»   » ನಟಿ ಶ್ರುತಿ ಟೈಂಪಾಸ್‌ ಹೇಗೆ ಮಾಡುತ್ತಾರೆ ಗೊತ್ತಾ ?

ನಟಿ ಶ್ರುತಿ ಟೈಂಪಾಸ್‌ ಹೇಗೆ ಮಾಡುತ್ತಾರೆ ಗೊತ್ತಾ ?

Posted By: Super
Subscribe to Filmibeat Kannada

'ನಮ್ಮ ಮನೆಯಲ್ಲಿ ಬಿದಿಗೆ ಚಂದ್ರಮ ನಲಿದಾಡುತ್ತಿದೆ. ಆದ್ದರಿಂದ ಹಗಲು ರಾತ್ರಿಯ ವ್ಯತ್ಯಾಸವೇ ಗೊತ್ತಾಗ್ತಿಲ್ಲ" ಹೀಗೆಂದವರು ನಟಿ ಶ್ರುತಿ. ತಮ್ಮ ಟೈಂಪಾಸ್‌ ಕುರಿತು ಶ್ರುತಿ ತಮ್ಮದೇ ಶೈಲಿಯಲ್ಲಿ ಮಾತಿನ ಮಣಿ ಪೋಣಿಸುತ್ತಲೇ ಹೋದರು.

'ಈ ಹಿಂದೆ ಒಂಥರಾ ಟೆನ್ಷನ್‌ ಇತ್ತು . ಬೆಳಗಿನ ಜಾವ ನಾಲ್ಕು ಗಂಟೆಗೇ ಏಳಬೇಕು. ವ್ಯಾಯಾಮ, ಸ್ನಾನ, ಮೇಕಪ್‌ ಶೂಟಿಂಗ್‌ ಹೀಗೆ ಬಿಡುವಿಲ್ಲದ ಶೆಡ್ಯೂಲ್‌. ಆದರೆ ನಮ್ಮ ಪುಟಾಣಿ ಈ ಮನೆಗೆ ಬಂದ ಮೇಲೆ ನಮ್ಮ ಟೈಂಪಾಸ್‌ಗೆ ವಿಶೇಷ ಮಹತ್ವ. ಜೀವನದಲ್ಲೂ ಬಣ್ಣಿಸಲಾಗದ ಸಂತಸದ ಕಾರಂಜಿ. ಬೆಳಗಿನ ಜಾವದ ಸುಪ್ರಭಾತಕ್ಕಿಂತಲೂ... ತೋಟದ ಮನೆಯ ಮುಂದಿರುವ ಮಾವಿನ ಮರದ ಮೇಲಿನ ಕೋಗಿಲೆ ಕುಹೂ ಧ್ವನಿಗಿಂತಲೂ ಅವಳ ಕೂಗು ಚಂದ. ಅದನ್ನು ಕೇಳುತ್ತಲೇ ಬೆಳಗಾಗುತ್ತದೆ. ಸೂರ್ಯ ಮೂಡುವ ಮುನ್ನ ಸ್ನಾನ, ಉಪಾಹಾರ.

ಅಷ್ಟರಲ್ಲೇ ಅವರಪ್ಪ (ಎಸ್‌.ಮಹೇಂದರ್‌) ಹೊರಡಲು ರೆಡಿಯಾಗಿರ್ತಾರೆ. ಇದೆಲ್ಲ ಪುಟ್ಟಿಗೆ ಹೇಗೆ ಅರ್ಥವಾಗುತ್ತದೋ..! ಪಿಳಿ ಪಿಳಿ ಕಣ್ಣು ಬಿಡುತ್ತದೆ. ಅವರಿಗೆ ಎಂಥದೋ ಮುಜುಗರ. ಬಿಟ್ಟು ಹೋಗಲು ಆಗದಂತಹ ಸೆಳೆತ. ಇವರಿಬ್ಬರ ಗೊಂದಲ ನೋಡುವುದೇ ಆನಂದ. ನಂತರ ನಮ್ಮ ತಂದೆ-ತಾಯಿಗಳ ಆಗಮನವಾಗುತ್ತದೆ. ಅವರಿಂದಲೂ ಅವಳದೇ ಆಲಾಪನೆ. ಲಾಲಿ ಹಾಡು. ಪುಟ್ಟಿಯ ನಿದ್ದೆ ಸಮಯ.

ಮಧ್ಯಾಹ್ನ ಸ್ವಲ್ಪ ಸಮಯ. ಆಗಲೇ ನಾನು ರುಚಿ ರುಚಿ ಅಡುಗೆ ಮಾಡುವ ಕನಸು ಕಾಣುತ್ತೇನೆ. ಸಿನಿಮಾ ಹಾಡು ಕೇಳ್ತೀನಿ. ಕಾವ್ಯ, ಕಾದಂಬರಿ ಜೊತೆಗೆ ಜಾನಪದ ಗೀತೆ ಕೇಳುವುದರಲ್ಲೇ ಮನಸಿಗೆ ಖುಷಿ.

ಈ ಎಲ್ಲಾ ಕ್ರಿಯೆಗಳ ನಡುವೆ ಸೂರ್ಯ ಪಶ್ಚಿಮದ ಕಡೆ ವಾಲಿದ್ದೇ ಗೊತ್ತಾಗುವುದಿಲ್ಲ. ಪುಟ್ಟಿ ಎದ್ದವಳೇ ಎಲ್ಲರನ್ನೂ ಚಕಿತಗೊಳಿಸುತ್ತಾಳೆ. ಅಲ್ಲಿ ಅವಳದೇ ಸಾಮ್ರಾಜ್ಯ. ನಮ್ಮೆಜಮಾನರಿಗೆ ಏನಾಸೆಯೋ ಗೊತ್ತಿಲ್ಲ . ಎಷ್ಟೋ ಒತ್ತಡಗಳಿರುತ್ತವೆ. ಎಲ್ಲವನ್ನೂ ಬದಿಗೊತ್ತಿ ಕತ್ತಲಾಗುವುದರೊಳಗೆ ಮನೆಗೆ ಬಂದು ಬಿಡುತ್ತಾರೆ. ನಿಮಗೆ ಅಚ್ಚರಿ ಅನ್ನಿಸಬಹುದು. ನನ್ನನ್ನು ಮಾತನಾಡಿಸುವ ಮುನ್ನ ಪುಟ್ಟಿಯನ್ನು ಅಪ್ಪಿ ಮುದ್ದಾಡುತ್ತಾರೆ!"

ಶೃತಿ ಸೇರಿದಾಗ-

English summary
Sandalwood heroine : Shrutis time passes with her small kid

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada