»   » ಜಯಮಾಲಾ ಮೇಡಂ, ನಮ್ಮ ಚಿತ್ರಕ್ಕೂ ಸಬ್ಸಿಡಿ ಕೊಡ್ರಿ...

ಜಯಮಾಲಾ ಮೇಡಂ, ನಮ್ಮ ಚಿತ್ರಕ್ಕೂ ಸಬ್ಸಿಡಿ ಕೊಡ್ರಿ...

Posted By:
Subscribe to Filmibeat Kannada

ಬೆಂಗಳೂರು : ಸಹಾಯ ಧನಕ್ಕೆ ಯೋಗ್ಯವಾದ 20ಚಲನಚಿತ್ರಗಳನ್ನು ಆಯ್ಕೆ ಮಾಡಲು ರಾಜ್ಯ ಸರ್ಕಾರ ಹಿರಿಯ ನಟಿ ಜಯಮಾಲಾ ಅಧ್ಯಕ್ಷತೆಯಲ್ಲಿ ಆಯ್ಕೆ ಸಮಿತಿಯನ್ನು ರಚಿಸಿದೆ.

2004-05ನೇ ಸಾಲಿನಲ್ಲಿ ಬಿಡುಗಡೆಗೊಂಡ ಕನ್ನಡ ಚಲನಚಿತ್ರಗಳಲ್ಲಿ 20 ಚಿತ್ರಗಳಿಗೆ ಸರ್ಕಾರ 10ಲಕ್ಷ ರೂ. ಸಹಾಯಧನ ನೀಡಲು, ಈ ಆಯ್ಕೆ ಸಮಿತಿಯನ್ನು ರಚಿಸಿದೆ. ಈ ಬಗ್ಗೆ ಅಧಿಕೃತ ಪ್ರಕಟಣೆ ಸರ್ಕಾರದಿಂದ ಸೋಮವಾರ ಹೊರಬೀಳಲಿದೆ ಎಂದು ಮೂಲಗಳು ತಿಳಿಸಿವೆ.

ಖ್ಯಾತ ಚಿತ್ರ ನಿರ್ದೇಶಕ ಗೀತಪ್ರಿಯ, ವೈ.ಆರ್‌.ಜಯರಾಜ್‌, ಬಿ.ಎನ್‌.ಚಿಕ್ಕೇಗೌಡ, ಇಟಗಿ ಈರಣ್ಣ, ವಜ್ರಕುಮಾರ ಕಿವಡೆ, ಎಸ್‌.ಎ.ಗೋವಿಂದರಾಜ್‌ ಸೇರಿದಂತೆ ಎಂಟು ಮಂದಿ ಸದಸ್ಯರ ಈ ಆಯ್ಕೆ ಸಮತಿಯಲ್ಲಿ ವಾರ್ತಾ ಇಲಾಖೆಯ ಆಯುಕ್ತರು ಕಾರ್ಯದರ್ಶಿಯಾಗಿರುತ್ತಾರೆ.

(ಏಜನ್ಸೀಸ್‌)

Post your views

ಪೂರಕ ಮಾಹಿತಿಗೆ :
2003-04ನೇ ಸಾಲಿನಲ್ಲಿ ಸಬ್ಸಿಡಿ ಗಿಟ್ಟಿಸಿದ ಚಿತ್ರಗಳು


ಮುಖಪುಟ / ಸ್ಯಾಂಡಲ್‌ವುಡ್‌

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada