»   » ನಿರ್ಮಾಪಕರ ಮೇಲೆ ಡಾ. ವಿಷ್ಣು ಪ್ರಶಂಸೆಯ ಮಳೆ

ನಿರ್ಮಾಪಕರ ಮೇಲೆ ಡಾ. ವಿಷ್ಣು ಪ್ರಶಂಸೆಯ ಮಳೆ

Posted By:
Subscribe to Filmibeat Kannada

ನಟರ ಅಭಿನಯಕ್ಕೆ ಹೊಗಳಿಕೆಯ ಮಾತು ಕೇಳಿ ಬರುವುದು ಸಹಜ. ಆದರೆ ನಿರ್ಮಾಪಕರಿಗೆ ಮನ್ನಣೆ ಸಿಗುವುದು ವಿರಳ. ಆದರೆ ಇಲ್ಲಿ ಒಂದು ಅಚ್ಚರಿ ಇದೆ. ಈಗಾಗಲೇ ನಿರ್ಮಾಣದಲ್ಲಿ ಎಲ್ಲರಿಂದ ಸೈ ಅನಿಸಿಕೊಂಡಿರುವ ನಿರ್ಮಾಪಕ ಮತ್ತು ಗುಲಾಬಿ ತೋಟದ ಮಾಲೀಕ ಸಿ.ಆರ್.ಮನೋಹರ್ ಅವರು ಈಗ ಕನ್ನಡದ ಮೇರುನಟ ಡಾ.ವಿಷ್ಣುವರ್ಧನ್ ಹಾಗೂ ಡೈನಾಮಿಕ್ ಹೀರೋ ದೇವರಾಜ್ ಅವರಿಂದ ಪ್ರಶಂಸೆಯ ಮಳೆಯಲ್ಲಿ ಮಿಂದಿದ್ದಾರೆ, ಉತ್ತಮ ಅಭಿನಯಕ್ಕಾಗಿ.

ಪ್ರಸ್ತುತ ಅವರ ನಿರ್ಮಾಣದ 'ಮಾಸ್ಟರ್' ಚಿತ್ರದಲ್ಲಿ ಮನೋಹರ್ ಪೊಲೀಸ್ ಅಧಿಕಾರಿಯ ಪಾತ್ರಧಾರಿ. ನಿಮ್ಮ ಮೈಕಟ್ಟಿಗೆ ಈ ಪೊಲೀಸ್ ಉಡುಗೆ ಸುಂದರವಾಗಿ ಕಾಣುತ್ತದೆ. ನಿಮ್ಮ ಮುಂದಿನ ನಿರ್ಮಾಣದ ಸಿನೆಮಾಗಳಲ್ಲಿ ನೀವು ಮುಖ್ಯಪಾತ್ರ ನಿರ್ವಹಣೆ ಮಾಡುವ ಎಲ್ಲಾ ಲಕ್ಷಣಗಳು ನಿಮಗೆ ಇದೆ ಎಂಬ ಮೆಚ್ಚುಗೆಯ ಮಾತುಗಳನ್ನಾಡಿದ್ದಾರೆ ಉಭಯ ನಾಯಕರು. ಸಹೃದಯಿ ನಾಯಕರ ಮಾತುಗಳಿಗೆ ನಾನು ಚಿರಋಣಿ ಎಂದಿದ್ದಾರೆ ಮನೋಹರ್.

ಗೋಲ್ಡನ್ ಲಯನ್ ಫಿಲಂ ಡಿವಿಜನ್ ಲಾಂಛನದಲ್ಲಿ ಸಿ.ಆರ್.ಮನೋಹರ್ ಅವರು ನಿರ್ಮಿಸುತ್ತಿರುವ ಮೂರನೇ ಚಿತ್ರ 'ಮಾಸ್ಟರ್'. ನಿರ್ದೇಶಕರೇ ಕತೆ, ಚಿತ್ರಕತೆ, ಸಂಭಾಷಣೆ. ಛಾಯಾಗ್ರಹಣ ಕಾರ್ಯಗಳ ಜವಾಬ್ದಾರಿ ಹೊತ್ತಿರುವ ಈ ಚಿತ್ರಕ್ಕೆ 'ಮುಸ್ಸಂಜೆ ಮಾತು' ಖ್ಯಾತಿಯ ವಿ.ಶ್ರೀಧರ್ ಅವರ ಸಂಗೀತವಿದೆ. ಜ್ಞಾನೇಶ್ ಸಂಕಲನ, ಚಿನ್ನಿಪ್ರಕಾಶ್ ನೃತ್ಯ, ಪಳನಿರಾಜ್, ರವಿವರ್ಮ ಸಾಹಸ, ಇಸ್ಮಾಯಿಲ್ ಕಲೆ ಹಾಗೂ ವಿಜಯಕುಮಾರ್, ಚಂಪಕಧಾಮ ಬಾಬು ಅವರ ನಿರ್ಮಾಣ ನಿರ್ವಹಣೆ 'ಮಾಸ್ಟರ್'ಗಿದೆ. ಡಾ.ವಿಷ್ಣುವರ್ಧನ್, ಸುಹಾಸಿನಿ ಅವರ ಅನುಪಮಜೋಡಿಯ ಚಿತ್ರದ ಉಳಿದ ತಾರಾಬಳಗದಲ್ಲಿ ಅವಿನಾಶ್, ಮುಖೇಶ್‌ರಿಷಿ, ದೇವರಾಜ್, ಹರೀಶ್‌ರಾಯ್, ಧರ್ಮ, ಚಿತ್ರಾಶೆಣೈ, ಬೇಬಿ ಬೃಂದಾ, ಬೇಬಿ ಪ್ರೇರಣ ಮುಂತಾದವರಿದ್ದಾರೆ.

(ದಟ್ಸ್‌ಕನ್ನಡ ಸಿನಿವಾರ್ತೆ)

Kannada Photos

Go to : More Photos

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

X