ಏಯ್ಟ್ ಪ್ಯಾಕ್ ನಲ್ಲಿ ಚೇತನ್ ಚಂದ್ರ ಸಿಂಹರಾಶಿಗೆ ರೆಡಿ

ಅವರದೀಗ 'ಏಯ್ಟ್ ಪ್ಯಾಕ್' ನ ಜಬರ್ದಸ್ತ್ ಬಾಡಿ. ಸೌತ್ ಇಂಡಿಯಾದಲ್ಲಿ ಇದೇ ಮೊದಲಬಾರಿಗೆ ತಮ್ಮ ದೇಹವನ್ನು 'ಏಯ್ಟ್ ಪ್ಯಾಕ್' ಶೇಪ್ ಮಾಡಿಕೊಂಡು ಆ ಮೂಲಕ ಚಿತ್ರರಸಿಕರ ಗಮನ ಸೆಳೆಯಲಿದ್ದಾರೆ ಚೇತನ್ ಚಂದ್ರ. ಸದ್ಯದಲ್ಲೇ ಸೆಟ್ಟೇರಲಿರುವ ಚಂದ್ರಹಾಸ ನಿರ್ದೇಶನದ 'ಸಿಂಹರಾಶಿ' ಎಂಬ ಚಿತ್ರದಲ್ಲಿ ನಟಿಸಲಿರುವ ಚೇತನ್, ಈ ಚಿತ್ರದ ಪಾತ್ರಕ್ಕಾಗಿ ಈ ಸಾಹಸ ಮಾಡಿದ್ದಾರೆ.
ಹಗಲು-ರಾತ್ರಿಯೆನ್ನದೇ ಕಷ್ಟುಪಟ್ಟು ವರ್ಕ್ ಔಟ್ ಮಾಡಿ ತಮ್ಮ ದೇಹವನ್ನು ದಂಡಿಸಿ ಹುರಿಗೊಳಿಸಿ ಈ ಸಾಹಸಕ್ಕೆ ಸಿದ್ಧವಾಗಿದ್ದಾರೆ ಚೇತನ್. ಬರಲಿರುವ ಸಿಂಹರಾಶಿಯಲ್ಲಿ ಅವರು 'ಅಘೋರಿ'ಯ ಪಾತ್ರದಲ್ಲಿ ಕಾಣಿಸಿಕೊಳ್ಳಲಿರಬಹುದು ಎಂಬುದನ್ನು ಈ ಚಿತ್ರಕ್ಕಾಗಿ ನಡೆದ 'ಪೋಟೋ ಶೂಟ್' ಚಿತ್ರಗಳು ಹೇಳುತ್ತಿವೆ. ಅವರಿಗೆ ತರಬೇತಿ ನೀಡಿ 'ಏಯ್ಟ್ ಪ್ಯಾಕ್' ಬಾಡಿಯಲ್ಲಿ ಮಿಂಚುವಂತೆ ಮಾಡಿದ್ದು ಖ್ಯಾತ ತರಬೇತುದಾರ ಪಾನಿಪುರಿ ಕಿಟ್ಟಿ.
ಇನ್ನೇನು ಸದ್ಯದಲ್ಲೇ ಮುಹೂರ್ತ ನೆರವೇರಿಸಿಕೊಂಡು ಚಿತ್ರೀಕರಣ ಪ್ರಾರಂಭಿಸಲಿರುವ 'ಸಿಂಹರಾಶಿ'ಯ ಮೂಲಕ ನಟ ಚೇತನ್ ಚಂದ್ರ ಸಾಕಷ್ಟು ಎತ್ತರಕ್ಕೆ ಏರಲಿದ್ದಾರೆ ಎನ್ನಲಾಗುತ್ತಿದೆ. ಸಿಂಹರಾಶಿಯ ಕಥೆ ಹಾಗೂ ಚಿತ್ರಕಥೆಗೆ ಸಾಕಷ್ಟು ಹೋಮ್ ವರ್ಕ್ ಮಾಡಿದ್ದಾರಂತೆ ನಿರ್ದೇಶಕ ಚಂದ್ರಹಾಸ. ಈ ಚಿತ್ರ ಚೇತನ್ ಚಂದ್ರರ ವೃತ್ತಿಜೀವನದಲ್ಲಿ ಯಶಸ್ಸಿನ ಮೈಲೀಗಲ್ಲಾಗಲಿದೆ ಎನ್ನುವ ಅಭಿಪ್ರಾಯ ಚಿತ್ರತಂಡದ್ದು. (ಒನ್ ಇಂಡಿಯಾ ಕನ್ನಡ)


Click it and Unblock the Notifications











