»   » ಮೀಸೆ ವಿಷ್ಣುವರ್ಧನ್‌ಗೆ ಮೈಸೂರು ಪೇಟ

ಮೀಸೆ ವಿಷ್ಣುವರ್ಧನ್‌ಗೆ ಮೈಸೂರು ಪೇಟ

Subscribe to Filmibeat Kannada

*ದಟ್ಸ್‌ಕನ್ನಡ ಬ್ಯೂರೋ

ಮೀಸೆ ಫೇಮ್‌ನ ವಿಷ್ಣು ವರ್ಧನ್‌ಗೆ ಜುಲೈ ತಿಂಗಳು ಡಬ್ಬಲ್‌ ಧಮಾಕ- ಜುಲೈ 6ನೇ ತಾರೀಕು ಅಶೋಕ ಹೊಟೇಲಲ್ಲಿ Great Son of Karnataka ಪ್ರಶಸ್ತಿ. ಜುಲೈ 9ನೇ ತಾರೀಕು ಕನ್ನಡ ಸಿನಿಮಾ ಸಂಪರ್ಕಾಧಿಕಾರಿಗಳ ಸಂಘದ ಸಮ್ಮಾನ. ಈ ಸಮಾರಂಭ ರವೀಂದ್ರ ಕಲಾಕ್ಷೇತ್ರದಲ್ಲಿ ಜೋರಾಗಿ ನಡೆಯಲಿದೆ.

ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದವರನ್ನು Great Son/daughter of Karnataka ಗೌರವಕ್ಕೆ ಆಯ್ಕೆ ಮಾಡಲಾಗಿದ್ದು, ಅಖಿಲ ಭಾರತ ಬುದ್ಧಿಜೀವಿಗಳ ಒಕ್ಕೂಟ ಅರ್ಹರನ್ನು ಹೆಕ್ಕಿದೆ. ಇವರಿಗೆ ಸಿನಿಮಾ ಕ್ಷೇತ್ರದಲ್ಲಿ ಅರ್ಹರೆನಿಸಿದ ಸಾಧಕ ವಿಷ್ಣುವರ್ಧನ್‌. ಉಳಿದಂತೆ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿ, ಗೌರವಕ್ಕೆ ಆಯ್ಕೆಯಾದವರು ಇಂತಿದ್ದಾರೆ-
ಬಾಹ್ಯಾಕಾಶ ವಿಜ್ಞಾನ - ಡಾ. ಕೆ. ಕಸ್ತೂರಿ ರಂಗನ್‌
ಕ್ರೀಡೆ- ಅನಿಲ್‌ ಕುಂಬ್ಳೆ
ಮಹಿಳಾ ಕಲ್ಯಾಣ- ಸಚಿವೆ ಮೋಟಮ್ಮ
ವೈದ್ಯಕೀಯ- ಕಣ್ಣು ಶಸ್ತ್ರಚಿಕಿತ್ಸಕ ಪ್ರೊ. ಅಪ್ಪಾಜಿ ಗೌಡ
ತೋಟಗಾರಿಕೆ- ಕೆ.ಎಸ್‌.ಚಂದ್ರು
ಮರ ವಿಜ್ಞಾನ- ಡಾ.ಕೆ.ಸತ್ಯನಾರಾಯಣ ರಾವ್‌
ಶಿಕ್ಷಣ- ಡಾ.ಎಚ್‌.ನರಸಿಂಹಯ್ಯ
ಪೊಲೀಸ್‌- ಟಿ.ಶ್ರೀನಿವಾಸುಲು
ಜೈವಿಕ ತಂತ್ರಜ್ಞಾನ- ಡಾ.ಕಿರಣ್‌ ಮಜುಂದಾರ್‌
ಶಿಕ್ಷಣ ತಜ್ಞೆ- ಎಸ್‌.ಎಸ್‌.ಬಾನು
ಮುಕ್ತ ಶಿಕ್ಷಣ- ಕೆ.ವೆಂಕಟರಮಣ ಗೌಡ.

ಜುಲೈ 9ನೇ ತಾರೀಕು ಸಂಜೆ ರವೀಂದ್ರ ಕಲಾಕ್ಷೇತ್ರದಲ್ಲಿ ವಿಷ್ಣುಗೆ ಜೋರು ಸನ್ಮಾನ. ಕನ್ನಡ ಸಿನಿಮಾ ಸಂಪರ್ಕಾಧಿಕಾರಿ ರಾಮಕೃಷ್ಣ ಅವರು ಈ ಸಮ್ಮಾನ ಮಾಡುವ ಐಡಿಟಾ ಕೊಟ್ಟರು. ಇತರೆ ಪಿರ್‌ಓಗಳಾದ ಡಿ.ವಿ.ಸುಧೀಂದ್ರ, ನಾಗೇಂದ್ರ, ವಿಜಯಕುಮಾರ್‌, ಲಿಂಗರಾಜ್‌ ಮೊದಲಾದವರು ಸನ್ಮಾನ ಸಮಾರಂಭಕ್ಕೆ ಬೆಂಬಲ ಸೂಚಿಸಿದರು. ಅವತ್ತು ನಡೆಯಲಿರುವ ಅದ್ಧೂರಿ ಸಮಾರಂಭದ ಅಧ್ಯಕ್ಷತೆಯನ್ನು ಡಾ. ಸೂರಜ್‌ ಭಾನ್‌ ವಹಿಸಲಿದ್ದಾರೆ. ಅಂದು ವಿಷ್ಣುವರ್ಧನ್‌ಗೆ ಮೈಸೂರು ಪೇಟ ಹಾಕಿ, ಗಂಧದ ಹಾರ ತೊಡಿಸಿ, ಸ್ಮರಣಾ ಫಲಕ ಕೊಡಲಾಗುವುದು.

ಸುಮಾರು ಹತ್ತು ವಾಗ್ಮಿಗಳು ಸಮಾರಂಭದಲ್ಲಿ ಮಾತಾಡಲಿದ್ದು, ಚಿತ್ರನಟ ರಮೇಶ್‌ ಕಾರ್ಯಕ್ರಮದ ಉದ್ಘಾಟನಾ ಭಾಷಣ ಮಾಡಲಿರುವುದು ವಿಶೇಷ.

Post Your Views

ಮುಖಪುಟ / ಸ್ಯಾಂಡಲ್‌ವುಡ್‌

Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada