ಸೆಪ್ಟೆಂಬರ್‌ನಲ್ಲಿ ತಾರೆ ತ್ರಿಷಾ ಕೃಷ್ಣನ್ ನಿಶ್ಚಿತಾರ್ಥ
ಕಡೆಗೂ ಮೋಹಕ ತಾರೆ ತ್ರಿಷಾ ಕೃಷ್ಣನ್‌ಗೆ ಬಾಳಸಂಗಾತಿ ಸಿಕ್ಕಿದ್ದಾನೆ. ತ್ರಿಷಾ ಅವರ ತಾಯಿ ಕಳೆದ ಕೆಲ ತಿಂಗಳಿಂದ ತಮ್ಮ ಮಗಳಿಗೆ ಸೂಕ್ತ ವರನನ್ನು ಹುಡುಕಲು ತೀವ್ರವಾಗಿ ಪ್ರಯತ್ನಿಸುತ್ತಿದ್ದರು. ಕಡೆಗೂ ಚೆನ್ನೈ ಮೂಲದ ಉದ್ಯಮಿ ಅಮೃತ್ ಅವರನ್ನು ಆಯ್ಕೆ ಮಾಡಿಕೊಂಡಿದ್ದಾರೆ.
ಅಮ್ಮ ನೋಡಿದ ವರ ಎಂದು ಕೂಡಲೆ ತಾಳಿ ಕಟ್ಟಿಸಿಕೊಳ್ಳುವ ಅವರಸ ತ್ರಿಷಾ ಅವರಿಗೇನು ಇಲ್ಲವಂತೆ. ಒಂದೆರಡು ದಿನ ವರನ ಜೊತೆ ಅಡ್ಡಾಡಿ, ಒಬ್ಬರನ್ನೊಬ್ಬರು ಚೆನ್ನಾಗಿ ಅರ್ಥ ಮಾಡಿಕೊಳ್ಳಬೇಕು ಎಂಬುದು ತ್ರಿಷಾ ಕಂಡೀಷನ್. ಈ ಕಂಡೀಷನ್‌ಗೆ ವರ ಮಹಾಶಯ ಹಾಗೂ ಆಕೆಯ ತಾಯಿ ಓಕೆ ಎಂದಿದ್ದಾರಂತೆ.
ಈಗ ಇಬ್ಬರೂ ಕೈ ಕೈ ಹಿಡಿದು ಸಭೆ ಸಮಾರಂಭ ಎಂದು ಸುತ್ತುತ್ತಿದ್ದಾರೆ. ಚಿತ್ರೀಕರಣದಲ್ಲಿ ಬಿಡುವು ಸಿಕ್ಕಾಗಲೆಲ್ಲಾ ಅಮೃತ್‌ಗೆ ಫೋನ್ ಒಗಾಯಿಸುವುದು ಮಾಮೂಲು. ಸದ್ಯಕ್ಕೆ ಕೈಯಲ್ಲಿ ಸಾಕಷ್ಟು ಚಿತ್ರಗಳಿರುವ ಕಾರಣ ಅವೆಲ್ಲಾ ಮುಗಿದ ಮೇಲೆ ಮದುವೆಯಂತೆ. ಇದೇ ಸೆಪ್ಟೆಂಬರ್‌ನಲ್ಲಿ ನಿಶ್ಚಿತಾರ್ಥ ನಡೆಯಲಿದ್ದು ಬಹುಶಃ ಮುಂದಿನ ವರ್ಷ ಹಸೆಮಣೆ ಏರಬಹುದು. (ದಟ್ಸ್‌ಕನ್ನಡ ಸಿನಿವಾರ್ತೆ)
English summary
Actress Trisha Krishnan engagement to be held in September. Chennai based entrepreneur Amruth is becoming her life partner. The wedding seems to be in the next year as Trisha is quite busy with her present projects.


Click it and Unblock the Notifications