‘ಮಿ.ಕ್ಯಾಲಿಫೋರ್ನಿಯಾ’ ನಿರ್ದೇಶಕ ಕೋಡ್ಲು ಬಂಧನ

By Staff

ಬೆಂಗಳೂರು : ಗಮನಾರ್ಹ ಚಲನಚಿತ್ರ ನಿರ್ದೇಶಕರಲ್ಲಿ ಒಬ್ಬರಾದ ಕೋಡ್ಲು ರಾಮಕೃಷ್ಣ ಅವರನ್ನು, ಚೆಕ್‌ ಬೌನ್ಸ್‌ ಪ್ರಕರಣದ ಹಿನ್ನೆಲೆಯಲ್ಲಿ ಪೊಲೀಸರು ಬಂಧಿಸಿದ್ದಾರೆ.

2001ರಲ್ಲಿ ಕೋಡ್ಲು ರಾಮಕೃಷ್ಣ, ತುಳು ಚಿತ್ರ ನಿರ್ಮಾಪಕ ಬ್ಲೂ ಮೌಂಟೇನ್‌ ಮ್ಯಾಥ್ಯೂ ಅವರಿಗೆ 5 ಲಕ್ಷ ರೂ. ಚೆಕ್‌ ನೀಡಿದ್ದರು. ಬ್ಯಾಂಕ್‌ನಲ್ಲಿ ಚೆಕ್‌ ಬೌನ್ಸ್‌ ಆಗಿದ್ದರಿಂದ ಬೇಸರಗೊಂಡ ಮೌಂಟೇನ್‌ ಮ್ಯಾಥ್ಯೂ, ದೂರು ನೀಡಿದ್ದರು.

ಈ ಸಂಬಂಧ ಬನಶಂಕರಿ ಪೊಲೀಸರು ಕೋಡ್ಲುರನ್ನು ಬಂಧಿಸಿ, ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ. ನಂತರ ಜಾಮೀನಿನ ಮೇಲೆ ಅವರನ್ನು ಬಿಡುಗಡೆ ಮಾಡಲಾಯಿತು. ಕಳೆದ ಎರಡು ಸಲ ಕೋಡ್ಲು ನೀಡಿದ್ದ ಚೆಕ್‌ ಬೌನ್ಸ್‌ ಆಗಿತ್ತು ಎನ್ನಲಾಗಿದೆ.

ಅಂದ ಹಾಗೆ, ಕೋಡ್ಲು ನಿರ್ದೇಶನದ ಇತ್ತೀಚಿನ ಚಿತ್ರ ‘ಮಿಸ್‌ ಕ್ಯಾಲಿಫೋರ್ನಿಯಾ’ ಕೂಡ ಅವರು ನೀಡಿದ ಚೆಕ್‌ಗಳಂತೆ ಬೌನ್ಸ್‌ ಆಗಿದೆ.

(ದಟ್ಸ್‌ ಕನ್ನಡ ವಾರ್ತೆ)

Post your views

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X