»   » ‘ಗಾಡ್‌ ಫಾದರ್‌’ ಬ್ರಾಂಡೊ ಇನ್ನಿಲ್ಲ

‘ಗಾಡ್‌ ಫಾದರ್‌’ ಬ್ರಾಂಡೊ ಇನ್ನಿಲ್ಲ

Posted By: Staff
Subscribe to Filmibeat Kannada
Marlon Brando
ಲಾಸ್‌ ಏಂಜಲಿಸ್‌ : 'ಗಾಡ್‌ ಫಾದರ್‌" ಖ್ಯಾತಿಯ ಜಾಗತಿಕ ಮನ್ನಣೆಯ ಹಾಲಿವುಡ್‌ ನಟ ಮಾರ್ಲನ್‌ ಬ್ರಾಂಡೊ ಇನ್ನಿಲ್ಲ . ಅವರಿಗೆ 80 ವರ್ಷ ವಯಸ್ಸಾಗಿತ್ತು .

ಲಾಸ್‌ ಏಂಜಲಿಸ್‌ ಆಸ್ಪತ್ರೆಯಲ್ಲಿ ಮಾರ್ಲನ್‌ ಬ್ರಾಂಡೊ ನಿಧನರಾದರು (ಜುಲೈ 1) ಎಂದು ಅಟಾರ್ನಿ ಡೇವಿಡ್‌ ಸೀಲಿ ಜುಲೈ 2 ರಂದು ತಿಳಿಸಿದ್ದಾರೆ. ಅತ್ಯಂತ ಖಾಸಗಿ ಜೀವನ ನಡೆಸುತ್ತಿದ್ದ ಬ್ರಾಂಡೊ ತಮ್ಮ ಕಾಲದ ವಿಶ್ವಶ್ರೇಷ್ಠ ನಟ ಎಂದು ಪ್ರಖ್ಯಾತರಾಗಿದ್ದರು.

ದಿ ಗಾಡ್‌ ಫಾದರ್‌, ಎ ಸ್ಟ್ರೀಟ್‌ ಕಾರ್‌ ನೇಮ್ಡ್‌ ಡಿಸೈರ್‌, ಆನ್‌ ದಿ ವಾಟರ್‌ಫ್ರಂಟ್‌ ಮುಂತಾದ್‌ ಅದ್ಭುತ ಚಿತ್ರಗಳಲ್ಲಿ ಬ್ರಾಂಡೊ ನಟಿಸಿದ್ದರು. ಗಾಡ್‌ಫಾದರ್‌ ಚಿತ್ರದಲ್ಲಿನ ಡಾನ್‌ ಪಾತ್ರದಲ್ಲಿ ಅವರ ನಟನೆ ಅವಿಸ್ಮರಣೀಯ. ತಮ್ಮ ಅದ್ಭುತ ಅಭಿನಯಕ್ಕಾಗಿ ಬ್ರಾಂಡೊ ಎರಡು ಬಾರಿ ಆಸ್ಕರ್‌ ಪ್ರಶಸ್ತಿ ಪಡೆದಿದ್ದಾರೆ.

ಬ್ರಾಂಡೊ ನಿಧನಕ್ಕೆ ಅಮೆರಿಕದಲ್ಲಿನ ಭಾರತೀಯರು ಕಂಬನಿ ಮಿಡಿದಿದ್ದಾರೆ.(ಏಜನ್ಸೀಸ್‌)

English summary
Marlon Brando, who revolutionised American acting with his method performances in Streetcar Named Desire and On the Waterfront and went on to create the iconic characterisation of Don Vito Corleone in The Godfather, has died. He was 80
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada