ಪಬ್‌ನಲ್ಲಿ ನಟಿ ಶ್ರಿಯಾ ಸರನ್ ಗುಂಡಿನ ಮತ್ತೆ ಗಮ್ಮತ್ತು
ಇದು ದಕ್ಷಿಣ ಭಾರತದ ಜನಪ್ರಿಯ ತಾರೆ ಶ್ರಿಯಾ ಎಣ್ಣೆ ಪ್ರಸಂಗ. ಈಗಾಗಲೆ ಈಕೆ ಐಪಿಎಲ್, ಸಿಸಿಎಲ್‌ನಲ್ಲಿ ಕುಣಿದು ಪ್ರೇಕ್ಷಕರನ್ನು ರಂಜಿಸಿದ್ದಾರೆ. ಇತ್ತೀಚೆಗೆ ಈಕೆ ಚೆನ್ನೈನ ಪಬ್ ಒಂದರಲ್ಲಿ ದರ್ಶನ ನೀಡಿದ್ದು ಗುಂಡಿನ ಮತ್ತಿನಲ್ಲಿ. ಗುಂಡು ಅಳತೆ ಮೀರಿ ನಂಜುಂಡಿ ಕಲ್ಯಾಣದ ಮಾಲಾಶ್ರೀಯಂತೆ ಗಂಡುಬೀರಿಯೇ ಆಗಿದ್ದರು ಎಂಬುದು ಸುದ್ದಿ.
ನಟಿ ರೀಮಾ ಸೇನ್ ಆಯೋಜಿಸಿದ್ದ ಗುಂಡು ಪಾರ್ಟಿಯಲ್ಲಿ ಶ್ರಿಯಾ ಕಂಠಮಟ್ಟ ಕುಡಿದು ಕುಣಿದು ಕುಪ್ಪಳಿಸಿದ್ದಾಗಿ ಮೂಲಗಳು ಖಚಿತಪಡಿಸಿವೆ. ಇನ್ನು ಛಾಯಾಗ್ರಹಕರಂತೂ ಈಕೆಯ ಫೋಟೋಗಳನ್ನು ಸಿಕ್ಕಾಪಟ್ಟೆ ಕ್ಲಿಕ್ಕಿಸಿ ಈಗ ಎಲ್ಲಡೆ ಹರಿಯಬಿಟ್ಟಿದ್ದಾರೆ.
ಅಳತೆ ಮೀರಿದ ಸ್ಥಿತಿಯಲ್ಲಿದ್ದ ಶ್ರಿಯಾರನ್ನು ಯಾರೋ ಪುಣ್ಯಾತ್ಮ ಮನೆಗೆ ಬಿಟ್ಟು ಬಂದ ಎಂಬ ಸುದ್ದಿಯೂ ಇದೆ. ಆದರೆ ಮಾರೆನೆ ದಿನ ಈ ಸುದ್ದಿ ಗುಲ್ಲಾಗುತ್ತಿದ್ದಂತೆ ಎಚ್ಚೆತ್ತುಕೊಂಡಿರುವ ಶ್ರಿಯಾ, ಇದೆಲ್ಲಾ ನಾನ್ಸೆಸ್ ಎಂದಿದ್ದಾರೆ. ಈ ರೀತಿಯ ಸುದ್ದಿಗಳಿಗೆ ಕಿವಿಗೊಡಬೇಡಿ. ಇದು ಕೇವಲ ಗಾಸಿಪ್ ಅಷ್ಟೆ ಎಂದಿದ್ದಾರೆ ತನ್ನ ಟ್ವಿಟ್ಟರ್ ಖಾತೆಯಲ್ಲಿ.
"ಇತ್ತೀಚೆಗೆ ನಾನು ಯಾವುದೇ ಪಬ್‌ಗೆ ಹೋಗಿಲ್ಲ. ಬಾರ್ ಮತ್ತು ಪಬ್‌ಗಳಿಗೆ ಅಪ್ಪಿತಪ್ಪಿಯೂ ಹೋಗುವುದಿಲ್ಲ. ಇನ್ನು ಆಲ್ಕೋಹಾಲು ಮಾತು ಎಲ್ಲಿಯದು. ಈ ರೀತಿಯ ವದಂತಿಗಳನ್ನು ಯಾರು ಹುಟ್ಟುಹಾಕುತ್ತಾರೋ. ಇದು ಹೀಗೆ ಮುಂದುವರೆದರೆ ಅಂಥವರ ವಿರುದ್ಧ ಕಠಿಣ ಕ್ರಮಕ್ಕೆ ಮುಂದಾಗುವುದಾಗಿ." ಗುಟುರು ಹಾಕಿದ್ದಾರೆ. (ಏಜೆನ್ಸೀಸ್)


Click it and Unblock the Notifications











