ಬಾಕ್ಸ್ ಆಫೀಸಿನಲ್ಲಿ ಜಾಕಿ ಧಾಂಧೂಂ ಪಟಾಕಿ!

ಆದರೆ ಗಾಂಧಿನಗರದ ಗಾಸಿಪ್ ಪ್ರಕಾರ ಚಿತ್ರದ ಗಳಿಕೆ 23 ಕೋಟಿ ಮೀರಿದೆ. ಒಂದು ಮೂಲಗಳ ಪ್ರಕಾರ, ರಜನೀಕಾಂತ್ ಚಿತ್ರಕ್ಕೆ ಒಳ್ಳೆ ಮಾರುಕಟ್ಟೆ ಇರುವ ಬೆಂಗಳೂರಿನಲ್ಲಿ ಎಂಧಿರನ್ ಚಿತ್ರ ಜಾಕಿ ಮುಂದೆ ತೀವ್ರ ಹಿನ್ನಡೆ ಅನುಭವಿಸಿದೆ ಎನ್ನಲಾಗಿದೆ.
127 ಚಿತ್ರಮಂದಿರದಲ್ಲಿ ಬಿಡುಗಡೆಗೊಂಡಿದ್ದ ಜಾಕಿ, ಮೊದಲ ವಾರದಲ್ಲಿ 10 ಕೋಟಿ ರು. ಎರಡನೇ ವಾರದಲ್ಲಿ 9 ಕೋಟಿ ರು. ಗಳಿಕೆ ದಾಖಲಿಸಿತ್ತು. ಕಳೆದ ವಾರ ನಾಲ್ಕು ಚಿತ್ರಗಳು ಬಿಡುಗಡೆಗೊಂಡ ನಂತರ, ಜಾಕಿ ಚಿತ್ರ ಮೂರನೇ ವಾರದ ಗಳಿಕೆಯಲ್ಲಿ ಶೇ. 20ರಷ್ಟು ಕಮ್ಮಿಯಾದರೂ ಚಿತ್ರ ಮತ್ತೆ ಮತ್ತೆ ಪ್ರೇಕ್ಷಕರನ್ನು ಸೆಳೆಯುವಲ್ಲಿ ಯಶಸ್ವಿಯಾಗಿದ್ದು, ಚಿತ್ರಮಂದಿರದ ಮಾಲೀಕರು ಬೇರೆ ಚಿತ್ರ ಬಿಡುಗಡೆಗೆ ಆಸಕ್ತಿ ತೋರುತ್ತಿಲ್ಲ ಎನ್ನುವುದು ಗಾಂಧಿನಗರದ ಕೆಲ ನಿರ್ಮಾಪಕರ ಆರೋಪ.
ಚಿತ್ರದ ಅಭೂತಪೂರ್ವ ಯಶಸ್ಸಿನಿಂದ ಸೂರಿಗೆ ಸಿಕ್ಕಪಟ್ಟೆ ಬೇಡಿಕೆ ಹೆಚ್ಚಾಗಿದೆ. ಯೋಗರಾಜ್ ಭಟ್ ಸಾಹಿತ್ಯವಿರುವ ಚಿತ್ರದ ಹಾಡು ಚಿತ್ರದ ಬಿಡುಗಡೆಗೆ ಮುನ್ನವೇ ಸೂಪರ್ ಹಿಟ್ ಆಗಿದ್ದಿದ್ದು ಚಿತ್ರ ಯಶಸ್ಸಿಗೆ ಪ್ರಮುಖ ಕಾರಣ. ಪುನೀತ್ ಪವರ್ ಫುಲ್ ಅಭಿನಯ, ಸ್ಟಂಟ್, ಡ್ಯಾನ್ಸ್, ಸತ್ಯ ಹೆಗಡೆ ಕ್ಯಾಮೆರಾ ಕೆಲಸಕ್ಕೆ ಮೆಚ್ಚುಗೆ ವ್ಯಕ್ತವಾಗಿದೆ.
ಇಂಗ್ಲಿಷ್ ಲಿಪಿಯಲ್ಲಿ ಕನ್ನಡ ಎಸ್ಎಮ್ಎಸ್ | ದಟ್ಸ್ ಕನ್ನಡ ಫ್ಯಾನ್ ಕ್ಲಬ್ ಸೇರಿರಿ | ಮೊಬೈಲಲ್ಲಿ ಕನ್ನಡ ಸುದ್ದಿ ಓದಿರಿ | ಹೂವಿನಂಗಡಿ 24/7


Click it and Unblock the Notifications











