»   » ತಂತ್ರಜ್ಞ ಕಮಲ ಹಾಸನ್‌ರ ಪಂಚತಂತ್ರ

ತಂತ್ರಜ್ಞ ಕಮಲ ಹಾಸನ್‌ರ ಪಂಚತಂತ್ರ

Posted By: Staff
Subscribe to Filmibeat Kannada

ಕಚಗುಳಿಗೂ ಕಮಲ ಹಾಸನ್‌ಗೂ ಅವಿನಾಭಾವ ಸಂಬಂಧ. ಕಮಲ್‌ ಉಕ್ಕಿಸಿರುವ ನಗೆಬುಗ್ಗೆಯಲ್ಲಿ ತೋಯದ ಅಭಿಮಾನಿಗಳು ಕಡಿಮೆಯೇ. ಅಪೂರ್ವ ಸಹೋದರರ್‌ಗಳ್‌, ಪುಷ್ಪಕ ವಿಮಾನ, ಅವ್ವೆ ೖ ಷಣ್ಮುಗಿ, ತೆನಾಲಿ, ಪಂಬಲ್‌ ಕೆ ಸಂಬಂಧಮ್‌- ಇವೆಲ್ಲ ಚಿತ್ರಗಳು ಪ್ರೇಕ್ಷಕನನ್ನು ತೆಕ್ಕೆಗೆ ತೆಗೆದುಕೊಂಡಿವೆ. ಗಲ್ಲಾ ಪೆಟ್ಟಿಗೆ ತುಂಬಿಸಿವೆ. ಇದೀಗ ಅದೇ ಫಾರ್ಮ್ಯುಲಾಗೆ ಹೊಸ ಬಣ್ಣ ಕೊಟ್ಟು, ವಿವಿಧ ಭಾಷಾ ತಾರೆಗಳನ್ನು ಸೇರಿಸಿಕೊಂಡಿರುವ ಚಿತ್ರ ಪಂಚತಂತ್ರಂ.

ಈ ಚಿತ್ರದ ಪ್ರಚಾರದ ಭರಾಟೆಗೆ ಬೆಂಗಳೂರಿನ ಪ್ಲಾನೆಟ್‌ ಎಂ ಹಾಗೂ ಅರ್ಬನ್‌ ಎಡ್ಜ್‌ನಲ್ಲಿ ಸುತ್ತು ಹೊಡೆದ ಪಂಚತಂತ್ರಂ ತಂಡದ ಪ್ರಚಾರದ ತಂತ್ರ ಬಲು ಜೋರು. ಕಮಲ್‌ ಜೊತೆಗೆ ಕನ್ನಡದ ರಮೇಶ್‌, ತಮಿಳಿನ ಯೂಗಿ ಸೇತು, ಮಲೆಯಾಳಿ ಜಯರಾಂ, ತೆಲುಗು ಬಿಡ್ಡ ಶ್ರೀಮಾನ್‌, ಬಹುಭಾಷಾ ತಾರೆಯರಾದ ಸಿಮ್ರಾನ್‌ ಹಾಗೂ ರಮ್ಯಕೃಷ್ಣ ಈ ಚಿತ್ರದಲ್ಲಿ ನಟಿಸಿರುವುದೂ ಪ್ರೇಕ್ಷಕರ ಸೆಳೆಯುವ ಪಂಚತಂತ್ರಗಳಲ್ಲೊಂದು !

ಒರಿಜಿನಲ್‌ ಪಂಚತಂತ್ರದ ಮಿತ್ರಭೇದದ ಅಧ್ಯಾಯವೇ ಚಿತ್ರದ ವಸ್ತು. ಆಧುನಿಕ ಸೆಳಕಿಗೆ ಫ್ರೆಂಚ್‌ ಗಡ್ಡ, ಪುರ್‌ ಪುರ್ಲ ಕೂದಲು, ನಿಲುವಂಗಿ ಎಲ್ಲ ಉಂಟು. ಗ್ಲ್ಯಾಮರ್‌ಗೆ ರಮ್ಯಕೃಷ್ಣ ಹಾಗೂ ಸಿಮ್ರಾನ್‌ ಬಣ್ಣ ಇದ್ದೇ ಇದೆ. ತಮ್ಮ ವೈಯಕ್ತಿಕ ಜೀವನಕ್ಕೇ ಕೈಹಾಕುತ್ತಾರೆಂದು ಆರೋಪಿಸಿ ಈಚೀಚೆಗೆ ಕಮಲ್‌ ಪತ್ರಕರ್ತರನ್ನು ದೂರ ಇಟ್ಟಿದ್ದರು. ಆದರೆ ಈಗ ತಮ್ಮ ತಂತ್ರ ಬದಲಿಸಿದ್ದಾರೆ. ಆದರೆ, ಮೊದಲೇ ಕೇಳಿಕೊಳುತ್ತಾರೆ- ನೋ ಕ್ವೆಶ್ಚನ್ಸ್‌ ಆನ್‌ ಮೈ ಪರ್ಸನಲ್‌ ಲೈಫ್‌. ಅವರಿಗೀಗ ಪತ್ರಕರ್ತರು ಬೇಕು. ಯಾಕೆಂದರೆ, ಪಂಚತಂತ್ರಂ ಜೂನ್‌ ತಿಂಗಳಲ್ಲೇ ಬಿಡುಗಡೆಯಾಗಲಿದೆ. ಏನೇ ಆಗಲಿ, ತಂತ್ರಗಳಲ್ಲಿ ಕಮಲ್‌ ಚಾಲಾಕಿ ಅನ್ನುವುದರಲ್ಲಿ ಅನುಮಾನವೇ ಬೇಡ !

English summary
Kamal Hassan in Bangalore to promote Panchatantra
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada