»   » ಟೀವಿ ಪರದೆ : ಈ ಐವರಲ್ಲಿ ಯಾರಿಗೆ ಎಸ್ಸೆಲ್ ಪ್ರಶಸ್ತಿ?

ಟೀವಿ ಪರದೆ : ಈ ಐವರಲ್ಲಿ ಯಾರಿಗೆ ಎಸ್ಸೆಲ್ ಪ್ರಶಸ್ತಿ?

Subscribe to Filmibeat Kannada

ಬೆಂಗಳೂರು, ಡಿ.3 : ಕಿರುತೆರೆ ಪ್ರತಿಭಾವಂತರಿಗೆ ಮತ್ತು ಕಾರ್ಯಕ್ರಮಗಳಿಗೆ ಪ್ರಶಸ್ತಿ ನೀಡುವ ಅವಕಾಶ ನಿಮ್ಮ ಮುಂದಿದೆ. ಎಸ್ಸೆಲ್ ಮತ್ತು ಜೀ ಕನ್ನಡ ಚಾನೆಲ್ ಜಂಟಿಯಾಗಿ, 'ಎಸ್ಸೆಲ್ ಶ್ರೇಷ್ಠ ಪ್ರಶಸ್ತಿ'ಗಳನ್ನು ಕಿರುತೆರೆ ಗಣ್ಯರಿಗೆ ನೀಡಲು ಮುಂದಾಗಿವೆ.

ಸಾರ್ವಜನಿಕರು ಎಸ್ಸೆಮ್ಮೆಸ್ ಹಾಗೂ ದೂರವಾಣಿ ಮೂಲಕ ಮತ ಚಲಾಯಿಸಿ ಕರ್ನಾಟಕ ಶ್ರೇಷ್ಠ ಪ್ರಶಸ್ತಿಗೆ ಕೆಳಗಿನ ಐವರಲ್ಲಿ ಒಬ್ಬರನ್ನು ಆಯ್ಕೆ ಮಾಡಬಹುದಾಗಿದೆ. ಡಿಸೆಂಬರ್ 3ರಿಂದ 18ರವರೆಗೆ SMSಅಥವಾ BSNL Landlineಮೂಲಕ ನಿಮ್ಮ ಅಭಿಮತ ದಾಖಲಿಸಿ ಕರ್ನಾಟಕ ಶ್ರೇಷ್ಠರನ್ನು ಆಯ್ಕೆ ಮಾಡಬಹುದಾಗಿದೆ. ವಿಜೇತರಿಗೆ ಪ್ರಶಸ್ತಿಯನ್ನು ಡಿಸೆಂಬರ್ 21ರಂದು ನೀಡಲಾಗುತ್ತದೆ. ಅಂತಿಮ ಸುತ್ತಿನಲ್ಲಿ ಉಳಿದಿರುವ ಕೆಳಕಂಡವರಲ್ಲಿ ಒಬ್ಬರಿಗೆ ನಿಮ್ಮ ಮತ ಚಲಾಯಿಸಬಹುದು.

ಅಚ್ಯುತ್ ಕುಮಾರ್ ಎಚ್.ಕೆ.(ನಟ) : SMS ACHYUTHA to 57575 Or dial 18624247575 40 from BSNL Landline

ಎಂ.ಎನ್,ಜಯಂತ್ (ನಿರ್ದೇಶಕರು): SMS JAYANTH to 57575 Or dial 18624247575 41 from BSNL Landline

ನಾಕು ತಂತಿ (ದೈನಿಕ ಧಾರಾವಾಹಿ): SMS NAKU to 57575 Or dial 18624247575 42 from BSNL Landline

ರಾಗ ರಂಜಿನಿ (ರಿಯಾಲಿಟಿ ಶೋ): SMS to RAAGA to 57575 Or dial 18624247575 43 from BSNL Landline

ಸುಷ್ಮಾ ಕೆ.ರಾವ್ (ನಟಿ): SMS SUSHMA to 57575 Or dial 18624247575 44 from BSNL Landline

ಅಲ್ಲದೇ ಎಸ್.ಎನ್.ಸೇತುರಾಮ್ (ಚಿತ್ರಕಥೆ ಮತ್ತು ಸಂಭಾಷಣೆಗಾರ), ಅಪರ್ಣ.ಎನ್ (ನಿರೂಪಕಿ), ರಾಧಿಕಾ ರಾಣಿ.ಕೆ (ವಾರ್ತಾ ವಾಚಕಿ) ಇವರನ್ನು ವಿಶೇಷ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ. ಕರ್ನಾಟಕ ಶ್ರೇಷ್ಠ ಕಿರುತೆರೆ ಪ್ರಶಸ್ತಿಗೆ ನ್ಯಾಯಮೂರ್ತಿ ಆರ್.ರಾಮಕೃಷ್ಣ ನೇತೃತ್ವದ ಸಮಿತಿಯು, ಕರ್ನಾಟಕ ಕಿರುತೆರೆ ಕ್ಷೇತ್ರದಲ್ಲಿಯ ವ್ಯಕ್ತಿ ಹಾಗೂ ಕಾರ್ಯಕ್ರಮವನ್ನೊಳಗೊಂಡಂತೆ ಅಂತಿಮ ಪಟ್ಟಿಯನ್ನು ಸಿದ್ಧಪಡಿಸಿದೆ.

ನ್ಯಾಯಮೂರ್ತಿ ಆರ್. ರಾಮಕೃಷ್ಣ ನೇತೃತ್ವದ ಗಣ್ಯರ ಸಮಿತಿಯಲ್ಲಿ ಬಿ.ಜಯಶ್ರೀ (ರಂಗ ಕಲಾವಿದೆ, ಗಾಯಕಿ), ಜಿ.ಎಸ್.ಕುಮಾರ್ ( ಸುದ್ದಿ ಸಂಪಾದಕ, ಟೈಮ್ಸ್ ಆಪ್ ಇಂಡಿಯಾ), ಲಕ್ಷ್ಮಣ್ ಕೊಡಸೆ (ಸಹಾಯಕ ಸಂಪಾದಕರು, ಪ್ರಜಾವಾಣಿ), ಸಾ.ಶಿ.ಮರುಳಯ್ಯ (ಖ್ಯಾತ ಬರಹಗಾರ), ಡಾ.ಆರ್.ಪೂರ್ಣಿಮಾ (ಸಂಪಾದಕರು, ಉದಯವಾಣಿ), ವಿ.ಎನ್.ಸುಬ್ಬರಾವ್ (ಅಧ್ಯಕ್ಷರು, ಕರ್ನಾಟಕಾ ಮಾಧ್ಯಮ ಅಕಾಡೆಮಿ), ಬಿ.ಸುರೇಶ್ (ಅಧ್ಯಕ್ಷರು, ಕರ್ನಾಟಕ ಟೆಲಿವಿಜನ್ ಅಸೋಸಿಯೇಷನ್) ಮತ್ತು ವಿನಯ ಪ್ರಸಾದ್ (ಸಿನೆಮಾ ನಟಿ) ಇವರು ಸದಸ್ಯರಾಗಿದ್ದರು.

"ಜೀ ಕನ್ನಡದ ಸರಿಗಮಪ, ಕುಣಿಯೋಣು ಬಾರಾ ಮತ್ತು ಅನುಪಮಾ ಕಾರ್ಯಕ್ರಮಗಳು ನಾಮ ನಿರ್ದೇಶಿತವಾಗಿದ್ದರೂ ಕೂಡ ಜೀ ನೆಟ್‌ವರ್ಕನ ಮೂಲ ಕಂಪನಿ ಎಸ್ಸೆಲ್ ಈ ಪ್ರಶಸ್ತಿಯನ್ನು ಕೊಡಮಾಡುತ್ತಿರುವುದರಿಂದ, ಪ್ರಶಸ್ತಿಗೆ ಈ ವಾಹಿನಿಯ ಕಾರ್ಯಕ್ರಮಗಳನ್ನು ಪರಿಗಣಿಸಲಾಗಿಲ್ಲ" ಎಂದು ಎಸ್ಸೆಲ್ ಮತ್ತು ಜೀ ನೆಟ್‌ವರ್ಕನ ಉಪಾಧ್ಯಕ್ಷ ಗೌತಮ್ ಮಾಚಯ್ಯ ತಿಳಿಸಿದ್ದಾರೆ.

(ದಟ್ಸ್ ಕನ್ನಡ ವಾರ್ತೆ)

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada