»   » ಗಿನ್ನಿಸ್‌ ದಾಖಲೆಯತ್ತ ಪುಂಡ!

ಗಿನ್ನಿಸ್‌ ದಾಖಲೆಯತ್ತ ಪುಂಡ!

Subscribe to Filmibeat Kannada

ನಾಗೇಂದ್ರ ಪ್ರಸಾದ್‌ ನಿರ್ದೇಶನದ ಹೊಸಚಿತ್ರ ‘ತುಂಟ ತುಂಟಿ’ಯ ನಾಯಕ ಕಾರ್ತಿಕ್‌. ಒಂಬತ್ತನೇ ತರಗತಿ ಓದುತ್ತಿರುವ ಆತನಿಗಿನ್ನು ಮೀಸೆ ಸಹಾ ಚಿಗುರಿಲ್ಲ! ಇದು ಸುದ್ದಿ. ವಿಶೇಷ ಸುದ್ದಿ ಅಂದ್ರೆ ನಮ್ಮ ಲಿಟಲ್‌ ಮಾಸ್ಟರ್‌ ಕಿಶನ್‌ ಚಿತ್ರ ನಿರ್ದೇಶನಕ್ಕೆ ತಯಾರಿ ನಡೆಸಿರುವುದು!

ನಿರ್ದೇಶನದ ಮಾತಿರಲಿ, ಎಲ್ಲವೂ ಸರಿ ಹೋದರೆ ಕಿಶನ್‌ ಹೆಸರು ಗಿನ್ನಿಸ್‌ ದಾಖಲೆಯಲ್ಲಿ ಸೇರ್ಪಡೆಯಾಗಲಿದೆ. ಜೊತೆಗೆ ಕಿರಿಯ ವಯಸ್ಸಿನಲ್ಲಿಯೇ ಆ್ಯಕ್ಸನ್‌-ಕಟ್‌ ಹೇಳಿದ ಯಶಸ್ಸು ಕಿಶನ್‌ಗೆ ದಕ್ಕಲಿದೆ. ಐದನೇ ತರಗತಿಯಲ್ಲಿ ಓದುತ್ತಿರುವ, ಒಂಬತ್ತು ವರ್ಷದ ಕಿಶನ್‌ ನಿರ್ದೇಶಿಸಲು ಉದ್ದೇಶಿಸಿರುವ ಚಿತ್ರದ ಹೆಸರು ‘ಕೇರಾಫ್‌ ಫುಟ್‌ಪಾತ್‌’.

ಬೀದಿ ಮಕ್ಕಳು ಮತ್ತು ಜನರ ಬದುಕನ್ನು ಬಿಂಬಿಸುವ ಕನಸು ಕಿಶನ್‌ ಹೊಂದಿದ್ದಾನೆ. ಚಿತ್ರ ಸೆಪ್ಟೆಂಬರ್‌ನಲ್ಲಿ ಸೆಟ್ಟೇರುವ ಸಾಧ್ಯತೆಗಳಿವೆ. ಚಿತ್ರಕ್ಕೆ ಅವರ ತಾಯಿ ಶ್ರೀಶೈಲಂ ಸಂಗೀತದ ಹೊಣೆ ಹೊತ್ತಿದ್ದಾರೆ. ನಿರ್ದೇಶನದ ಜೊತೆಗೆ ಕಿಶನ್‌ ಚಿತ್ರದಲ್ಲಿ ನಟಿಸುತ್ತಿದ್ದಾನೆ.

ಆದಾಯ ತೆರಿಗೆ ಇಲಾಖೆಯಲ್ಲಿ ಕಾರ್ಯ ನಿರ್ವಹಿಸುವ ಶ್ರೀಕಾಂತ್‌ ಅವರ ಪುತ್ರ ಮಾಸ್ಟರ್‌ ಕಿಶನ್‌ಗೆ ಬಣ್ಣದ ಹುಚ್ಚು ಮಾತ್ರವಲ್ಲ, ಓದಿನಲ್ಲೂ ಸಹಾ ಮುಂದಿದ್ದಾನೆ. ಕಂಪ್ಯೂಟರ್‌ ಎಂದರೆ ಆತನಿಗೆ ನೀರು ಕುಡಿದಷ್ಟು ಸಲೀಸು.

‘ಪಾಪ ಪಾಂಡು’ ಸೀರಿಯಲ್‌ನಲ್ಲಿ ಮಾತಿನ ಮಲ್ಲ ಮಾಸ್ಟರ್‌ ಹಿರಣ್ಣಯ್ಯ ಅವರ ಮೊಮ್ಮಗ ಪುಂಡನ ಪಾತ್ರದಲ್ಲಿ ಕಿಶನ್‌ ನಟಿಸಿದ್ದ. ಪಾಂಡು ಮತ್ತು ಪಾಚುವನ್ನು ಕಿಶನ್‌ ಕಾಡಿಸಿದ ಬಗೆ ಕಂಡು ಕಿರುತೆರೆ ವೀಕ್ಷಕರು ಹೊಟ್ಟೆ ತುಂಬಾ ನಕ್ಕಿದ್ದರು. ಕಿರುತೆರೆ ಮತ್ತು ಬೆಳ್ಳಿತೆರೆಯಲ್ಲಿ ಬಾಲನಟನಾಗಿ ಈಗಾಗಲೇ ಮಿಂಚಿರುವ ಕನ್ನಡದ ಕಂದ ಕಿಶನ್‌ಗೆ ಬೆಸ್ಟ್‌ ಆಫ್‌ ಲಕ್‌ ಎನ್ನೋಣವೇ?

Post your views

ಮುಖಪುಟ / ಸ್ಯಾಂಡಲ್‌ವುಡ್‌

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada