»   » ಇದು ‘ರಮ್ಯ’ ಮನೋಹರ ಲೀಲೆ

ಇದು ‘ರಮ್ಯ’ ಮನೋಹರ ಲೀಲೆ

Posted By:
Subscribe to Filmibeat Kannada

*ದಟ್ಸ್‌ಕನ್ನಡ ಬ್ಯೂರೋ

ನಿಮ್ಮ ವಯಸ್ಸೆಷ್ಟು ಅಂತ ಚಿರ ಯೌವನೆ ರಮ್ಯಕೃಷ್ಣ ಅವರನ್ನು ಕೇಳಿ, ಖರೆ ಉತ್ತರ ಪಡೆದವರಿಗೆ ಭಾರೀ ಬಹುಮಾನವುಂಟು !
ಇಂಥ ಯಾವ ಆಮಿಷ ಕೂಡ ಸರಿಯಾದ ಉತ್ತರ ಪತ್ತೆ ಮಾಡಲಾರದೇನೋ? ಯಾಕೆಂದರೆ, ರಮ್ಯಕೃಷ್ಣ ವಯಸ್ಸಿಗೆ ತದ್ವಿರುದ್ಧವಾಗಿ ಬೆಳೆಯುತ್ತಿದ್ದಾರೆ (!) ಹಾಗೂ ವರ್ತಿಸುತ್ತಿದ್ದಾರೆ.

ರವಿಚಂದ್ರನ್‌ ‘ಏಕಾಂಗಿ’ ಚಿತ್ರ ನೋಡಿದ ಅನೇಕರು ‘ಈಯಮ್ಮನಿಗೆ ವಯಸ್ಸಾಯಿತು, ಸಾಕುಸಾಕಾಯಿತು’ ಅಂತ ಕಾಮೆಂಟ್‌ ಮಾಡಿದ್ದರು. ಉಪೇಂದ್ರ ‘ರಕ್ತ ಕಣ್ಣೀರು’ ಚಿತ್ರದ ತಣ್ಣೀರು ಅಭಿಷೇಕಕ್ಕೆ ಈಕೆಯನ್ನೇ ಆರಿಸಿಕೊಂಡಾಗಲೂ ಅಭಿಮಾನಿಗಳು ಅಸಮಾಧಾನ ವ್ಯಕ್ತಪಡಿಸಿದ್ದರು. ಆದರೆ, ಉಪ್ಪಿ ರಮ್ಯಕೃಷ್ಣರನ್ನು ಅಕ್ಷರಶಃ ಹಿಂಡಿ ಹಾಕಿದ್ದಾರೆ ! ರಮ್ಯಕೃಷ್ಣ ಸೆಕ್ಸಿಯೆಸ್ಟ್‌ ಸುಂದರಿ ಎಂಬ ಬಿರುದಿಗೆ ಮತ್ತೆ ಭಾಜನರಾಗಲು ‘ರಕ್ತ ಕಣ್ಣೀರು’ ಚಿತ್ರದ ಒಂದೇ ಒಂದು ಹಾಡು ಸಾಕು.

ದಶಕಗಳಿಂದ ಎಲ್ಲಾ ಪಾತ್ರಗಳಿಗೂ, ಎಲ್ಲಾ ಉಡುಗೆ- ತೊಡಿಗೆಗೂ ಮುಕ್ತವಾಗಿ ಮೈಯಾಡ್ಡಿಕೊಂಡು ಬಂದಿರುವ ರಮ್ಯಕೃಷ್ಣ ಅವರಿಗೆ ಈಗ ಇನ್ನೊಂದು ಚಾಲೆಂಜಿಂಗ್‌ ಮತ್ತು ಸೆಕ್ಸಿಯೆಸ್ಟ್‌ ಪಾತ್ರ ಸಿಕ್ಕಿದೆ. ಹಿರಿಯ ತಮಿಳು ತಲೆ ಬಾಲು ಮಹೇಂದ್ರನ್‌ ಚಿತ್ರ ಇದು ಅನ್ನೋದು ಅಗ್ಗಳಿಕೆ. ‘ಅತು ಒರು ಕಣಾ ಕಾಲಂ’ ಎಂಬುದು ಚಿತ್ರದ ಹೆಸರು. ತನಗಿಂತ 15 ವರ್ಷ ದೊಡ್ಡ ಹೆಂಗಸಿನ ಪ್ರೀತಿಯಲ್ಲಿ ಬೀಳುವ ಹುಡುಗನ ಕನಸುಗಳ ಸುತ್ತ ಗಿರಕಿ ಹೊಡೆಯುವ ಕಥಾನಕದ ಈ ಚಿತ್ರ ಸೆಟ್ಟೇರುವ ಮುನ್ನವೇ ಸಾಕಷ್ಟು ಮಂದಿಯ ಹುಬ್ಬೇರಿಸಿದೆ.

ಚಿಗುರು ಮೀಸೆಯ ಹುಡುಗ ಧನುಶ್‌ ಎಂಬಾತ ರಮ್ಯಕೃಷ್ಣಗೆ ಈ ಚಿತ್ರದಲ್ಲಿ ಜೋಡಿ. ಪುಟ್ಟ ಹುಡುಗನ ಜೊತೆ ಸರಸ ಅಂದರೆ ನಿಮಗೆ ನಾಚಿಕೆಯಾಗೋಲ್ವ ರಮ್ಯ ಅಂತ ಕೇಳಿದರೆ, ‘ಹಂಗಂದ್ರೇನು’ ಅಂತ ತುಂಟ ನಗೆ ನಗುತ್ತಾರೆ ರಮ್ಯ.

Post your views

ಮುಖಪುಟ / ಸ್ಯಾಂಡಲ್‌ವುಡ್‌

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada