»   » ತನಿಖೆ ಚಿತ್ರದ ಆಲ್ ರೌಂಡರ್ ಗುಲ್ಜಾರ್ ಖಾನ್ ಇನ್ನಿಲ್ಲ

ತನಿಖೆ ಚಿತ್ರದ ಆಲ್ ರೌಂಡರ್ ಗುಲ್ಜಾರ್ ಖಾನ್ ಇನ್ನಿಲ್ಲ

Subscribe to Filmibeat Kannada


ಬೆಂಗಳೂರು, ಸೆಪ್ಟೆಂಬರ್, 03: ‘ತನಿಖೆ’ ಚಿತ್ರದ ನಟ, ನಿರ್ದೇಶಕ, ನಿರ್ಮಾಪಕ, ಗೀತ ರಚನೆಕಾರ, ಛಾಯಾಗ್ರಾಹಕ, ಗಾಯಕ...ಎಲ್ಲವೂ ಆಗಿದ್ದ ಗುಲ್ಜಾರ್ ಖಾನ್ (50) ನಿನ್ನೆ ರಾತ್ರಿ ಹೃದಯಾಘಾತದಿಂದ ಮೃತಪಟ್ಟರು.

‘ತನಿಖೆ’ಚಿತ್ರ ಬಾಕ್ಸ್ ಆಫೀಸ್‌ನಲ್ಲಿ ತೋಪಾದರೂ ಗುಲ್ಜಾರ್ ಖಾನ್‌ನ ಹೆಸರು ಮಾತ್ರ ಗಾಂಧಿನಗರದಲ್ಲಿ ಚಾಲ್ತಿಯಲ್ಲೇ ಇತ್ತು. ಮೂಲತಃ ಕೋಲಾರ ಜಿಲ್ಲೆಯ ಬೇತಮಂಗಲದವರಾದ ಗುಲ್ಹಾರ್ ವೈಟ್‌ಫೀಲ್ಡ್‌ನಲ್ಲಿ ನೆಲೆಸಿದ್ದರು. ಅವರು ಪತ್ನಿ ಹಾಗೂ ಇಬ್ಬರು ಮಕ್ಕಳನ್ನು ಅಗಲಿದ್ದಾರೆ.

ರಿಯಲ್ ಎಸ್ಟೇಟ್ ಉದ್ಯಮದಲ್ಲಿದ್ದ ಅವರು ಒಂದು ಕೊಲೆ ಕೇಸಿನಲ್ಲೂ ಆರೋಪವನ್ನು ಎದುರಿಸುತ್ತಿದ್ದರು. ತೀವ್ರ ಅನಾರೋಗ್ಯಕ್ಕೆ ಗುರಿಯಾಗಿ ಅಪೊಲೋ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಅವರಿಗೆ ಭಾನುವಾರ ರಾತ್ರಿ 10.30ರಲ್ಲಿ ತೀವ್ರ ಹೃದಯಾಘಾತವಾಗಿ ಮೃತಪಟ್ಟರು. ಇಂದು ಅವರ ಅಂತ್ಯಕ್ರಿಯೆಯು ವಿಲ್ಸನ್ ಗಾರ್ಡನ್‌ನ ರುದ್ರಭೂಮಿಯಲ್ಲಿ ನಡೆಯಲಿದೆ.

(ದಟ್ಸ್‌ಕನ್ನಡ ವಾರ್ತೆ)

Please Wait while comments are loading...