»   » 'ಹೀಗೂ ಉಂಟೆ' ಗಾರ್ಮೆಂಟ್ ಲೋಕದ ಸುತ್ತ

'ಹೀಗೂ ಉಂಟೆ' ಗಾರ್ಮೆಂಟ್ ಲೋಕದ ಸುತ್ತ

Subscribe to Filmibeat Kannada

'ಹೀಗೂ ಉಂಟೆ' ಎಂದ ಕೂಡಲೇ ನಾರಾಯಣಸ್ವಾಮಿ ನಿರೂಪಿಸುತ್ತಿರುವ ಟಿವಿ9 ವಾಹಿನಿಯ ತರ್ಕಕ್ಕೆ ನಿಲುಕದ ಕಾರ್ಯಕ್ರಮ ನೆನಪಾಗುತ್ತದೆ. ಈಗ ಅದೇ ಶೀರ್ಷಿಕೆ ಆಧಾರಿಸಿ ಕನ್ನಡ ಸಿನೆಮಾ ಒಂದನ್ನು ಮದನ್ ಪಟೇಲ್ ನಿರ್ಮಿಸುತ್ತಿದ್ದಾರೆ.ಗಾರ್ಮೆಂಟ್ ಕಾರ್ಖಾನೆಗಳಲ್ಲಿ ಶೋಷಣೆಗೆ ಒಳಗಾಗುತ್ತಿರುವ ಮಹಿಳೆಯರ ಕಥೆ ಆಧರಿಸಿ ಮೀಡಿಯಾ ಇಂಟರ್ ನ್ಯಾಷನಲ್ ಸಂಸ್ಥೆ ಲಾಂಛನದಡಿಯಲ್ಲಿ ಮದನ್‌ಪಟೇಲ್ ನಿರ್ಮಿಸುತ್ತಿರುವ 'ಹೀಗೂ ಉಂಟೆ' ಚಿತ್ರ ಪ್ರೇಕ್ಷಕ ಹಾಗೂ ಉದ್ಯಮದಲ್ಲಿ ಕುತೂಹಲ ಮೂಡಿಸಿದೆ.

ಚಿತ್ರದ ಚಿತ್ರೀಕರಣ ಬಿರುಸಿನಿಂದ ಸಾಗುತ್ತಿದ್ದು ಇತ್ತೀಚೆಗೆ ಬೆಂಗಳೂರಿನ ಪಲ್ಲವಿ ಚಿತ್ರಮಂದಿರದ ನೆಲಮಾಳಿಗೆಯಲ್ಲಿರುವ ಡಿಸ್ಕೊಕ್ಲಬ್‌ನಲ್ಲಿ ಹೆಸರಾಂತ ಕ್ಯಾಬರೆ ನೃತ್ಯಗಾರ್ತಿ ಅಭಿನಯಶ್ರೀ ಅವರ ಅಭಿನಯದಲ್ಲಿ ''ಈ ಏಜು ಎಂಗೇಜು ಯಾಮಾರ್‍ದೇ ಸುಖ ಪಡೆಯೋ ಗೆಳೆಯ ಈ ಹೊತ್ತು ಸಖತ್ ಅನುಭವಿಸು'' ಎಂಬ ಗೀತೆಯನ್ನು ಚಿತ್ರೀಕರಿಸಿಕೊಳ್ಳಲಾತು. ಆನಂದ್‌ರಾಮ್ ಬರೆದಿರುವ ಈ ಮತ್ತೇರಿಸುವ ಗೀತೆಯ ಚಿತ್ರೀಕರಣಕ್ಕೆ ಸಂಪತ್‌ರಾಜ್ ನೃತ್ಯ ನಿರ್ದೇಶನ ಮಾಡಿದರು.

ಸಿದ್ದಉಡುಪು ತಯಾರಿಕ ಕಾರ್ಖಾನೆಯಲ್ಲಾಗುವ ಅಸಹಜ ಘಟನೆಗಳನ್ನು ಪರಿಚಯಿಸುವ 'ಹೀಗೂ ಉಂಟೆ' ಚಿತ್ರಕ್ಕೆ ಮದನ್‌ಪಟೇಲ್ ಅವರೇ ಕಥೆ, ಚಿತ್ರಕಥೆ ಬರೆದು ನಿರ್ಮಾಣ ಮಾಡಿ ನಿರ್ದೇಶಿಸುತ್ತಿದ್ದಾರೆ. ಜೆ.ಜಿ.ಕೃಷ್ಣರ ಛಾಯಾಗ್ರಹಣವಿರುವ ಈ ಚಿತ್ರದ ತಾರಾಬಳಗದಲ್ಲಿ ಕಂಚನ್, ಅರವಿಂದ್, ನಿಶಿತಗೌಡ, ವನಿತಾ, ಜೈ ಆಕಾಶ್, ರ್ಹತಾ, ರಕ್ಷಾ, ರವಿತೇಜ, ಆರ್ಯ, ಪ್ರಕಾಶ್, ಮಧುಗೋಮತಿ, ಸಂತೋಷ್, ನವೀನ್‌ಚಂದ್ರ, ದೇವಿಕಾ, ಅಭಿಷೇಕ್ ಮುಂತಾದವರಿದ್ದಾರೆ. ಪೊಷಕ ಪಾತ್ರದಲ್ಲಿ ರಂಗಾಯಣ ರಘು ಸಹ ನಟಿಸುತ್ತಿದ್ದಾರೆ.

(ದಟ್ಸ್‌ಕನ್ನಡ ಸಿನಿವಾರ್ತೆ)

Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada