»   » ಮಚ್ಚಿನ ನಾಯಕ ಈಗ ಮದಕರಿ ನಾಯಕ?

ಮಚ್ಚಿನ ನಾಯಕ ಈಗ ಮದಕರಿ ನಾಯಕ?

Subscribe to Filmibeat Kannada

ನಟ ದರ್ಶನ್‌ ಮತ್ತು ರಕ್ಷಿತಾ ಜೋಡಿಯಾಗಿ ನಟಿಸುತ್ತಿರುವ ‘ಸುಂಟರಗಾಳಿ’ ಚಿತ್ರದ ಚಿತ್ರೀಕರಣ ಭರದಿಂದ ಸಾಗಿದೆ.

‘ಸ್ವಾಮಿ’ ಚಿತ್ರದ ಸೋಲಿನಿಂದ ಕಂಗೆಟ್ಟಿರುವ ದರ್ಶನ್‌ಗೆ ಸಾಧುಕೋಕಿಲಾ ನಿರ್ದೇಶನದ, ‘ಸುಂಟರಗಾಳಿ’ ತಂಪುಗಾಳಿಯಾಗುವುದೇನೋ ಕಾದು ನೋಡಬೇಕು. ಅಭಿಮಾನಿಗಳ ಪಾಲಿಗೆ ‘ಮಚ್ಚಿ’ನ ನಾಯಕರಾಗಿರುವ ನಟ ದರ್ಶನ್‌, ಈ ಮಧ್ಯೆ ವೈವಿಧ್ಯಮಯ ಪಾತ್ರಗಳತ್ತ ಗಮನಹರಿಸಿದ್ದಾರೆ.

ಗುರುದತ್‌ ನಿರ್ದೇಶನದ ‘ದತ್ತ ’ ಚಿತ್ರದಲ್ಲಿ ಹಾಸ್ಯ ಪಾತ್ರ, ‘ಸುಂಟರಗಾಳಿ’ಯಲ್ಲಿ ವೈವಿಧ್ಯಮಯ ಪಾತ್ರ ಮಾಡುತ್ತಿದ್ದಾರೆ ಎಂಬ ಸುದ್ದಿಗಳ ಮಧ್ಯೆ, ಐತಿಹಾಸಿಕ ನಾಯಕನ ಪಾತ್ರಕ್ಕೆ ದರ್ಶನ್‌ ಆಯ್ಕೆಯಾಗಿದ್ದಾರೆ ಎಂಬ ಸುದ್ದಿ ಗಾಂಧಿನಗರದಲ್ಲಿ ದಟ್ಟವಾಗಿ ಹಬ್ಬಿದೆ.

ವೇಣು ಅವರ ‘ಮದಕರಿ ನಾಯಕ’ ಕಾದಂಬರಿಯನ್ನು ಚಿತ್ರವಾಗಿಸುವ ಪ್ರಯತ್ನಗಳು ನಡೆದಿವೆ. ಕೆ.ಸಿ.ಎನ್‌. ಗೌಡ ಚಿತ್ರದ ನಿರ್ಮಾಣಕ್ಕೆ ಮುಂದಾಗಿದ್ದು, ದರ್ಶನ್‌ ಮದಕರಿನಾಯಕನ ಪಾತ್ರ ನಿರ್ವಹಿಸಲಿದ್ದಾರೆ ಎಂದು ಮೂಲಗಳು ತಿಳಿಸಿವೆ.

ನಟ ಶಿವರಾಜ್‌ಕುಮಾರ್‌ ಅಭಿನಯದ ‘ಕುಮಾರರಾಮ’ ಸೆಟ್ಟೇರಿರುವ ಬೆನ್ನಲ್ಲಿಯೇ ಮತ್ತೊಂದು ಐತಿಹಾಸಿಕ ಚಿತ್ರ ‘ಮದಕರಿ ನಾಯಕ’ ಸೆಟ್ಟೇರಿದರೆ, ಕನ್ನಡಿಗರಿಗೆ ಅದಕ್ಕಿಂತ ಭಾಗ್ಯ ಬೇಕೇ?

Post your views

ಮುಖಪುಟ / ಸ್ಯಾಂಡಲ್‌ವುಡ್‌

Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada