»   » ದರ್ಶನ್ ರ ಕಣ್ಣಂಚಲಿ ಏನೇನೋ ಖುಷಿ!

ದರ್ಶನ್ ರ ಕಣ್ಣಂಚಲಿ ಏನೇನೋ ಖುಷಿ!

Subscribe to Filmibeat Kannada
Darshan's good year, 2008
2008ನೇ ವರ್ಷ ಚಾಲೆಂಜಿಂಗ್ ಸ್ಟಾರ್ ದರ್ಶನ್ ರ ಕಣ್ಣಂಚಲಿ ಏನೇನೊ ಖುಷಿ ತಂದಿದೆ! ನಿರ್ಮಾಪಕರು ಕಾಣದ ದುಡ್ಡನ್ನು ಅವರ ಚಿತ್ರಗಳು ಗಳಿಸಿವೆ.ಗಜ ಚಿತ್ರದಿಂದ ಆರಂಭವಾದ ಅವರ ಯಶಸ್ಸಿನ ಅಲೆ ಇಂದ್ರ, ಅರ್ಜುನ್ ಮತ್ತು ನವಗ್ರಹ ಚಿತ್ರಗಳಲ್ಲೂ ಮುಂದುವರಿಯಿತು. ಒಂದು ಆಶ್ಚರ್ಯಕರವಾದ ವಿಷಯವೆಂದರೆ ದರ್ಶನ್ ರ ಚಿತ್ರಗಳು ನಿಗದಿತ ಸಮಯದಲ್ಲಿ ತೆರೆ ಕಾಣುತ್ತಿರುವುದು. ಗಜ ಮತ್ತು ಇಂದ್ರ ಚಿತ್ರಗಳು ಗಳಿಕೆಯಲ್ಲಿ ಮುನ್ನುಗ್ಗಿದವು. ಅರ್ಜುನ್ ಚಿತ್ರ ಮಾತ್ರಗಳಿಕೆಯಲ್ಲಿ ಒಂಚೂರು ಹಿಂದುಳಿಯಿತು.

ಮುಖ್ಯವಾಗಿ ದರ್ಶನ್ ಈ ವರ್ಷ ಅಪ್ಪ ಎನ್ನಿಸಿಕೊಂಡರು. ಈ ವರ್ಷದ ಸಡಗರ ಸಂಭ್ರಮ ಮುಂದಿನ ವರ್ಷಕ್ಕೂ ಮುಂದುವರಿಯುತ್ತ್ತದೆ ಎಂಬ ವಿಶ್ವಾಸದಲ್ಲಿ ದರ್ಶನ್ ಇದ್ದಾರೆ. ಅವರ ಮುಂದಿನ ಚಿತ್ರ ಅಭಯ್ ಡಿ.5ರಂದು ಸೆಟ್ಟೇರುತ್ತಿದೆ. ಈ ಚಿತ್ರದಲ್ಲೂ ದರ್ಶನ್ ರ ಸಾಹಸ ಮತ್ತು ಅದ್ಭುತ ಸಂಭಾಷಣೆ ಮುಂದುವರಿಯಲಿದೆ. ಹುಡುಗಾಟ ಚಿತ್ರದ ನಿರ್ಮಾಪಕ ಬಾಬು ರೆಡ್ಡಿ ಈ ಚಿತ್ರವನ್ನು ನಿರ್ಮಿಸುತ್ತಿದ್ದಾರೆ. ಮಹೇಶ್ ಬಾಬು ನಿರ್ದೇಶಕ. ನಾಯಕಿಗಾಗಿ ಹುಡುಕಾಟ ನಡೆದಿದೆ. ಛಾಯಾಗ್ರಹಣ ರಮೇಶ್ ಬಾಬು, ಸಂಗೀತ ಹರಿಕೃಷ್ಣ ಅವರದು.

(ದಟ್ಸ್ ಕನ್ನಡ ಚಿತ್ರವಾರ್ತೆ)

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada