»   » ನನ್ನ ಮಗಳ ಮೂಲಕ ಅಪ್ಪಾಜಿಯ ನಿತ್ಯ ದರ್ಶನ : ಪುನೀತ್‌ ಮನದಾಳ

ನನ್ನ ಮಗಳ ಮೂಲಕ ಅಪ್ಪಾಜಿಯ ನಿತ್ಯ ದರ್ಶನ : ಪುನೀತ್‌ ಮನದಾಳ

Subscribe to Filmibeat Kannada

ರಾಜ್‌ಕುಮಾರ್‌ ಬಗ್ಗೆ ‘ರೂಪತಾರ’ದ ಸಂಪಾದಕ ಮತ್ತು ಸಿನಿಮಾ ಪತ್ರಕರ್ತ ಬಿ.ಗಣಪತಿ ಬರೆದ ಪುಸ್ತಕ ‘ಕನ್ನಡದ ಮುತ್ತಿನ ಕತೆ’ಇತ್ತೀಚೆಗಷ್ಟೇ ಬಿಡುಗಡೆಯಾಯಿತು. ರಾಜ್‌ರೊಂದಿಗೆ ಸಾಕಷ್ಟು ಒಡನಾಟ ಹೊಂದಿದ್ದ ಅವರು, ತಮ್ಮ ಪುಸ್ತಕದಲ್ಲಿ ರಾಜ್‌ರ ಸಮೀಪ ದರ್ಶನವನ್ನು ಓದುಗರಿಗೆ ನೀಡಿದ್ದಾರೆ. ಇನ್ನಷ್ಟು ಸಮೀಪ ದರ್ಶನ ನೀಡುವ ಉದ್ದೇಶ ಪುನೀತ್‌ ರಾಜ್‌ಕುಮಾರ್‌ ಅವರಿಗಿದೆ.

ಈ ನಿಟ್ಟಿನಲ್ಲಿ ಪುನೀತ್‌, ಕಾರ್ಯಪ್ರವೃತ್ತರಾಗಿದ್ದಾರೆ. ರಾಜ್‌ ಸಾಧನೆ ಪ್ರತಿಬಿಂಬಿಸುವ ಪುಸ್ತಕವನ್ನು ಇಂಗ್ಲಿಷ್‌ನಲ್ಲಿ ಅವರು ಹೊರತರಲು ನಿರ್ಧರಿಸಿದ್ದಾರೆ. ರಾಜ್‌ರ ಅಪರೂಪದ ಫೋಟೊಗಳಿಗಾಗಿ ಅವರು ಅಲ್ಲಲ್ಲಿ ಹುಡುಕಾಟ ನಡೆಸಿದ್ದಾರೆ.

‘ಅಜಯ್‌’ ಚಿತ್ರದ ಯಶಸ್ಸಿನ ಹಿನ್ನೆಲೆ ನಡೆದ ಪಾರ್ಟಿಯಲ್ಲಿ ಸುದ್ದಿಗಾರರೊಂದಿಗೆ ಅವರು, ತಮ್ಮ ಪ್ರಯತ್ನದ ಬಗ್ಗೆ ಮಾತನಾಡಿದರು. ಅವರ ಮಾತಲ್ಲಿ ರಾಜ್‌ ನೆನಪು ಹೊರಹೊಮ್ಮುತ್ತಿತ್ತು.

‘ನನ್ನ ಅಪ್ಪನನ್ನು ಮರೆಯುವುದು ಅಸಾಧ್ಯದ ಮಾತು. ನನ್ನ ಮೂರು ವರ್ಷದ ಹಿರಿಯ ಮಗಳು ತಾತಾ ಮತ್ತೆ ಬರಲಿ ಎಂದು ಅಳುತ್ತಾ ಕೂರುತ್ತಾಳೆ. ನನ್ನ ಚಿಕ್ಕಮಗಳ(ವಯಸ್ಸು -28 ದಿನ)ಲ್ಲಿಯೇ ಅಪ್ಪನನ್ನು ಕಾಣುತ್ತಿದ್ದೇನೆ. ಯುವಕರು ತಮ್ಮ ತಂದೆತಾಯಿ ಬಗ್ಗೆ ಕಾಳಜಿ ತೋರಿಸಬೇಕು’ ಎಂದು ಪುನೀತ್‌ ಹೇಳಿದರು.

ಪುಸ್ತಕ ಬೇಕೆ? : ರಾಜ್‌ ಬಗ್ಗೆ ಪತ್ರಕರ್ತ ಗಣಪತಿ ಬರೆದಿರುವ ಪುಸ್ತಕ ಎಲ್ಲೆಡೆ ಲಭ್ಯವಿದೆ. ಆಸಕ್ತರು ಗಣಪತಿ ಅವರ ಮೊಬೈಲ್‌ ಸಂಖ್ಯೆ 98452 43287 ಸಂಪರ್ಕಿಸಬಹುದು.

Post your views

ಮುಖಪುಟ / ಸ್ಯಾಂಡಲ್‌ವುಡ್‌

Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada