»   » ಆಸ್ಟ್ರೇಲಿಯಾದಲ್ಲಿ ಕನ್ನಡ ಚಿತ್ರಗಳು -ಪುನೀತ್‌

ಆಸ್ಟ್ರೇಲಿಯಾದಲ್ಲಿ ಕನ್ನಡ ಚಿತ್ರಗಳು -ಪುನೀತ್‌

Subscribe to Filmibeat Kannada

ಆಸ್ಟ್ರೇಲಿಯಾದಲ್ಲೂ ಕನ್ನಡ ಚಿತ್ರಗಳ ಕ್ರೇಜ್‌ ಇದೆ ಎನ್ನುವ ನಟ ಪುನೀತ್‌ ರಾಜ್‌ಕುಮಾರ್‌, ತಮ್ಮ ಮುಂದಿನ ಚಿತ್ರಗಳನ್ನು ಅಲ್ಲೂ ಬಿಡುಗಡೆಗೊಳಿಸಲು ನಿರ್ಧರಿಸಿದ್ದಾರೆ.

‘ಆಕಾಶ್‌’ ಚಿತ್ರದ ಪ್ರದರ್ಶನದ ಹಿನ್ನೆಲೆ ಆಸ್ಟ್ರೇಲಿಯಾ ಸುತ್ತಿಬಂದಿರುವ ಪ್ರನೀತ್‌, ಅಲ್ಲಿನ ಕನ್ನಡ ಮಾರುಕಟ್ಟೆಯನ್ನು ಗುರ್ತಿಸಿದ್ದಾರೆ. ಶಿವರಾಜ್‌ಕುಮಾರ್‌ ಅಭಿಮಾನಿಗಳ ಒತ್ತಾಯದ ಮೇರೆಗೆ ನ.12ರಂದು ‘ಜೋಗಿ’ ಆಸ್ಟ್ರೇಲಿಯಾದಲ್ಲಿ ಬಿಡುಗಡೆಗೊಳ್ಳುತ್ತಿರುವ ಸಂತಸದ ಸಂಗತಿಯನ್ನು ಅವರು ಸುದ್ದಿಗಾರರೊಂದಿಗೆ ಹಂಚಿಕೊಂಡಿದ್ದಾರೆ.

ಹದಿನೈದು ದಿನಗಳ ಕಾಲ ಸಿಡ್ನಿ, ಮೆಲ್ಬೋರ್ನ್‌ ಸುತ್ತಿಬಂದಿರುವ ಪುನೀತ್‌, ‘ಆಕಾಶ್‌’ ಜೊತೆಗೆ ಡಾ.ರಾಜ್‌ಕುಮಾರ್‌ ಅವರ ಚಿತ್ರಗಳ ತುಣುಕುಗಳಿರುವ ವಿಸಿಡಿಯನ್ನು ಹೊರನಾಡ ಕನ್ನಡಿಗರಿಗೆ ಪರಿಚಯಿಸಿದ್ದಾರೆ. ಅವರೊಂದಿಗೆ ಸಂವಾದ ನಡೆಸಿದ್ದಾರೆ.

ಆಸ್ಟ್ರೇಲಿಯಾದಲ್ಲಿ ಈವರೆಗೆ ಕನ್ನಡದ ‘ಶಬ್ದವೇದಿ’ ಮತ್ತು ‘ಕುರಿಗಳು ಸಾರ್‌ ಕುರಿಗಳು’ ಚಿತ್ರಗಳು ಮಾತ್ರ ಪ್ರದರ್ಶನಗೊಂಡಿವೆ. ಮುಂದಿನ ದಿನಗಳಲ್ಲಿ ಹೆಚ್ಚುಹೆಚ್ಚು ಕನ್ನಡ ಚಿತ್ರಗಳನ್ನು ಇಲ್ಲಿ ಪ್ರದರ್ಶಿಸುವಂತೆ ಬೇಡಿಕೆ ಬಂದಿದೆ ಎಂದು ಪುನೀತ್‌ ಅಭಿಪ್ರಾಯಪಟ್ಟಿದ್ದಾರೆ.

ಆಸ್ಟ್ರೇಲಿಯಾ ಪ್ರವಾಸದಲ್ಲಿ ಸಹಕಾರ ನೀಡಿದ ತಮ್ಮ ಗೆಳೆಯರಾದ ಜಯಪ್ರಕಾಶ್‌, ಸಿಡ್ನಿಯ ಬಾಲಾಜಿ, ಮೆಲ್ಬೋರ್ನ್‌ನ ಪ್ರಕಾಶ್‌ ಮತ್ತು ಶರಣ್‌ ಅವರಿಗೆ ಪುನೀತ್‌ ಕೃತಜ್ಞತೆ ಸಲ್ಲಿಸಿದ್ದಾರೆ.

Post your views

ಮುಖಪುಟ / ಸ್ಯಾಂಡಲ್‌ವುಡ್‌

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada