ಸದಭಿರುಚಿ ಚಿತ್ರಗಳ ಕಲಾಕರ್ ಹರೀಶ್ ರಾಜ್

ಇತ್ತೀಚೆಗೆ ಸ್ಯಾಂಕಿರಸ್ತೆ, ಬ್ರಿಗೇಡ್‌ರಸ್ತೆ. ಮಹಾತ್ಮಗಾಂಧಿರಸ್ತೆಗಳಲ್ಲಿ ಚಿತ್ರದ 'ಮನಸೆ ಯಾವ ರಾಗದಲ್ಲಿ ನಾ ಹಾಡಲಿ, ಒಲವ ಗೀತೆಯ. .'ಎಂಬ ಗೀತೆ ಚಿತ್ರೀಕೃತವಾಯಿತು. ವಿ.ಮನೋಹರ್ ಬರೆದಿರುವ ಈ ಗೀತೆಯನ್ನು ಸೂರ್ಯ ಮೂಡುವ ಹಾಗೂ ಮುಳುಗುವ ಸಮಯದ ಸುಂದರ ವಾತಾವರಣದಲ್ಲಿ ಛಾಯಾಗ್ರಾಹಕ ಎಚ್.ಎಂ.ರಾಮಚಂದ್ರ ಸೆರೆಹಿಡಿದಿದ್ದಾರೆ. ಮಂಗಳ ಮತ್ತು ರಾಜೇಶ್‌ಕೃಷ್ಣನ್ ಹಾಡಿರುವ ಈ ಗೀತೆಯ ಚಿತ್ರೀಕರಣದಲ್ಲಿ ನಾಯಕ ಹರೀಶ್‌ರಾಜ್ ಹಾಗೂ ರಾಧಿಕಾಗಾಂಧಿ ಭಾಗವಹಿಸಿದ್ದರು.
ನಾಯಕನಾಗಿ ಕಾಣಿಸಿಕೊಳ್ಳುತ್ತಿರುವ ಹರೀಶ್‌ರಾಜ್ ಅವರು 'ದಿ ಬೆಂಗಳೂರು ಕಂಪನಿ ಪಿಕ್ಚರ್ಸ್ ಸಂಸ್ಥೆ' ಲಾಂಛನದಲ್ಲಿ ಈ ಚಿತ್ರವನ್ನು ನಿರ್ಮಿಸುತ್ತಿರುವುದ್ದಲ್ಲದೆ ನಿರ್ದೇಶನದ ಜವಾಬ್ದಾರಿಯನ್ನು ಹೊತ್ತಿದ್ದಾರೆ. ನಿರ್ದೇಶಕರೇ ಚಿತ್ರಕ್ಕೆ ಕತೆ, ಚಿತ್ರಕತೆಯನ್ನೂ ಬರೆದಿದ್ದಾರೆ. ಗಿರಿಧರ್ ದಿವಾನ್ ಸಂಗೀತ, ಎಚ್.ಎಂ.ರಾಮಚಂದ್ರ ಛಾಯಾಗ್ರಹಣ, ಶ್ರೀ(ಕ್ರೇಜಿ ಮೈಂಡ್ಸ್) ಸಂಕಲನವಿರುವ ಚಿತ್ರದ ಉಳಿದ ತಾರಾಬಳಗದಲ್ಲಿ ಸುಮನ್‌ರಂಗನಾಥ್, ರಾಧಿಕಾಗಾಂಧಿ, ಸುಧಾನರಸಿಂಹರಾಜು, ಅವಿನಾಶ್(ಹಾಸ್ಯಚಕ್ರವರ್ತಿ ನರಸಿಂಹರಾಜು ಅವರ ಮೊಮ್ಮಗ), ರಾಜಾರಾವ್, ವಿಶ್ವ ಕಾಣಿಸಲಿದ್ದಾರೆ.
(ದಟ್ಸ್ ಸಿನಿವಾರ್ತೆ)


Click it and Unblock the Notifications











