»   » ಗೂಂಡಾ ಕಾಯ್ದೆ ಜಾರಿಗೆ ಜಯಮಾಲಾ ಆಗ್ರಹ

ಗೂಂಡಾ ಕಾಯ್ದೆ ಜಾರಿಗೆ ಜಯಮಾಲಾ ಆಗ್ರಹ

Subscribe to Filmibeat Kannada

ಬೆಂಗಳೂರು, ಜು.4: ನಕಲಿ ಸಿಡಿ ಹಾವಳಿಯನ್ನು ತಡೆಗಟ್ಟಿ ಗೂಂಡಾ ಕಾಯಿದೆ ಜಾರಿಗೊಳಿಸಲು ಹಾಗೂ ಕನ್ನಡ ಚಿತ್ರೋದ್ಯಮಕ್ಕಾಗಿ ದುಡಿದ ಅಶಕ್ತರಿಗೆ ನಿವೇಶನ ಒದಗಿಸಬೇಕೆಂದು ಚಲನಚಿತ್ರ ವಾಣಿಜ್ಯ ಮಂಡಲಿಯ ಅಧ್ಯಕ್ಷೆ ಜಯಮಾಲಾ ಶುಕ್ರವಾರ ಆಗ್ರಹಿಸಿದ್ದಾರೆ.

ಅಶ್ಲೀಲ, ಹಿಂಸಾತ್ಮಕ ಹಾಗೂ ರೀಮೇಕ್ ಚಿತ್ರಗಳನ್ನು ಹೊರತುಪಡಿಸಿ ಉಳಿದ ಎಲ್ಲಾ ಕನ್ನಡ ಚಿತ್ರಗಳಿಗೆ 10 ಲಕ್ಷ ರು.ಗಳ ಸಹಾಯಧನ ನೀಡಬೇಕು. ಸಿನಿಮಾಟೋಗ್ರಫಿ ಕಾಯಿದೆಯನ್ನು ಸರಳೀಕರಣಗೊಳಿಸಿ ಚಿತ್ರೀಕರಣದಲ್ಲಿ ಎದುರಾಗುತ್ತಿರುವ ಸಮಸ್ಯೆಗಳನ್ನು ಪರಿಹರಿಸಬೇಕು ಎಂದು ಅವರು ಪತ್ರಿಕಾಗೋಷ್ಠಿಯಲ್ಲಿ ಆಗ್ರಹಿಸಿದರು.

ಕನ್ನಡ ಚಿತ್ರಗಳ ಮಾರುಕಟ್ಟೆ ವಿಸ್ತರಣೆಗೆ ಹಾಗೂ ಪ್ರಸಕ್ತ ವರ್ಷ ಅಂತರಾಷ್ಟ್ರೀಯ ಮಹಿಳಾ ವರ್ಷವಾಗಿರುವುದರಿಂದ ಮಹಿಳಾ ಪ್ರಧಾನ ಚಿತ್ರಗಳಿಗೆ 25 ಲಕ್ಷ ರು.ಗಳ ಅನುದಾನ ನೀಡಬೇಕು. ಜೊತೆಗೆ ವಾಣಿಜ್ಯ ಮಂಡಳಿಯ ಅಮೃತ ಮಹೋತ್ಸವ ಸಮಾರಂಭಕ್ಕೆ ಬಜೆಟ್‌ನಲ್ಲಿ ಪ್ರತ್ಯೇಕ ನಿಧಿ ಒದಗಿಸುವಂತೆ ಅವರು ಮನವಿ ಮಾಡಿಕೊಂಡರು. ಮಂಡಳಿಯ ನೀತಿ ನಿಯಮಗಳ ಅನುಸಾರ ಉದ್ಯಮದವರನ್ನು ನೋಡಿಕೊಳ್ಳುವ ಭರವಸೆಯನ್ನೂ ಕೊಟ್ಟರು.

ಪತ್ರಿಕಾಗೋಷ್ಠಿಯಲ್ಲಿ ವಾಣಿಜ್ಯ ಮಂಡಳಿಯ ಉಪಾಧ್ಯಕ್ಷರಾದ ರಾಕ್‌ಲೈನ್ ವೆಂಕಟೇಶ್, ಸುರೇಶ್, ಕಾರ್ಯದರ್ಶಿಗಳಾದ ಎನ್.ಕುಮಾರ್, ವಿಜಯ ಕುಮಾರ್, ಖಜಾಂಚಿ ಸಾ.ರಾ.ಗೋವಿಂದು ಉಪಸ್ಥಿತರಿದ್ದರು.

(ದಟ್ಸ್‌ಕನ್ನಡ ವಾರ್ತೆ)

ಕೆಎಫ್ ಸಿಸಿ ಅಧ್ಯಕ್ಷರಾಗಿ ಜಯಮಾಲಾ

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada