»   » ‘ಸಂಜನಾ’ ಎಂಬ ಕನ್ನಡದ ಮಲ್ಲಿಕಾ ಶೆರಾವತ್‌!

‘ಸಂಜನಾ’ ಎಂಬ ಕನ್ನಡದ ಮಲ್ಲಿಕಾ ಶೆರಾವತ್‌!

Subscribe to Filmibeat Kannada

‘ಸಂಜನಾ’ ಎನ್ನುವುದು ಸ್ಯಾಂಡಲ್‌ವುಡ್‌ನಲ್ಲಿ ಇಂದು ಸಕತ್‌ ಹಾಟ್‌ ನೇಮ್‌! ಕನ್ನಡದ ಮಲ್ಲಿಕಾ ಶೆರಾವತ್‌ ಎಂದೇ ಪತ್ರಕರ್ತರು ಪ್ರೀತಿಯಿಂದ ಸಂಬೋಧಿಸುವ ಈ ಸಂಜನಾಗೆ ಈಗ ಹಿಂದಿ, ತೆಲುಗು ಮತ್ತು ತಮಿಳಿನಿಂದಲೂ ಅವಕಾಶಗಳು ಬರುತ್ತಿವೆ.

‘ಗಂಡ ಹೆಂಡತಿ’ ಚಿತ್ರದಲ್ಲಿನ ತನ್ನ ಪಾತ್ರದ ಬಗ್ಗೆ ಯಾವುದೇ ಅಳುಕಿಲ್ಲದೇ ಮಾತನಾಡುವ ಸಂಜನಾ, ‘ಅದೊಂದು ಅನಿವಾರ್ಯ. ಕೆಲಸದ ಒಂದು ಭಾಗ. ಕತೆಗೆ ಆ ದೃಶ್ಯ ಅನಿವಾರ್ಯವಾಗಿತ್ತು. ಆ ಪಾತ್ರವನ್ನು ನಾನು ನಿರ್ವಹಿಸಿದ್ದೇನೆ ಅಷ್ಟೆ. ಆದರೂ ಚಿತ್ರದಲ್ಲಿ ಕಿಸ್ಸಿಂಗ್‌ ಮತ್ತು ಬೆಡ್‌ ರೂಮ್‌ ಸನ್ನಿವೇಶದಲ್ಲಿ ಸ್ವಲ್ಪ ಇರುಸು ಮುರುಸಾಯಿತು. ಆದರೂ ಒಂದೇ ಟೇಕ್‌ಗೆ ಓಕೆಯಾಯಿತು’ ಎನ್ನುತ್ತಾಳೆ ಸಂಜನಾ.

ಈ ಚಿತ್ರದ ಬಾಯ್‌ ಫ್ರೆಂಡ್‌ ಪಾತ್ರಧಾರಿ ತಿಲಕ್‌ ಮತ್ತು ಸಂಜನಾ ಮೊದಲಿನಿಂದಲೂ ಗೆಳೆಯರು. ಹೀಗಾಗಿ ದೃಶ್ಯದ ಚಿತ್ರೀಕರಣದಲ್ಲಿ ಸಮಸ್ಯೆ ಉಂಟಾಗಲಿಲ್ಲವಂತೆ! ತನ್ನನ್ನು ಮಲ್ಲಿಕಾ ಶೆರಾವತ್‌ಗೆ ಹೋಲಿಕೆ ಮಾಡುವ ಬಗ್ಗೆ ಸಂಜನಾಗೆ ಸಿಟ್ಟಿದೆ.

‘ನೋಡಿ ನಾನು ಮಲ್ಲಿಕಾ ಶರವತ್ತೂ ಅಲ್ಲ. ಐಶ್ವರ್ಯ ರೈನೂ ಅಲ್ಲ. ನಾನು ಸಂಜನಾ. ನನಗೆ ನನ್ನದೇ ಆದ ವ್ಯಕ್ತಿತ್ವ ಇದೆ. ಅಲ್ಲದೇ ನಾನು ಮಲ್ಲಿಕಾ ಶೆರವತ್‌ನಷ್ಟು ಎಕ್ಸ್‌ಪೋಸ್‌ ಮಾಡೋದಕ್ಕೆ ಸಾಧ್ಯವಿಲ್ಲ. ಅಂಥ ವಾತಾವರಣವೂ ಕರ್ನಾಟಕದಲ್ಲಿಲ್ಲ. ಇಷ್ಟಕ್ಕೂ ಪಾತ್ರಕ್ಕೆ ಪೂರಕ ಅನ್ನಿಸುವುದಾದರೆ ಧಾರಾಳ ತನ ತೋರಿಸಿದರೆ ತಪ್ಪೇನಿಲ್ಲ. ಎಲ್ಲವೂ ಬದಲಾಗುತ್ತಿದೆ. ನಮ್ಮ ಮನಸ್ಥಿತಿಗಳು ಬದಲಾಗಬೇಕು’ ಎಂದು ಕೂತಲ್ಲಿಯೇ ತನ್ನ ಮಾತಿನ ಮೂಲಕ ಸಂಜನಾ ವಿಶ್ವ ಸುತ್ತಿಸುತ್ತಾಳೆ.

ನಾನು ‘ಗಂಡ ಹೆಂಡತಿ’ ಚಿತ್ರದಲ್ಲಿ ಅಂಥ ದೃಶ್ಯಗಳಲ್ಲದೇ, ಭಾವಪೂರ್ಣ ದೃಶ್ಯಗಳಲ್ಲೂ ನಟಿಸಿದ್ದೇನೆ. ಪತ್ರಕರ್ತರ ವಿಮರ್ಶೆಗೆ ಅವೆಲ್ಲವೂ ಕಾಣೋದೇ ಇಲ್ಲ. ಹಳದಿ ಕಣ್ಣೋರಿಗೆ ಕಾಣೋದೆಲ್ಲವೂ ಹಳದಿಯೇ ತಾನೇ ಎಂದು ಪ್ರಶ್ನಿಸುವ ಸಂಜನಾಗೆ ಒಳ್ಳೆ ನಟಿಯಾಗುವ ಆಸೆ ಇದೆ. ರೂಪವಿದೆ. ಪ್ರತಿಭೆಯೂ ಇದೆ. ಸ್ಯಾಂಡಲ್‌ವುಡ್‌ ಸರಿಯಾಗಿ ಬಳಸಿಕೊಳ್ಳಬೇಕಾಷ್ಟೆ.

ರಮ್ಯಾ, ರಕ್ಷಿತಾಗಿಂತಲೂ ಸ್ಪಷ್ಟವಾಗಿ ಕನ್ನಡ ಮಾತನಾಡುವ ಈ ಚೆಲುವೆಗೆ ತನ್ನ ಪಾತ್ರಕ್ಕೆ ತನ್ನದೇ ದನಿ ನೀಡುವ ಬಯಕೆ. ಈಕೆ ಮೂಲ ಹೆಸರು ಅರ್ಚನಾ. ‘ಗಂಡ ಹೆಂಡತಿ’ ಚಿತ್ರದಿಂದ ಸಂಜನಾ ಆದಳು. ಮಾಡೆಲಿಂಗ್‌ನಲ್ಲಿ ಬ್ಯುಸಿಯಾಗಿದ್ದ ಈಕೆಯನ್ನು ಪ್ರೇಕ್ಷಕರ ಮುಂದೆ ನಿಲ್ಲಿಸಿದ್ದು ರವಿ ಶ್ರೀವತ್ಸ.

Post your views

ತನುತನುವಿನಲೂ ಮಜವೊಂದೇ ನಿಜ!
‘ಗಂಡ ಹೆಂಡತಿ’ ಚಿತ್ರಪಟಗಳು
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada