ರೆಡ್ ಸುಂದರಿ ತಾಪಸಿ ರೇಟು ಅರುವತ್ತು ಲಕ್ಷ!

By Rajendra

ರೆಡ್ ಎಫ್ಎಂ ವಾಹಿನಿಯ ಬ್ರ್ಯಾಂಡ್ ಅಂಬಾಸಡರ್ ತಾಪಸಿ ದಿಢೀರ್ ಎಂದು ತಮ್ಮ ಸಂಭಾವನೆಯನ್ನು ಹೆಚ್ಚಿಸಿಕೊಂಡಿದ್ದಾರೆ. ಚಿನಿವಾರ ಪೇಟೆಯಲ್ಲಿ ಚಿನ್ನದ ದರ ಆಗಸಕ್ಕೆ ಏರುವುದಕ್ಕೂ ತಾಪಸಿ ರೇಟು ಜಾಸ್ತಿ ಆಗುವುದಕ್ಕೂ ಸುತಾರಾಂ ಸಂಬಂಧವಿಲ್ಲ!

ಹೋಗಲಿ ತಾಪಸಿಗೆ ಏನಾದರೂ ಮಿಸ್ ವರ್ಲ್ಡ್ ಅವಾರ್ಡ್ ಸಿಕ್ಕಿದೆಯಾ ಎಂದರೆ ಎಂಥದೂ ಇಲ್ಲ. ಆದರೂ ತಮ್ಮ ಸಂಭಾವನೆಯನ್ನು ಮಾತ್ರ ಎರಡು ಪಟ್ಟು ಜಾಸ್ತಿ ಮಾಡಿಕೊಂಡಿದ್ದಾರೆ. ಈ ಬೆಳವಣಿಗೆಗೆ ಕಾರಣ ಆಕೆ ತೆಲುಗಿನಲ್ಲಿ ಅಭಿನಯಿಸಿದ 'ಮಿ.ಪರ್ಫೆಕ್ಟ್' ಚಿತ್ರದ ಸಕ್ಸಸ್.

ಸಕ್ಸಸ್‌ಗಾಗಿ ತಹತಹಸುತ್ತಿದ್ದ ತಾಪಸಿ ಜಾತಕಪಕ್ಷಿಯಂತೆ ಕಾದುಕುಳಿತದ್ದೇ ಬಂತು. ಈಕೆಯ ಲುಕ್ ಬದಲಾಯಿತಾದರೂ ಲಕ್ ಬದಲಾಗಿರಲಿಲ್ಲ. ರು.38 ರಿಂದ ರು.42 ಲಕ್ಷಕ್ಕೆ ಹೊಂದಿಕೊಳ್ಳುತ್ತಿದ್ದ ತಾಪಸಿ ರು.60 ಲಕ್ಷಕ್ಕೆ ಜಂಪ್ ಹೊಡೆದಿದ್ದಾರೆ. ಸಂಭಾವನೆ ರೂಪದಲ್ಲಿ ರು.50 ಲಕ್ಷ ತೆಗೆದುಕೊಂಡರೆ ಉಳಿದ ರು.10 ಲಕ್ಷ ಹೋಟೆಲ್ ಖರ್ಚುವೆಚ್ಚಕ್ಕೆ ಸಮರ್ಪಯಾಮಿ! (ಏಜೆನ್ಸೀಸ್)

More from Filmibeat

English summary
Reports say that Tapasee, who used to get around Rs 38 to 42 lakhs per film, has increased it to Rs 60 lakhs. The blue-eyed gal of the Manchus has reportedly asked Rs 50 lakhs and additional Rs 10 lakhs for her other expenses from a producer to star in his forthcoming Telugu film.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X