»   » ಕನ್ನಡಿಗರಿಗಾಗಿ ಅಮೆರಿಕನ್ನಡಿಗರ ‘ಜೋಕ್‌ಫಾಲ್ಸ್‌’

ಕನ್ನಡಿಗರಿಗಾಗಿ ಅಮೆರಿಕನ್ನಡಿಗರ ‘ಜೋಕ್‌ಫಾಲ್ಸ್‌’

Posted By: Staff
Subscribe to Filmibeat Kannada
Jokefalls
ಡಿ.3ರ ಶುಕ್ರವಾರ 'ಜೋಕ್‌ಫಾಲ್ಸ್‌" ರಾಜ್ಯದ ಕೆಲವೇ ಕೆಲವು ಚಿತ್ರಮಂದಿಗಳಲ್ಲಿ ತೆರೆಕಂಡಿತು.'ಜೋಕ್‌ಫಾಲ್ಸ್‌" ಚಿತ್ರದ ವಿಶೇಷಗಳು ಒಂದೆರಡಲ್ಲ . ಬಿಸಿಬಿಸಿಯಂಥ ಹಸಿಹಸಿಯ ಕಥೆಯನ್ನು ಮಾಡಿಯೂ ಸೋತ ನಟ ರಮೇಶ್‌ 'ಜೋಕ್‌ಫಾಲ್ಸ್‌" ಮೂಲಕವಾದರೂ ಚಿಗಿತುನಿಲ್ಲುವ ಪ್ರಯತ್ನದಲ್ಲಿದ್ದಾರೆ. ಇಂಥದ್ದೇ ಕನಸು ಕಾಣುತ್ತಿರುವವರು ನಿರ್ದೇಶಕ ಅಶೋಕ್‌ ಪಾಟೀಲ್‌.

ಮಾಜಿ ಪೊಲೀಸ್‌ ಅಧಿಕಾರಿ, ಹಾಲಿ ನಟ ಹಾಗೂ ರಾಜಕಾರಣಿ ಬಿ.ಸಿ.ಪಾಟೀಲರ ತಮ್ಮ ಎಂದೇ ಪರಿಚಿತರಾದ ಅಮೆರಿಕನ್ನಡಿಗ ಅಶೋಕ್‌ ಪಾಟೀಲ್‌ ನಿರ್ದೇಶನದ ಮೊದಲ ಚಿತ್ರ ಶಾಪ ವಿಮರ್ಶಕರ ಮನಸ್ಸು ಗೆದ್ದಿತ್ತು . ಆದರೆ ಪ್ರೇಕ್ಷಕರು ಮಾತ್ರ ಶಾಪ ವಿಮೋಚನೆಗೆ ಮನಸ್ಸು ಮಾಡಲಿಲ್ಲ . ತಾಂತ್ರಿಕತೆ, ಕಥೆ, ನಿರೂಪಣೆಯ ಮೂಲಕ ಅಶೋಕ್‌ ಗಮನ ಸೆಳೆದಿದ್ದಷ್ಟೇ ಶಾಪದ ಸಾರ್ಥಕತೆ. ಹೀಗಾಗಿ ಎರಡನೇ ಚಿತ್ರದಲ್ಲಾದರೂ ಯಶಸ್ಸು ಕಾಣುವ ಹಂಬಲ ಪಾಟೀಲರದು. ಅದಕ್ಕಾಗಿಯೇ ಗಂಭೀರ ಕಥಾವಸ್ತುವನ್ನು ಪಕ್ಕಕ್ಕಿಟ್ಟು ಹಾಸ್ಯ ಚಿತ್ರ ನಿರ್ಮಿಸಿದ್ದಾರೆ. ಚಿತ್ರದ ಮೊದಲಿಂದ ಕೊನೆಯವರೆಗೂ ನಗೆಫಾಲ್ಸು ಎನ್ನುವುದು ನಿರ್ದೇಶಕರ ಹೇಳಿಕೆ.

ಅಮೆರಿಕನ್ನಡಿಗ ಪಾಟೀಲರ ನಿರ್ದೇಶನದ 'ಜೋಕ್‌ಫಾಲ್ಸ್‌" ನಿರ್ಮಾಪಕರೂ ಅಮೆರಿಕನ್ನಡಿಗರೇ. ಅಟ್ಲಾಂಟ ನಾಗೇಂದ್ರ 'ಜೋಕ್‌ಫಾಲ್ಸ್‌" ಮೂಲಕ ಗಾಂಧಿನಗರದಲ್ಲಿ ಅದೃಷ್ಟ ಪರೀಕ್ಷಿಸುತ್ತಿದ್ದಾರೆ. ಈ ಚಿತ್ರದ ಮತ್ತೊಂದು ಅಮೆರಿಕ ರಂಗು, ನಾಯಕಿ ದೀಪಾಲಿ. ನನ್ನ ಪ್ರೀತಿಯ ಹುಡುಗಿ ಚಿತ್ರದ ಮೂಲಕ ಗಮನ ಸೆಳೆದು ಆನಂತರ ಕಾಣದಂತೆ ಮಾಯವಾಗಿದ್ದ ದೀಪಾಲಿ 'ಜೋಕ್‌ಫಾಲ್ಸ್‌" ಮೂಲಕ ಮತ್ತೆ ಕಾಣಿಸಿಕೊಳ್ಳುತ್ತಿದ್ದಾರೆ.

ಚಿತ್ರದ ಸಂಗೀತ ಕೂಡ ಮನೋಮೂರ್ತಿ ಅವರದು. ಅವರು ಕೂಡ ಅಮೆರಿಕನ್ನಡಿಗರು ಎಂದು ಬೇರೆ ಹೇಳಬೇಕಿಲ್ಲವಷ್ಟೆ?

ಬಂದ್‌-ಪ್ರತಿಭಟನೆ-ಮುತ್ತಿಗೆ ವಗೈರೆಗಳ ಭರಾಟೆಯಲ್ಲಿ ಬಿಸಿಯೇರಿದ್ದ ಕನ್ನಡ ಚಿತ್ರೋದ್ಯಮದ ನರನಾಡಿಗಳನ್ನು 'ಜೋಕ್‌ಫಾಲ್ಸ್‌" ಸಡಿಲಗೊಳಿಸೀತೆ? ಹಾಗಾಗಲಿ.

English summary
Atlanta Nagendra and Ashok Patil's 'Joke Falls' released on Dec. 3, 2004. Ramesh and Deepali in lead roles

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada