»   » ಕನ್ನಡ ಚಿತ್ರರಸಿಕರಿಗೆ ರಾಗಿಣಿ ದ್ವಿವೇದಿಯ ಬಿಗ್ ಥ್ಯಾಂಕ್ಸ್

ಕನ್ನಡ ಚಿತ್ರರಸಿಕರಿಗೆ ರಾಗಿಣಿ ದ್ವಿವೇದಿಯ ಬಿಗ್ ಥ್ಯಾಂಕ್ಸ್

Posted By:
Subscribe to Filmibeat Kannada

ವೀರ ಮದಕರಿ ಚಿತ್ರದ ಮೂಲಕ 2009ರಲ್ಲಿ ಕನ್ನಡಕ್ಕೆ ಕಾಲಿಟ್ಟ ರಾಗಿಣಿ ದ್ವಿವೇದಿ ಇದೀಗ ಕನ್ನಡಿಗರ ಪಾಲಿಗೆ ಅರಗಿಣಿ ಆಗಿದ್ದಾಳೆ. ರಾಗಿಣಿ ಈಗ ಕನ್ನಡಿಗರ ಮನಮೆಚ್ಚಿಸಿರುವ ನಟಿ. ಎರಡು ವರ್ಷಗಳಲ್ಲಿ ಬಹಳಷ್ಟು ಚಿತ್ರಗಳಲ್ಲಿ ನಟಿಸಿ ಸದ್ಯದಲ್ಲೇ ಕನ್ನಡದ ನಂಬರ್ ಒನ್ ಪಟ್ಟಕ್ಕೆ ಜಿಗಿಯುವ ಸಾಹಸಕ್ಕೆ ಅಣಿಯಾಗಿದ್ದಾರೆ ರಾಗಿಣಿ.

ಸದ್ಯ ಕನ್ನಡದಲ್ಲಿ ಅತಿಹೆಚ್ಚು ಚಿತ್ರಗಳಲ್ಲಿ ನಟಿಸುತ್ತಿರುವ ನಟಿಯೆಂದರೆ ರಾಗಿಣೀಯೇ. ಇಂಥ ರಾಗಿಣಿ ತನಗೆ ಕನ್ನಡದಲ್ಲಿ ಸಿಕ್ಕ ಅವಕಾಶ ಹಾಗೂ ಪ್ರತಿಭೆಯನ್ನು ಗುರುತಿಸಿರುವ ಕನ್ನಡಿಗರ ಪ್ರೀತಿಗೆ ಧನ್ಯವಾದ ಹೇಳಿದ್ದಾರೆ. ಅವರ ಮಾತುಗಳನ್ನು ಅವರದೇ ಆದ ನಿರೂಪಣೆಯಲ್ಲಿ ಓದಿ...

"2011 ನನಗೆ ಬಹಳ ಇಷ್ಟದ ವರ್ಷ. ಹಲವು ದೊಡ್ಡ ದೊಡ್ಡ ಸ್ಟಾರ್ ಗಳ ಜೊತೆ ನಟಿಸುವ ಭಾಗ್ಯ ಸಿಕ್ಕಿದೆ. ಕಳ್ಳ ಮಳ್ಳ ಸುಳ್ಳ ಚಿತ್ರದ ಹಾಡಿನಿಂದಾಗಿ ಇಡೀ ಕರ್ನಾಟಕಕ್ಕೆ ನಾನು ತುಪ್ಪ ಮಾರುವ ಹುಡುಗಿಯೇ ಆಗಿಹೋಗಿದ್ದೇನೆ.

ಹೋದ ವರ್ಷ ನನಗೆ ಕನ್ನಡದಲ್ಲಿ ಒಳ್ಳೊಳ್ಳೆಯ ಅವಕಾಶಗಳು ಸಿಕ್ಕವು. ಕರ್ನಾಟಕದ ಜನ ನನ್ನ ಪ್ರತಿಭೆಯನ್ನು ಗುರುತಿಸಿದ್ದಾರೆ. ಅದಕ್ಕಾಗಿ ಅವರಿಗೆ ಮೊದಲಿಗೆ ಧನ್ಯವಾದ ಹೇಳುತ್ತೇನೆ. ಹಾಗೂ ಹೊಸ ವರ್ಷ ಎಲ್ಲರಿಗೂ ನೆಮ್ಮದಿ ತರಲಿ" ಎಂದು ಶುಭ ಕೋರಿದರು. (ಒನ್ ಇಂಡಿಯಾ ಕನ್ನಡ)

English summary
Actress Ragini Dwivedi thanking to Kannada Audience for her 'Top Heroine on 2011' in Kannada. 
 

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada