twitter
    For Quick Alerts
    ALLOW NOTIFICATIONS  
    For Daily Alerts

    ನಟ ಕರಿಬಸವಯ್ಯ ಕಾರು ಅಪಘಾತಕ್ಕೀಡಾಗಿದ್ದು ಹೇಗೆ?

    By *ಉದಯರವಿ
    |
    <ul id="pagination-digg"><li class="next"><a href="/news/04-karibasavaiah-car-accident-dingri-truth-aid0052.html">Next »</a></li></ul>

    ಹಾಸ್ಯ ನಟ, ರಂಗಭೂಮಿ ಕಲಾವಿದ ಹಾಗೂ ಹರಿಕಥೆ ವಿದ್ವಾನ್ ಕರಿಬಸವಯ್ಯ ಅವರ ದಿಢೀರ್ ಕಣ್ಮರೆ ಕನ್ನಡ ಚಿತ್ರರಂಗಕ್ಕೆ ಭರಿಸಲಾಗದ ನಷ್ಟ ತಂದಿದೆ. ಅವರು ಕನಕಪುರದಿಂದ ಬೆಂಗಳೂರಿಗೆ ಹಿಂತಿರುಗಬೇಕಾದರೆ ತಲಘಟ್ಟಪುರ ಬಳಿ ಅವರ ಕಾರು ಮರಕ್ಕೆ ಗುದ್ದಿ ಅಪಘಾತ ಸಂಭವಿಸಿತ್ತು. ಈ ನೋವಿನ ಘಟನೆ ಬಗ್ಗೆ ಮತ್ತೊಬ್ಬ ಹಾಸ್ಯ ಕಲಾವಿದ ಡಿಂಗ್ರಿ ನಾಗರಾಜ್ ದುಃಖದಲ್ಲೇ ಹೇಳಿದ್ದು ಹೀಗೆ. ಓವರ್ ಟು ಡಿಂಗ್ರಿ ನಾಗರಾಜ್.

    "ಅಪಘಾತಕ್ಕೀಡಾಗಿ ಅವರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಅವನನ್ನು ನಾವೆಲ್ಲಾ ಕೆಬಿ ಎಂದೇ ಕರೆಯುತ್ತಿದ್ದೆವು. ನೋಡಲು ಹೋದಾಗ ಗೊಳೋ ಎಂದು ಅಳುತ್ತಿದ್ದ. ನನ್ನ ಬಳಿ ಏನೂ ಮಾತನಾಡಲಿಲ್ಲ. ಕೇವಲ ಕಣ್ಣೀರು. ಏನೂ ಆಗಲ್ಲ ಸುಮ್ಮನಿರೋ ಎಂದು ಸಮಾಧಾನ ಮಾಡಿದ್ದೆ. ಅವನ ಪರಿಸ್ಥಿಯನ್ನು ನೋಡಿ ಅಲ್ಲಿ ಹೆಚ್ಚು ಹೊತ್ತು ಇರಲಿಕ್ಕೆ ಆಗಲಿಲ್ಲ.

    ಫೆಬ್ರವರಿ 7ರಂದು ನನ್ನದೊಂದು ಕಾರ್ಯಕ್ರಮವಿತ್ತು. ಅದಕ್ಕೆ ತಪ್ಪದೆ ಬರುತ್ತೇನೆ ಎಂದು ಪ್ರಾಮಿಸ್ ಮಾಡಿದ್ದ. ಬಹುಶಃ ಅದನ್ನು ನೆನೆಸಿಕೊಂಡು ಅಳುತ್ತಿದ್ದ ಎಂದು ಕಾಣುತ್ತದೆ. ಅವನು ಯಾರದೋ ನಾಮಕರಣ ಸಮಾರಂಭಕ್ಕೆ ಹೋಗಬೇಕಾಗಿತ್ತು. ಆದರೆ ಸಮಯಕ್ಕೆ ಹೋಗಲು ಆಗಿರಲಿಲ್ಲ. ಸರಿ ಎಂದು ಅವರಿಗೆ ವಿಶ್ ಮಾಡಲು ರಾತ್ರಿ 12 ಗಂಟೆಗೆ ಸ್ವತಃ ಕಾರು ಚಾಲನೆ ಮಾಡಿಕೊಂಡು ಹೋಗಿದ್ದ.

    ಅರ್ಧರಾತ್ರಿಯಲ್ಲಿ ಕರಿಬಸವಣ್ಣ ಬಂದದ್ದನ್ನು ನೋಡಿ ಮನೆಯವರಿಗೆಲ್ಲಾ ಖುಷಿಪಟ್ಟಿದ್ದರು. ರಾತ್ರಿ ಇಲ್ಲೇ ಉಳಿದು ಬೆಳಗ್ಗೆ ಹೋಗಿಯಣ್ಣ ಎಂದು ಉಳಿದುಕೊಳ್ಳಲು ವ್ಯವಸ್ಥೆ ಮಾಡಿದ್ದರು. ಆದರೆ ಬೆಳಗಿನ ಜಾವ 3ಕ್ಕೆ ಎಚ್ಚರವಾಗಿದೆ, ಹೊರಡಲು ಸಿದ್ಧನಾಗಿದ್ದಾನೆ. ಯಾಕಣ್ಣ ಇಷ್ಟೊತ್ತಿಗೆ ಹೋಗುತ್ತಿದ್ದೀರಾ. ಬೆಳಗ್ಗೆ 5 ಗಂಟೆಗೆ ಹೋಗಬಹುದಲ್ವಾ? ಎಂದಿದ್ದಾರೆ ಪರಿಚಯದವರು.

    <ul id="pagination-digg"><li class="next"><a href="/news/04-karibasavaiah-car-accident-dingri-truth-aid0052.html">Next »</a></li></ul>

    English summary
    Talented artiste, comedian and Harikatha Vidwan, Karibasavaiah passed away on Friday. He met with an accident on January 31. Actually how the accident happened? His close associate and comedy actor Dingry Nagaraj explained the incident.
    Saturday, February 4, 2012, 15:24
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X