twitter
    For Quick Alerts
    ALLOW NOTIFICATIONS  
    For Daily Alerts

    ಸನ್ ಪಿಕ್ಚರ್ಸ್ ಸಿಇಒ ಹನ್ಸ್ ರಾಜ್ ಸಕ್ಸೇನಾ ಬಂಧನ

    By Mahesh
    |

    Sun Pictures CEO Hansraj Saxena
    ಕೇಂದ್ರ ಸಚಿವ ದಯಾನಿಧಿ ಮಾರನ್ ಅವರ ತಮ್ಮ ಕಲಾನಿಧಿ ಮಾರನ್ ಒಡೆತನದ ಸನ್ ಪಿಕ್ಚರ್ಸ್ ಸಂಸ್ಥೆಯ ಮುಖ್ಯ ಕಾರ್ಯನಿರ್ವಹಣಾಧಿಕಾರಿ(ಸಿಇಒ) ಹನ್ಸ್ ರಾಜ್ ಸಕ್ಸೇನಾ ಅವರನ್ನು ವಿಮಾನ ನಿಲ್ದಾಣದಲ್ಲಿ ಬಂಧಿಸಲಾಗಿದೆ. ಸೇಲಂ ಮೂಲದ ಚಿತ್ರವಿತಕರು ನೀಡಿದ ದೂರಿನ ಮೇರೆಗೆ ಹನ್ಸರಾಜ್ ವಂಚನೆ ಆರೋಪ ಎದುರಿಸುತ್ತಿದ್ದಾರೆ.

    ವಿಶಾಲ್ ಅಭಿನಯದ ತೀರ್ಥ ವಿಲಾಯಾತು ಪಿಳ್ಳೈ ಚಿತ್ರದ ವಿತರಣೆ ಹಕ್ಕನ್ನು ಸೇಲಂ ಮೂಲದ ಕಂದನ್ ಫಿಲ್ಮಮ್ ನ ಮಾಲೀಕ ಟಿಎಸ್ ಸೆಲ್ವರಾಜ್ ಅವರಿಗೆ ಮಾರಲು ಒಪ್ಪಂದ ಮಾಡಿಕೊಂಡು ಸನ್ ಪಿಕ್ಚರ್ ಸಂಸ್ಥೆ ಕೈ ಎತ್ತಿದೆ. ಸುಮಾರು 1.25 ಕೋಟಿ ರು ತೆಗೆದುಕೊಂಡಿದ್ದ ಹನ್ಸ್ ರಾಜ್ ಸಕ್ಸೇನಾ, ವಿತರಕರನ್ನು ಕಡೆಗಣಿಸಿ ನೇರವಾಗಿ ಥೇಟರ್ ಮಾಲೀಕರಿಗೆ ಚಿತ್ರದ ರೀಲುಗಳನ್ನು ಒಪ್ಪಿಸಿ ವಂಚಿಸಿದ್ದಾರೆ.

    ಕೊನೆಗೆ 82.53 ಲಕ್ಷ ರು ಹಿಂತಿರುಗಿಸುವುದಾಗಿ ಹೇಳಿದ್ದ ಸಕ್ಸೇನಾ ಈ ವರೆಗೂ ಒಂದು ರುಪಾಯಿ ಕೂಡಾ ನೀಡಿಲ್ಲ. ಬದಲಿಗೆ ಬೆದರಿಕೆ ಕರೆಗಳು ಕೂಡಾ ಬರುತ್ತಿವೆ ಎಂದು ಸೆಲ್ವರಾಜ್ ಪೊಲೀಸರಿಗೆ ನೀಡಿರುವ ದೂರಿನಲ್ಲಿ ಹೇಳಿಕೊಂಡಿದ್ದಾರೆ.

    ಹೈದರಾಬಾದ್ ಕಡೆಯಿಂದ ಚೆನ್ನೈಗೆ ಬಂದಿಳಿದ ಸಕ್ಸೇನಾರನ್ನು ಕೆಕೆ ನಗರ ಪೊಲೀಸರು ಬಂಧಿಸಿದ್ದಾರೆ. ಜು 17ರ ವರೆಗೆ ಸೈದಾಪೇಟ್ ಸೆರೆಮನೆಯಲ್ಲಿ ಸಕ್ಸೇನಾ ಕಾಲದೂಡಬೇಕಾಗಿದೆ.

    ಈ ಹಿಂದೆ ಕೂಡಾ ಸನ್ ಪಿಕ್ಚರ್ಸ್ ಸಿಇಒ ಮೇಲೆ ವಂಚನೆ, ಗೂಂಡಾಗಿರಿ ಆರೋಪಗಳು ಕೇಳಿ ಬಂದಿದ್ದವು. 2010ರಲ್ಲಿ ಸಿದ್ದಾರ್ಥ ಎಂಬುವವರ ಮೇಲೆ ಸುಮಾರು 100 ಗೂಂಡಾಗಳು ದಾಳಿ ನಡೆಸಿದ್ದರು. ಆದರೆ, ಸಿದ್ದಾರ್ಥ ಸ್ವಲ್ಪದರಲ್ಲೇ ತಪ್ಪಿಸಿಕೊಂಡಿದ್ದರು.

    English summary
    Chief Operating Officer (CEO) Hansraj Saxena was arrested based on the complaint by a distributor. Sun Pictures is owned by Kalanidhi Maran, brother of Union minister Dayanidhi Maran.
    Monday, July 4, 2011, 10:46
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X