ಸನ್ ಪಿಕ್ಚರ್ಸ್ ಸಿಇಒ ಹನ್ಸ್ ರಾಜ್ ಸಕ್ಸೇನಾ ಬಂಧನ

ವಿಶಾಲ್ ಅಭಿನಯದ ತೀರ್ಥ ವಿಲಾಯಾತು ಪಿಳ್ಳೈ ಚಿತ್ರದ ವಿತರಣೆ ಹಕ್ಕನ್ನು ಸೇಲಂ ಮೂಲದ ಕಂದನ್ ಫಿಲ್ಮಮ್ ನ ಮಾಲೀಕ ಟಿಎಸ್ ಸೆಲ್ವರಾಜ್ ಅವರಿಗೆ ಮಾರಲು ಒಪ್ಪಂದ ಮಾಡಿಕೊಂಡು ಸನ್ ಪಿಕ್ಚರ್ ಸಂಸ್ಥೆ ಕೈ ಎತ್ತಿದೆ. ಸುಮಾರು 1.25 ಕೋಟಿ ರು ತೆಗೆದುಕೊಂಡಿದ್ದ ಹನ್ಸ್ ರಾಜ್ ಸಕ್ಸೇನಾ, ವಿತರಕರನ್ನು ಕಡೆಗಣಿಸಿ ನೇರವಾಗಿ ಥೇಟರ್ ಮಾಲೀಕರಿಗೆ ಚಿತ್ರದ ರೀಲುಗಳನ್ನು ಒಪ್ಪಿಸಿ ವಂಚಿಸಿದ್ದಾರೆ.
ಕೊನೆಗೆ 82.53 ಲಕ್ಷ ರು ಹಿಂತಿರುಗಿಸುವುದಾಗಿ ಹೇಳಿದ್ದ ಸಕ್ಸೇನಾ ಈ ವರೆಗೂ ಒಂದು ರುಪಾಯಿ ಕೂಡಾ ನೀಡಿಲ್ಲ. ಬದಲಿಗೆ ಬೆದರಿಕೆ ಕರೆಗಳು ಕೂಡಾ ಬರುತ್ತಿವೆ ಎಂದು ಸೆಲ್ವರಾಜ್ ಪೊಲೀಸರಿಗೆ ನೀಡಿರುವ ದೂರಿನಲ್ಲಿ ಹೇಳಿಕೊಂಡಿದ್ದಾರೆ.
ಹೈದರಾಬಾದ್ ಕಡೆಯಿಂದ ಚೆನ್ನೈಗೆ ಬಂದಿಳಿದ ಸಕ್ಸೇನಾರನ್ನು ಕೆಕೆ ನಗರ ಪೊಲೀಸರು ಬಂಧಿಸಿದ್ದಾರೆ. ಜು 17ರ ವರೆಗೆ ಸೈದಾಪೇಟ್ ಸೆರೆಮನೆಯಲ್ಲಿ ಸಕ್ಸೇನಾ ಕಾಲದೂಡಬೇಕಾಗಿದೆ.
ಈ ಹಿಂದೆ ಕೂಡಾ ಸನ್ ಪಿಕ್ಚರ್ಸ್ ಸಿಇಒ ಮೇಲೆ ವಂಚನೆ, ಗೂಂಡಾಗಿರಿ ಆರೋಪಗಳು ಕೇಳಿ ಬಂದಿದ್ದವು. 2010ರಲ್ಲಿ ಸಿದ್ದಾರ್ಥ ಎಂಬುವವರ ಮೇಲೆ ಸುಮಾರು 100 ಗೂಂಡಾಗಳು ದಾಳಿ ನಡೆಸಿದ್ದರು. ಆದರೆ, ಸಿದ್ದಾರ್ಥ ಸ್ವಲ್ಪದರಲ್ಲೇ ತಪ್ಪಿಸಿಕೊಂಡಿದ್ದರು.


Click it and Unblock the Notifications