»   » ಬ್ಯಾಂಗ್‌ಕಾಕ್‌ನಲ್ಲಿ ಗಂಗಾ ಕಾವೇರಿ ಚಿತ್ರೀಕರಣ

ಬ್ಯಾಂಗ್‌ಕಾಕ್‌ನಲ್ಲಿ ಗಂಗಾ ಕಾವೇರಿ ಚಿತ್ರೀಕರಣ

Subscribe to Filmibeat Kannada

'ಅಮೃತ ವಾಹಿನಿಯೊಂದು ಹರಿಯುತ್ತಿದೆ ಮಾನವನ ಎದೆಯಿಂದ ಎದೆಗೆ ಸತತ ಎನ್ನುವ ಹಾಗೆ ನಮ್ಮ ಗಂಗಾ ಕಾವೇರಿಯರೂ ಬ್ಯಾಂಗ್‌ಕಾಕ್ ಕಡೆ ತಮ್ಮ ಪಥವನ್ನು ಬದಲಿಸಿದ್ದಾರೆ. ಅರ್ಥಾತ್ ದೇಶ ವಿದೇಶಗಳಲ್ಲಿ ಭರದಿಂದ ಚಿತ್ರೀಕರಣ ಮುಗಿಸಿದೆ.

ಅಕ್ಷಯ್ ಪ್ರೊಡಕ್ಷನ್ಸ್ ಲಾಂಛನದಲ್ಲಿ ಆರ್.ವೆಂಕಟ್ಟಪ್ಪ ಅವರು ನಿರ್ಮಿಸುತ್ತಿರುವ 'ಗಂಗಾ ಕಾವೇರಿಯ 35 ಸದಸ್ಯರ ತಂಡ ಕಳೆದವಾರ ಬ್ಯಾಂಗ್‌ಕಾಕ್‌ಗೆ ಪ್ರಯಾಣ ಬೆಳೆಸಿ ಪಟ್ಟಾಯ, ಸಮುದ್ರದಂಡೆ ಹಾಗೂ ಡಿಸ್ಕೋಮಹಲುಗಳಲ್ಲಿ ಚಿತ್ರಕ್ಕೆ ಐದು ದಿನಗಳ ಚಿತ್ರೀಕರಣ ಮುಗಿಸಿ ಇಂದು ನಗರಕ್ಕೆ ಆಗಮಿಸಿದೆ.

ಬ್ಯಾಂಗ್‌ಕಾಕ್‌ನ ವೈಭವಯುತ ಬೀದಿಗಳಲ್ಲಿ 'ಬಾರ ಬಾರ ದೊಸ್ತಿ - ಮಸ್ತಿ ನೋಡೋ ಕಣ್ಣಿನ ಕ್ಯಾಮೆರಾದಲ್ಲಿ ಸೌಂದರ್ಯ ಸೆಳೆಯುವ' ಎಂಬ ಕಲ್ಯಾಣ್ ಬರೆದಿರುವ ಈ ಗೀತೆಯೂ ಚಿತ್ರೀಕೃತವಾಯಿತು. ನಾಯಕ ಅಕ್ಷಯ್ ಅಭಿನಯಿಸುವ ಈ ಗೀತೆಗೆ ಚಿನ್ನಿಪ್ರಕಾಶ್ ಹಾಗೂ ಸುರೇಖಾ ಚಿನ್ನಿಪ್ರಕಾಶ್ ನೃತ್ಯ ಸಂಯೋಜಿಸಿದರು.

ಗಂಗೆಯ ತಟದಲ್ಲಿ ಪ್ರಾರಂಭವಾಗಿ ಕಾವೇರಿ ಮಡಿಲಲ್ಲೂ ಚಿತ್ರೀಕೃತವಾಗಿರುವ ಈ ಚಿತ್ರದ ನಿರ್ದೇಶಕರು ವಿಷ್ಣುಕಾಂತ್. ಶ್ರೀಮಂತಿಕೆಯಿಂದ ಕೂಡಿರುವ ಪ್ರಕೃತಿಯ ಸೊಬಗನ್ನು ಕ್ಯಾಮೆರಾದಲ್ಲಿ ಸೆರೆಹಿಡಿಯುತ್ತಿರುವವರು ಛಾಯಾಗ್ರಾಹಕ ಎಚ್.ಸಿ.ವೇಣು. ಚಿತ್ರಕ್ಕೆ ಮಾಧುರ್ಯ ತುಂಬಿದ ಗೀತೆಗಳನ್ನು ರಚಿಸಿರುವುದಲ್ಲದೇ ಸಂಗೀತವನ್ನು ಪ್ರೇಮ ಕವಿ ಕೆ.ಕಲ್ಯಾಣ್ ಸಂಯೋಜಿಸಿದ್ದಾರೆ. ಉಳಿದಂತೆ ಬಿ.ಎ.ಮಧು ಸಂಭಾಷಣೆ, ಫೈವ್ ಸ್ಟಾರ್ ಗಣೇಶ್ ನೃತ್ಯ, ಕೌರವ ವೆಂಕಟೇಶ್ ಸಾಹಸ, ಕೃಷ್ಣಾಚಾರ್ ಕಲೆ, ಪುರುಷೋತ್ತಮ್ ಸಹನಿರ್ದೇಶನ, ರಂಗಸ್ವಾಮಿ ಅವರ ನಿರ್ಮಾಣ ನಿರ್ವಹಣೆಯಿರುವ ಚಿತ್ರದ ತಾರಾಬಳಗದಲ್ಲಿ ಅಕ್ಷಯ್, ಮಲ್ಲಿಕಾ ಕಪೂರ್. ಮಾಯಿ, ಅನಂತನಾಗ್, ರೂಪಾದೇವಿ, ತಾರಾ, ಶರಣ್, ಚಿತ್ರಾಶೆಣೈ, ರಮೇಶ್‌ಭಟ್ ಅವರಲ್ಲದೇ ಪತ್ರಕರ್ತರಾದ ಗಣೇಶ್‌ಕಾಸರಗೋಡು ಹಾಗೂ ಬಿ.ಗಣಪತಿ ಅಭಿನಯಿಸಿರುವುದು ವಿಶೇಷ.

(ದಟ್ಸ್ ಕನ್ನಡ ಸಿನಿ ವಾರ್ತೆ)
ಥೈಲ್ಯಾಂಡ್ ನಲ್ಲಿ ಗಂಗಾ ಕಾವೇರಿ ಚಿತ್ರತಂಡದ ರಸನಿಮಿಷಗಳು

Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada