ಹೇಮಂತ್ ಹೆಗ್ಡೆಗೆ ನಿಂಬೆಹುಳಿ ಹಿಂಡಿದ ಜಗ್ಗೇಶ್ ?!

ನಿಂಬೆಹುಳಿಯ ರೂವಾರಿ ಹೇಮಂತ್ ಹೆಗ್ಡೆ ಚಾರ್ಲಿ ಚಾಪ್ಲಿನ್ ಸ್ಟ್ಯಾಚ್ಯೂ ತರಹ ನಿಂತಿದ್ದು ಕೆಳಗಡೆ ಜಗ್ಗೇಶ್ ಬೇಸ್ ಒಡೆಯುವ ಕಾಯಕದಲ್ಲಿ ತೊಡಗಿರುವ ಇಮೇಜ್ ಜಾಹೀರಾತಿಗೆ ಬಳಸಿಕೊಳ್ಳಲಾಗಿದೆ. ಒಂದು ಪಕ್ಕದಲ್ಲಿ ಹಸು-ಸಾದುಕೋಕಿಲ ಚಿತ್ರ ಇದೆ. ನಿರ್ಮಾಪಕರ ಸಂಘ ನಿಖಿತಾರನ್ನು ಓಡಿಸುತ್ತಿರುವ ಕಾರ್ಟೂನ್ ಅಲ್ಲೇ ಪಕ್ಕದಲ್ಲಿದೆ. ಅನುಪಮ್ ಖೇರ್ ಆಪರೇಷನ್ ಮಾಡುತ್ತಿರುವ ಚಿತ್ರದ ಪಕ್ಕ ತುಂಡುಡುಗೆ ತೊಟ್ಟ ಲಲನೆಯ ಚಿತ್ರ ಇನ್ನೊಂದು ಪಕ್ಕದಲ್ಲಿದೆ. ಇಷ್ಟೆಲ್ಲಾ ಈ ಚಿತ್ರದಲ್ಲಿ ಇರುವ ಬಗ್ಗೆ ಸೂಚನೆ ಇಲ್ಲಿದೆ.
ಶೋಮ್ಯಾನ್ ಸುಭಾಷ್ ಘೈ ಅರ್ಪಿಸುವ ಮ್ಯಾಡ್ ವರ್ಲ್ಡ್ ಈ ನಿಂಬೆಹುಳಿ ಎಂದೇ ಬಿಂಬಿಸಲಾಗಿದೆ. ಕಾರ್ಟೂನ್ ಚಿತ್ರಗಳ ಮೂಲಕ ಸಂಪೂರ್ಣ ಹಾಸ್ಯಮಯ ಎನ್ನಿಸುವಂತಹ ಈ ಚಿತ್ರಕ್ಕೆ ಪಕ್ಕಾ ಕ್ಲಾಸಿಕಲ್ ಬೇಸ್ ಸಂಗೀತ ನಿರ್ದೇಶಕ ವೀರ್ ಸಮರ್ಥ್ ಸಂಗೀತ ಇರುವುದನ್ನು ಜಾಹೀರಾತನ್ನು ನೋಡಿ ನಂಬಲೇಬೇಕು. ಈಗಾಗಲೇ ಏನೇನು ಮಾಡ್ತೀವಿ ನೋಡ್ತಾ ಇರಿ ಎಂಬಂತೆ ಮಾತನಾಡುತ್ತಿರುವ ಹೇಮಂತ್ ಹೆಗ್ಡೆ ಏನ್ ಮಾಡಲ್ಲ ಎಂಬುದು ಈಗಿರುವ ಪ್ರಶ್ನೆ! ಶೂಟಿಂಗ್ ನಡೀತಿದೆಯಂತೆ, ತೆರೆಗೆ ಬರೋವರ್ಗೂ ಕಾಯಿರಿ ಅಂತಿದಾರೆ ಹೇಮಂತ್ ಹೆಗ್ಡೆ.
ನಿಂಬೆಹುಳಿ ಇಲ್ಲದೆಯೂ ಗಾಂದಿನಗರವೆಂಬ ಕ್ಷೀರಸಾಗರ ಆಗಾಗ ಒಡೆಯುತ್ತಲೇ ಇರುತ್ತದೆ. ಇನ್ನು ನಿಂಬೆಹುಳಿ ಬಂದಮೇಲೆ ಏನಾಗುತ್ತೋ..!


Click it and Unblock the Notifications