»   » ಸೌಂದರ್ಯ ಅಭಿನಯದ ‘ಶ್ವೇತನಾಗ’ ಜೂನ್‌ನಲ್ಲಿ ತೆರೆಗೆ

ಸೌಂದರ್ಯ ಅಭಿನಯದ ‘ಶ್ವೇತನಾಗ’ ಜೂನ್‌ನಲ್ಲಿ ತೆರೆಗೆ

Subscribe to Filmibeat Kannada
  • ಸಿನಿಡೆಸ್ಕ್‌, ದಟ್ಸ್‌ಕನ್ನಡ
ಚಿತ್ರರಂಗ ಕಂಡ ಪ್ರಮುಖ ದುರ್ಘಟನೆಯಲ್ಲಿ ನಟಿ ಸೌಂದರ್ಯ ೕಸಾವು ಒಂದು. ಈ ವರ್ಷ ಎಪ್ರಿಲ್‌ 17ರ ಶನಿವಾರ ಅವರು ಇಹಲೋಕ ತ್ಯಜಿಸಿದರು. ಆದರೆ ಅವರು ಅಭಿನಯಿಸಿದ್ದ ‘ಶ್ವೇತನಾಗ’ ಚಿತ್ರವು ಜೂನ್‌ ತಿಂಗಳಲ್ಲಿ ತೆರೆಗೆ ಬರಲು ಸಿದ್ಧವಾಗಿದೆ. ಶ್ರಿಮತಿ ಲಲ್ಲಾದೇವಿಯವರ ತೆಲುಗು ಕಾದಂಬರಿ ಶ್ವೇತನಾಗ ಆಧಾರಿತ ಸಿನಿಮಾವಿದು. ಈ ಕತೆಯನ್ನು ಕನ್ನಡಕ್ಕೆಭಟ್ಟಿ ಇಳಿಸಿದವರು ವಂಶಿ. ಹಾವು ಮತ್ತು ಅದರ ನಂಬಿಕೆಯ ಸುತ್ತ ಕತೆ ಸಾಗುತ್ತದೆ. ಚಿತ್ರದಲ್ಲಿ ಸೌಂದರ್ಯ ಅವರದ್ದು ಪ್ರಮುಖ ಪಾತ್ರ. ಆದರೆ ತನ್ನ ನಟನೆಯನ್ನೇ ವೀಕ್ಷಿಸಲು ಆ ಮುಗ್ದ ಕಂಗಳು ಇಂದು ನಮ್ಮೊಂದಿಗಿಲ್ಲ...

ಕಳೆದ ವರ್ಷ ಮದುವೆಯ ಮೊದಲ ಮಾಸದಲ್ಲೇ ಸೌಂದರ್ಯ ಈ ಚಿತ್ರಕ್ಕೆ ಸಹಿ ಮಾಡಿದ್ದರು. ಆಗ ಚಿತ್ರ ಮೂರು ಭಾಷೆಗಳಲ್ಲಿ ತೆರೆಗೆ ಬರುವ ಅಟ್ಟಣೆಯಿತ್ತು. ಉತ್ತರ ಕನ್ನಡದ ಪ್ರಮುಖ ತಾಣಗಳಲ್ಲಿ ಚಿತ್ರೀಕರಣ ಮಾಡಲಾಗಿತ್ತು. ಎಲ್ಲವೂ ಅಂದುಕೊಂಡಂತೆ ನಡೆದಿದ್ದರೆ ಚಿತ್ರ ಜನವರಿಯಲ್ಲಿ ತೆರೆಗೆ ಬರಬೇಕಾಗಿತ್ತು. ಆಕೆಗೆ ವೀಕ್ಷಿಸುವ ಭಾಗ್ಯವಿರಲಿಲ್ಲವೇನೋ!

‘ಮಾರ್ಕ್‌ ಸಿನಿಮಾ’ ಲಾಂಛನದಡಿಯಲ್ಲಿ ಎಚ್‌.ಎನ್‌.ಮಾರುತಿ ಚಿತ್ರ ನಿರ್ಮಿಸಿದ್ದಾರೆ. ಸಂಜೀವ ನಿರ್ದೇಶನ. ದಿವಾಕರ್‌ ಛಾಯಾಗ್ರಹಣ. ನಾಗೇಂದ್ರ ಪ್ರಸಾದ್‌ ಬರೆದ ಹಾಡುಗಳಿಗೆ ಕೋಟಿ ಸಂಗೀತ. ತಾರಾಗಣದಲ್ಲಿ ಸಂಗೀತ, ಅಭಿನಯಶ್ರಿ, ಶರತ್‌ ಬಾಬು, ದ್ವಾರಕೀಶ್‌, ಮುಖ್ಯಮಂತ್ರಿ ಚಂದ್ರು ಮಂತಾದವರಿದ್ದಾರೆ.

ನೆರೆಮನೆಗಳಲ್ಲಿ ಮಿಂಚುತ್ತಿರುವ ಬೆಂಗಳೂರಿನ ಹುಡುಗ ಅಬ್ಬಾಸ್‌ ಚಿತ್ರದ ನಾಯಕ. ‘ಕಾದಲ್‌ ದೇಶಂ’ (ತಮಿಳು)ಚಿತ್ರದ ಮೂಲಕ ಖ್ಯಾತಿಯ ಶಿಖರವೇರಿದ ಅಬ್ಬಾಸ್‌, ಕನ್ನಡದಲ್ಲಿ ಮಾತ್ರ ಯಸಸ್ಸು ಕಾಣಲಿಲ್ಲ. ಅವರ ಬಹುನಿರೀಕ್ಷಿತ ಕನ್ನಡ ಸಿನಿಮಾ ‘ಶಾಂತಿಶಾಂತಿಶಾಂತಿ’ ಸಹ ಗೆಲುವು ಕಾಣಲಿಲ್ಲ. ಈ ಚಿತ್ರದಲ್ಲಿ ಯಶಸ್ಸು ದೊರೆತರೆ ಹೊಸ ಇನ್ನಿಂಗ್ಸ್‌ ಆರಂಭಿಸಬಹುದು ಎಂಬುದು ಅವರ ಬಯಕೆ. ಆದರೆ ಆಕೆಗೆ ಪ್ರಸಿದ್ಧಿ ದೊರೆತರೂ... ಆಟ ಮುಗಿದ ಅಂಗಣದಂತೆ. ಅಲ್ಲಿ ಪ್ರೇಕ್ಷಕರ ಕಣ್ಣಂಚಿನ ನೆನಹುಗಳು ಮಾತ್ರ ಶಾಶ್ವತ. ‘ಶ್ವೇತನಾಗ’ಯಶಸ್ಸು ಕಂಡರೆ ಅದೊಂದು ಅರ್ಥಪೂರ್ಣ ಶ್ರದ್ಧಾಂಜಲಿ.

Post your views

ಮುಖಪುಟ / ಸ್ಯಾಂಡಲ್‌ವುಡ್‌

Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada