸಿಕರಲ್ಲೊಬ್ಬನಾದ ಹಳೆಪೇಪರ್‌ ಉದ್ಯಮಿ ಗಣೇಶನ ಮಾತು.

English summary
Kannada movie Ba Baaro Rasika shooting completed

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada