»   » ಗಾಂಧಿನಗರದಿ ಹೋಟೆಲ್‌ ಇಟ್ಟ ಡಾ.ರಾಜ್‌ ಕುಟುಂಬ!

ಗಾಂಧಿನಗರದಿ ಹೋಟೆಲ್‌ ಇಟ್ಟ ಡಾ.ರಾಜ್‌ ಕುಟುಂಬ!

Posted By:
Subscribe to Filmibeat Kannada

ಬೆಂಗಳೂರು : ಡಾ.ರಾಜ್‌ ಕುಟುಂಬ ಚಿತ್ರ ನಿರ್ಮಾಣದ ಜೊತೆಗೆ, ಹೋಟೆಲ್‌ ಉದ್ಯಮವನ್ನೂ ಪ್ರವೇಶಿಸಿದೆ. ಈ ನಿಟ್ಟಿನಲ್ಲಿ ಡಾ.ರಾಜ್‌ ಕುಮಾರ್‌ ಇಂಟರ್‌ ನ್ಯಾಷನಲ್‌ ಹೋಟೆಲ್‌ನ್ನು ಪಾರ್ವತಮ್ಮ ರಾಜ್‌ಕುಮಾರ್‌ ಉದ್ಘಾಟಿಸಿದ್ದಾರೆ.

ಗಾಂಧಿನಗರದಲ್ಲಿ ಸುಮಾರು 5ಕೋಟಿ ವೆಚ್ಚದಲ್ಲಿ ನಿರ್ಮಾಣಗೊಂಡಿರುವ ಈ ಐಷಾರಾಮಿ ಹೋಟೆಲ್‌ನಲ್ಲಿ 51 ಕೊಠಡಿಗಳಿವೆ. ರೆಸ್ಟೋರೆಂಟ್‌, ನಿಸ್ತಂತು ಇಂಟರ್‌ನೆಟ್‌ ಬಳಕೆ, ಸಭಾಂಗಣ ಸೇರಿದಂತೆ ವಿವಿಧ ಆಧುನಿಕ ಸೌಲತ್ತುಗಳನ್ನು, ಐದು ಮಹಡಿಗಳ ಈ ಹೋಟೆಲ್‌ ಹೊಂದಿದೆ.

ಈ ಬಗ್ಗೆ ಮಾಹಿತಿ ನೀಡಿರುವ ನಟ ರಾಘವೇಂದ್ರ ರಾಜ್‌ಕುಮಾರ್‌, ನಮ್ಮ ಕುಟುಂಬದ ಆರ್ಥಿಕ ಅಗತ್ಯತೆಗಳಿಗಾಗಿ ಹೋಟೆಲ್‌ ಉದ್ಯಮದತ್ತ ಬಂದಿದ್ದೇವೆ. ಆದರೆ ಚಿತ್ರ ನಿರ್ಮಾಣವನ್ನು ಯಾವುದೇ ಕಾರಣಕ್ಕೂ ಕೈಬಿಡುವುದಿಲ್ಲ. ಅಪ್ಪಾಜಿ ಹೆಸರಲ್ಲಿ ತಲೆ ಎತ್ತಿರುವ ಹೋಟೆಲ್‌, ಸುಸಜ್ಜಿತವಾಗಿದೆ. ಇಂಥದ್ದೇ ಇನ್ನೊಂದು ಹೋಟೆಲ್‌ನ್ನು ಮೈಸೂರಿನಲ್ಲಿ ನಿರ್ಮಾಣ ಮಾಡುತ್ತೇವೆ ಎಂದರು.

ಹೊಟೇಲ್‌ ಉದ್ಯಮ ರಾಜ್‌ಕುಮಾರ್‌ ಅವರ ಕನಸು ಕೂಡ ಆಗಿತ್ತು. ರಾಜ್‌ ಮಕ್ಕಳು ಈ ಉದ್ಯಮಕ್ಕೆ ಕೈಹಾಕುವ ವಿಚಾರವೆತ್ತಿದ್ದಾಗ, ಬೆನ್ನು ತಟ್ಟಿದ್ದ ರಾಜ್‌, ಉದ್ಯಮದಲ್ಲಿ ಎಷ್ಟೊಂದು ಹಸಿದ ಹೊಟ್ಟೆಗಳಿರುತ್ತವೆ, ಅವರಿಗೆ ಎರಡು ತುತ್ತು ಹಾಕಿದರೂ ನಮ್ಮ ಹೊಟ್ಟೆಯೂ ತಣ್ಣಗಿರುತ್ತದೆ ಎಂದಿದ್ದನ್ನು ರಾಘವೇಂದ್ರ ರಾಜಕುಮಾರ್‌ ಕಾರ್ಯಕ್ರಮವೊಂದರಲ್ಲಿ ಹೇಳಿದ್ದರು. ತಮ್ಮ ಜೊತೆಗೆ ಊಟಕ್ಕೆ ಕುಳಿತರವರಿಗೆ ಜಮಾಯಿಸಿ ತಿನಿಸುವುದರಲ್ಲಿ ತೃಪ್ತಿ ರಾಜ್‌ ಕಾಣುತ್ತಿದ್ದರು.

ನಟ ಶಿವರಾಜ್‌ಕುಮಾರ್‌, ಪುನೀತ್‌ರಾಜ್‌ಕುಮಾರ್‌, ನಿರ್ಮಾಪಕ ರಾಕ್‌ಲೈನ್‌ ವೆಂಕಟೇಶ್‌, ನಿರ್ದೇಶಕ ಭಗವಾನ್‌ ಮತ್ತಿತರರು ಈ ಸಂದರ್ಭದಲ್ಲಿ ಹಾಜರಿದ್ದರು.

(ದಟ್ಸ್‌ ಕನ್ನಡ ವಾರ್ತೆ)

Post your views

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada