ನೂರಿಪ್ಪತ್ತು ಥಿಯೇಟರಿನಲ್ಲಿ ಮರ್ಯಾದೆ ರಾಮಣ್ಣ!

komal
ಕೋಮಲ್ ಕುಮಾರ್ ನಾಯಕರಾಗಿರುವ "ಮರ್ಯಾದೆ ರಾಮಣ್ಣ" ಚಿತ್ರ ಮುಂದಿನ ವಾರ ತೆರೆಗೆ ಬರಲಿದೆ. ಪತ್ತಿ ವಿ.ಎಸ್. ಗುರುಪ್ರಸಾದ್ ನಿರ್ದೇಶನ ಈ ಚಿತ್ರಕ್ಕಿದೆ. ವಿಷಯ ಇಷ್ಟೇ ಅಲ್ಲ, ಇನ್ನೂ ಇದೆ...

ಈ ಚಿತ್ರ ಕರ್ನಾಟಕದಲ್ಲಿ 120 ಥಿಯೇಟರ್ ನಲ್ಲಿ ಬಿಡುಗಡೆಯಾಗಲಿದೆ. ಹಾಸ್ಯನಟನೊಬ್ಬನ ಚಿತ್ರ ಈ ರೀತಿಯ ಭಾಗ್ಯ ಕಂಡಿದ್ದು ಅಚ್ಚರಿಯೇ ಸರಿ. ಮರ್ಯಾದೆ ರಾಮಣ್ಣನಿಗೆ ಸಿಕ್ಕಾಪಟ್ಟೆ ಮರ್ಯಾದೆ ದಕ್ಕಿದೆ. ಹಾಸ್ಯನಟರಾದರೂ ನಾಯಕರನ್ನೇ ಮೀರಿ ಬೆಳೆದು ನಿಂತಿರುವ ಕೋಮಲ್, ಕೋಟಿ ಮೇಲೆ ಟಿವಿ ರೈಟ್ಸ್ ಗಿಟ್ಟಿಸಿಕೊಂಡು ಅಚ್ಚರಿ ಹುಟ್ಟಿಸಿದ್ದರು. ಇದೀಗ ಅಚ್ಚರಿಯ ಡಬಲ್!!

ರಾಜಮೌಳಿ ನಿರ್ದೇಶನ, ಸುನಿಲ್-ಸಲೋನಿ ತಾರಾಜೋಡಿಯ ಮೂಲಚಿತ್ರ ತೆಲಗು ಮರ್ಯಾದ ರಾಮಣ್ಣ, ಈಗಾಗಲೇ ಸೂಪರ್ ಹಿಟ್ ಲೀಸ್ಟ್ ನಲ್ಲಿ ಸೇರಿದ್ದು, 'ಬೆಸ್ಟ್ ಫ್ಯಾಮಿಲಿ ಎಂಟರ್ ಟೈನರ್' ಎಂಬ ಹೊಗಳಿಕೆಗೂ ಪಾತ್ರವಾಗಿದೆ.

ಕನ್ನಡದ ಮರ್ಯಾದೆ ರಾಮಣ್ಣ ಚಿತ್ರದ ಆಡಿಯೋ ರಿಲೀಜ್ ಆಗಿ ಹಾಡುಗಳು ಈಗಾಗಲೇ ಜನರ ಬಾಯಲ್ಲಿವೆ. ಈ ರಿಮೇಕ್ ಚಿತ್ರ ಕನ್ನಡದಲ್ಲಿ ಹೇಗೆ ಓಡೀತು ಎಂಬ ಸಂದೇಹ ಯಾರಿಗೂ ಇಲ್ಲ. ಏಕೆಂದರೆ ಕೋಮಲ್ ಕ್ರೇಜ್ ಕನ್ನಡದಲ್ಲಿ ಸಾಕಷ್ಟಿದೆ.

ಸ್ವತಃ ಕೋಮಲ್ ಕೂಡ ಸಾಕಷ್ಟು ನಿರೀಕ್ಷೆ ಇಟ್ಟಿರುವ ಈ ಚಿತ್ರ ಜನರಲ್ಲಿ ತೀವ್ರ ಕುತೂಹಲಕ್ಕೆ ಕಾರಣವಾಗಿದೆ. 120 ಥಿಯೇಟರಿನಲ್ಲಿ ಬಿಡುಗಡೆ ಮಾಡ ಹೊರಟಿರುವ ನಿರ್ಮಾಪಕರ ಧೈರ್ಯವೇ ಚಿತ್ರ ಚೆನ್ನಾಗಿದೆ ಎನ್ನುವುದಕ್ಕೆ ಸಾಕ್ಷಿ ಎನ್ನಬಹುದಲ್ಲವೇ!

More from Filmibeat

English summary
Remake Movie 'Maryada Ramanna' is releasing next week in Sandalwood. There is enough craze of hero Komal Kumar. So it made lot of expectation in Kannada film industry.
 
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X