ಅಮಿತಾಭ್-ಜಯಾ ಆಸ್ತಿ 227 ಕೋಟಿ ರೂ. ಮಾತ್ರ!
ಲಖನೌ : ಬಾಲಿವುಡ್‌ನ ಹೆಸರಾಂತ ನಟ ಅಮಿತಾಭ್ ಮತ್ತು ಅವರ ಪತ್ನಿ ಜಯಾಬಚ್ಚನ್, ಕೇವಲ 227 ಕೋಟಿ ರೂ. ಆಸ್ತಿಯನ್ನು ಹೊಂದಿದ್ದಾರೆ!
ರಾಜ್ಯಸಭೆ ಚುನಾವಣೆಗೆ ಸ್ಪರ್ಧಿಸಲು ನಾಮಪತ್ರ ಸಲ್ಲಿಸಿರುವ ಜಯಾ ಬಚ್ಚನ್, ಚುನಾವಣಾ ಆಯೋಗಕ್ಕೆ ತಮ್ಮ ಆಸ್ತಿಯ ಬಗ್ಗೆ ಮಾಹಿತಿ ನೀಡಿದ್ದಾರೆ. ಅಮಿತಾಭ್‌ರ 190 ಕೋಟಿ ರೂ., ಜಯಾರ 37 ಕೋಟಿ ರೂ. ಸೇರಿದಂತೆ ಒಟ್ಟಾರೆ 227 ಕೋಟಿ ರೂ. ಮೌಲ್ಯದ ಆಸ್ತಿಯನ್ನು ಈ ದಂಪತಿಗಳು ಹೊಂದಿದ್ದಾರೆ.
ಅಮಿತಾಭ್ ಷೇರು ಮಾರುಕಟ್ಟೆಯಲ್ಲಿ 134 ಕೋಟಿ ರೂ. ಹೂಡಿಕೆ ಮಾಡಿದ್ದಾರೆ. ಅವರ ಬಳಿ 2.91 ಕೋಟಿ ರೂ. ಮೌಲ್ಯದ ಒಡವೆಗಳಿವೆ. ಟೊಯಾಟಾ ಲ್ಯಾಂಡ್ ಕ್ರೂಸರ್, ಮರ್ಸಿಡಿಸ್ ಬೆಂಝ್, ಬಿಎಂಡಬ್ಲ್ಯೂ ಸೇರಿದಂತೆ ಹನ್ನೊಂದು ಐಷಾರಾಮಿ ಕಾರುಗಳನ್ನು ಅವರು ಹೊಂದಿದ್ದಾರೆ.
(ಏಜನ್ಸೀಸ್)
Post your views
ಮುಖಪುಟ / ಸ್ಯಾಂಡಲ್‌ವುಡ್


Click it and Unblock the Notifications