»   » ‘ಮರ್ಮ’ ಚಿತ್ರದ ಮೂಲಕ ಪ್ರೇಮಾ ತಮ್ಮ ಒರಿಜಿನಲ್‌ ಕಂಠದ ಮೂಲಕ ಪ್ರೇಕ್ಷಕರಿಗೆ ಪರಿಚಿತರಾಗುತ್ತಿದ್ದಾರೆ

‘ಮರ್ಮ’ ಚಿತ್ರದ ಮೂಲಕ ಪ್ರೇಮಾ ತಮ್ಮ ಒರಿಜಿನಲ್‌ ಕಂಠದ ಮೂಲಕ ಪ್ರೇಕ್ಷಕರಿಗೆ ಪರಿಚಿತರಾಗುತ್ತಿದ್ದಾರೆ

Subscribe to Filmibeat Kannada

*ದಟ್ಸ್‌ಕನ್ನಡ ಬ್ಯೂರೋ

ನಾನೀಗಲೇ ಮದುವೆ ಆಗಬೇಕಾ ಹೇಳಿ...
ಅಂತ ಅಭಿಮಾನಿಗಳ ಮುಂದೆ ಪ್ರಶ್ನೆ ಇಡುತ್ತಾ ತುಂಟ ನಗೆ ನಗುವ ಪ್ರೇಮಾ ಕನಸು ಮನಸಲ್ಲೆಲ್ಲಾ ಈಗ ಪ್ರಶಸ್ತಿಯೇ ಕಾಣಿಸುತ್ತಿದೆಯಂತೆ. ಇದೆಲ್ಲಾ ಸುನಿಲ್‌ಕುಮಾರ್‌ ದೇಸಾಯಿ ‘ಮರ್ಮ’!

‘ಮರ್ಮ’ ಹಲವಾರು ಕಾರಣಗಳಿಂದ ಭಿನ್ನವಾಗಿರುವ ಚಿತ್ರ. ಇದರ ಫಸ್ಟ್‌ ರಿಪೋರ್ಟ್‌ ಕೂಡ ‘ವಾವ್‌’ ಎನ್ನುವಂತಿದೆ. ಹೊಸ ನಾಯಕ, ತಮ್ಮ ಜೀವಮಾನದ ಕನಸಿನ ಪಾತ್ರವಾದ ‘ಹುಚ್ಚಿ’ಯಾಗಿ ಪ್ರೇಮಾ... ಹೀಗೆ ಮರ್ಮ ಹೊಸತನಗಳನ್ನು ಒಳಗೊಂಡಿದೆ.

ದೇಸಾಯಿ ಇಲ್ಲಿ ಇನ್ನೂ ಒಂದು ಹೊಸತನ್ನು ಮಾಡಿದ್ದಾರೆ. ನಾಯಕಿ ಓರಿಯೆಂಟೆಡ್‌ ಚಿತ್ರವಾದ ಇದರಲ್ಲಿ ಒಂದು ವೇಳೆ ಪ್ರೇಮಾಗೆ ಡಬ್ಬಿಂಗ್‌ ಕಲಾವಿದೆ ಕಂಠ ಕೊಟ್ಟರೆ, ಪ್ರಶಸ್ತಿ ಕೈತಪ್ಪಬಹುದು ಎಂಬ ಕಾರಣಕ್ಕೆ ಖುದ್ದು ಪ್ರೇಮಾ ಕೈಲೇ ಮಾತಾಡಿಸಿದ್ದಾರಂತೆ. ಪ್ರೇಮಾ ಮಾತನ್ನು ಜೀರ್ಣಿಸಿಕೊಳ್ಳುವುದು ಸುಲಭವಲ್ಲವಾದರೂ, ದೇಸಾಯಿ ಸಾಕಷ್ಟು ತಾಲೀಮು ಮಾಡಿಸುವುದರಿಂದ ಮಾತು ಹದವಾಗಿದೆಯಂತೆ.

ಅಂದಹಾಗೆ, ಇದುವರೆಗೆ ಪ್ರೇಮಾಗೆ ಕಂಠದಾನ ಮಾಡುತ್ತಿದ್ದುದು ಸುನೇತ್ರ ಪಂಡಿತ್‌. ಈಟಿವಿಯ ‘ಯದ್ವಾ ತದ್ವಾ’ ಧಾರಾವಾಹಿಯಲ್ಲಿ ಚೆಲುವೆ ಪಾತ್ರದಲ್ಲಿ ಸುನೇತ್ರ ಈಗ ಮಿಂಚುತ್ತಿದ್ದಾರೆ !

ಮುಖಪುಟ / ಸ್ಯಾಂಡಲ್‌ವುಡ್‌

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada