»   » ಮಾಗಡಿಯಲ್ಲಿ ಬಿರುಗಾಳಿಬಿರುಸಿನ ಶೂಟಿಂಗ್

ಮಾಗಡಿಯಲ್ಲಿ ಬಿರುಗಾಳಿಬಿರುಸಿನ ಶೂಟಿಂಗ್

Posted By:
Subscribe to Filmibeat Kannada

ಬಿರುಗಾಳಿಗೆ ನಿರ್ದಿಷ್ಟ ನೆಲೆ ಇಲ್ಲ. ಮಾರಿಷಸ್‌ನಲ್ಲು ಬೀಸುತ್ತದೆ ಮಾಗಡಿಯಲ್ಲೂ ಬೀಸುತ್ತದೆ. ತನ್ನಗಿಷ್ಟವಾದ ಕಡೆ ಬೀಸಿ ಭೀಕರ ನಷ್ಟ ಉಂಟು ಮಾಡುವ ಆ ಬಿರುಗಾಳಿ ಅಲ್ಲ. ಇದು ಆದರ್ಶ ಎಂಟರ್ ಪ್ರೈಸಸ್ ಅವರ ಚೊಚ್ಚಲ ಚಿತ್ರ.ನಟ ಚೇತನ್ ಗೆ ಇದು ಆ ದಿನಗಳು ನಂತರದ ಚಿತ್ರ.

ಮನದಲ್ಲೇ ಉಳಿಯುವ ಉತ್ಸವ ಮಾಗಡಿ ರಂಗನಾಥನ ರಥೋತ್ಸವ ಎಂದೇ ಖ್ಯಾತಿಯಾಗಿರುವ ಮಾಗಡಿ ರಂಗನಾಥನ ಐದು ದಿನದ ರಥೋತ್ಸವವನ್ನು ತೆರೆಯ ಮೇಲೆ ಕಾಣಬೇಕಾದರೆ ಬಿರುಗಾಳಿ ಚಿತ್ರ ನೋಡಬೇಕು. ನಾಯಕಿಯನ್ನು ಪರಿಚಯಿಸುವ ಸನ್ನಿವೇಶಕ್ಕಾಗಿ ನಿರ್ದೇಶಕರು ವಿಜೃಂಭಣೆಯ ರಥೋತ್ಸವವನ್ನು ಚಿತ್ರದಲ್ಲಿ ಬಳಸಿಕೊಂಡಿದ್ದಾರೆ. ಈ ಭಾಗದ ಚಿತ್ರೀಕರಣದಲ್ಲಿ ನಾಯಕ ಚೇತನ್, ಸಿತಾರಾವೈದ್ಯ, ಪವನ್, ಮೈಕೋ ನಾಗರಾಜ್ ಹಾಗೂ ಗಿರಿ ಪಾಲ್ಗೊಂಡಿದ್ದರು.

ಹರ್ಷ ನಿರ್ದೇಶನದ ದ್ವಿತೀಯ ಚಿತ್ರ ಬಿರುಗಾಳಿಗೆ ಅವರೇ ಕಥೆ, ಚಿತ್ರಕಥೆ ಬರೆದಿದ್ದು ನೃತ್ಯ ನಿರ್ದೇಶನದ ಜವಾಬ್ದಾರಿಯನ್ನು ಹೊತ್ತಿದ್ದಾರೆ. ಎಚ್.ಸಿ.ವೇಣು ಛಾಯಾಗ್ರಹಣ, ಅರ್ಜುನ್ ಸಂಗೀತ, ದೀಪು.ಎಸ್.ಕುಮಾರ್ ಸಂಕಲನ, ಯೋಗಾನಂದ್ ಸಂಭಾಷಣೆ, ಡಿಫ಼ರೆಂಟ್ ಡ್ಯಾನಿ ಸಾಹಸ, ಇಸ್ಮಾಯಿಲ್ ಕಲೆ, ಜಯಂತ ಕಾಯ್ಕಿಣಿ, ಕವಿರಾಜ್, ಹೃದಯಶಿವ ಗೀತರಚನೆ, ಮಹೇಶ್ ಮತ್ತು ಯೋಗಿ ಸಹ ನಿರ್ದೇಶನ ಹಾಗೂ ರಮೇಶ್ ಅವರ ನಿರ್ಮಾಣ ನಿರ್ವಹಣೆಯಿರುವ ಚಿತ್ರದ ತಾರಾಬಳಗದಲ್ಲಿ ಚೇತನ್, ಸಿತಾರಾವೈದ್ಯ, ತಾರಾ, ಕಿಶೋರ್, ಗಿರಿ, ಪವನ್, ಮೈಕೋ ನಾಗರಾಜ್, ಪರಮೇಶ್, ಪ್ರತಾಪ್ ಮುಂತಾದವರಿದ್ದಾರೆ.

(ದಟ್ಸ್ ಸಿನಿವಾರ್ತೆ)

ಬಿರುಗಾಳಿಯಾದ ಆ ದಿನಗಳು ಖ್ಯಾತಿಯ ಚೇತನ್

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada