»   » ಸ್ಯಾಂಡಲ್‌ವುಡ್‌ನಲ್ಲಿ ಚೂರು ಪಾರು!

ಸ್ಯಾಂಡಲ್‌ವುಡ್‌ನಲ್ಲಿ ಚೂರು ಪಾರು!

Posted By: Super
Subscribe to Filmibeat Kannada

ಕುತೂಹಲಕಾರಿ 'ಮುತ್ತಪ್ಪ ರೈ' ಚಿತ್ರದಲ್ಲಿ ತಮಿಳಿನ ಖ್ಯಾತನಟ ವಿಕ್ರಂ ನಟಿಸುವ ಸಾಧ.್ಯತೆಗಳಿವೆ.

ತಮಿಳಿನ ದಿಲ್‌ ಚಿತ್ರ ಹಿಂದಿಯಲ್ಲಿ 'ಧಮ್‌' ಆಗಿ ರಿಮೇಕ್‌ಗೊಂಡಿದ್ದು , ಈಗ ಅದೇ ಚಿತ್ರ ಪುನಃ ಕನ್ನಡಕ್ಕೆ ಬರುತ್ತಿರುವುದು, 'ಸೈ' ಎನ್ನುವ ಹೆಸರಿನಲ್ಲಿ !
ಶೈಲೇಂದ್ರಬಾಬು ನಿರ್ಮಾಣದಲ್ಲಿ , ನಾಗಣ್ಣ ನಿರ್ದೇಶನದಲ್ಲಿ 'ಗೌರಮ್ಮ' ಎಂಬ ಚಿತ್ರ ಸದ್ಯದಲ್ಲೇ ಸೆಟ್ಟೇರಲಿದೆ. ಇದು 'ನುವ್ವು ನಾಕು ನೆಚ್ಚಾವು' ಎಂಬ ತೆಲುಗು ಚಿತ್ರದ ಅವತರಣಿಕೆಯಾಗಿದ್ದು , ಪ್ರಧಾನ ಪಾತ್ರದಲ್ಲಿ ಉಪೇಂದ್ರ ಅಭಿನಯಿಸುತ್ತಿದ್ದಾರೆ.

ಐತಿಹಾಸಿಕ ಚಿತ್ರವೊಂದು ಸುನೀಲ್‌ಕುಮಾರ್‌ ದೇಸಾಯಿ ನಿರ್ದೇಶನದಲ್ಲಿ , ಜಯಶ್ರೀದೇವಿ ನಿರ್ಮಾಣದಲ್ಲಿ ತಯಾರಾಗಲಿದೆ. ಈ ಚಿತ್ರದಲ್ಲಿ ಉಪೇಂದ್ರ ಮುಖ್ಯ ಪಾತ್ರದಲ್ಲಿದ್ದಾರೆ.
ರಾಮು ನಿರ್ಮಾಣದ ಚಿತ್ರವೊಂದು ಅರ್ಜೆಂಟಾಗಿ ಸೆಟ್ಟೇರುತ್ತಿದ್ದು , ನಿರ್ದೇಶಕರು ಡಿ.ರಾಜೇಂದ್ರಬಾಬು. ನಾಯಕ- ಉಪ್ಪಿ !
ಸಿದ್ಧರಾಜು ನಿರ್ಮಿಸಿ ಗಿರೀಶ್‌ ಕಂಪ್ಲಾಪುರ ನಿರ್ದೇಶಿಸಿದ್ದ 'ಸ್ನೇಹಾಂಜಲಿ' ಹಣಕಾಸು ಸಮಸ್ಯೆಯಿಂದ ಬಳಲುತ್ತಿದ್ದು, ಮುಂದುವರಿಯುವ ಲಕ್ಷಣ ಕಂಡು ಬರುತ್ತಿದೆ.
'ಮಹಾರಾಜ' ಚಿತ್ರ ರಿಮೇಕ್‌ ಅಲ್ಲ . ಆದರೆ ತೆಲುಗಿನ 'ಪೆದ್ದಬಾಬು' ಚಿತ್ರದ ಹಾಸ್ಯ ಸನ್ನಿವೇಶಗಳು ಭಟ್ಟಿ ಇಳಿಸಲ್ಪಟ್ಟಿವೆಯಂತೆ?

ಶುಭಂ.

English summary
Titbits from Kannada filmdom

Kannada Photos

Go to : More Photos

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

X