For Quick Alerts
  ALLOW NOTIFICATIONS  
  For Daily Alerts

  ವೇದಿಕೆಯಲ್ಲಿ ದರ್ಶನ್ ಪಕ್ಕ ಸುದೀಪ್ ನೋಡಿ ಜನ ಕಂಗಾಲು

  |

  ಬೆಂಗಳೂರಿನ 'ಗೋಲ್ಡ್ ಪಿಂಚ್' ಹೊಟೆಲ್ ನಲ್ಲಿ ನಿನ್ನೆ ನಡೆದ 'ಚಿಂಗಾರಿ' ಚಿತ್ರದ ಆಡಿಯೋ ಬಿಡುಗಡೆ ಅದ್ದೂರಿ ಸಮಾರಂಭದಲ್ಲಿ ಗಮನಸೆಳೆದ ಘಟನೆಯೊಂದು ನಡೆಯಿತು. ಚಾಲೆಂಜಿಂಗ್ ಸ್ಟಾರ್ ದರ್ಶನ್ ಪಕ್ಕ ಮುಖ್ಯ ಅತಿಥಿಯಾಗಿ ಕುಳಿತಿದ್ದರು ಕಿಚ್ಚ ಸುದೀಪ್. ಈ ನಟರಿಬ್ಬರು ಹೆಚ್ಚು ಕಡಿಮೆ ಒಂದೇ ಕಾಲದಲ್ಲಿ ಸ್ಯಾಂಡಲ್ ವುಡ್ ಗೆ ಕಾಲಿಟ್ಟವರು.

  ಗಾಂಧಿನಗರ ಹಾಗೂ ಕನ್ನಡ ಪ್ರೇಕ್ಷಕವರ್ಗವೆಲ್ಲವೂ ಇವರಿಬ್ಬರನ್ನು 'ಕಾಂಪಿಟೀಟರ್ಸ್' ಎಂದೇ ಪರಿಗಣಿಸಿತ್ತು. ಯಾವುದೇ ಸಭೆ, ಸಮಾರಂಭಗಳಲ್ಲಿ ಈ ಜೋಡಿ ಒಟ್ಟಿಗೆ ಕಾಣಿಸಿಕೊಳ್ಳುವುದು ಕಡಿಮೆ. ಆದರೆ ನಿನ್ನೆ ಅಕ್ಕಪಕ್ಕದಲ್ಲಿಯೇ ಕುಳಿತಿದ್ದ ಇಬ್ಬರನ್ನೂ ನೋಡಿ ನೆರೆದಿದ್ದವರು ಕಕ್ಕಾಬಿಕ್ಕಿಯಾಗಲಿಲ್ಲ, ಆದರೆ ಬೆರಗಾಗಿದ್ದಂತೂ ಹೌದು.

  ಅವರಿಬ್ಬರನ್ನು ಒಟ್ಟಿಗೆ ವೇದಿಕೆಯಲ್ಲಿ ಕೂಡ್ರಿಸಿದ ಕೀರ್ತಿ 'ಚಿಂಗಾರಿ' ನಿರ್ಮಾಪಕರಾದ ಮಹಾದೇವ್ ಮತ್ತು ಮನು ಗೌಡ ಅವರಿಗೆ ಸಲ್ಲುತ್ತದೆ. ಕಾರಣ ಅವರಿಬ್ಬರೂ ಫ್ರೀಯಾಗಿದ್ದ ದಿನವೊಂದನ್ನು ಗೊತ್ತುಮಾಡಿ ಒಪ್ಪಿಸಿ, ಒಟ್ಟಿಗೆ ಸೇರಿಸಿದ್ದು ಚಿಕ್ಕ ವಿಷಯವೇನಲ್ಲ. ಒಟ್ಟಿಗೆ ಕಾಣಿಸಿಕೊಂಡಿದ್ದಲ್ಲದೇ ಪರಸ್ಪರ ತಮ್ಮಿಬ್ಬರಲ್ಲಿ ಯಾವುದೇ ಭಿನ್ನಾಭಿಪ್ರಾಯವಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ ಕೂಡ. (ಒನ್ ಇಂಡಿಯಾ ಕನ್ನಡ)

  English summary
  In Darshan movie Chingari Audio release programme, Kichcha Sudeep was the Chief Guest. It was the surprising moment for all, who gathered there. 
 

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X