ಬೆಂಗಳೂರಿನಲ್ಲಿ ನಡೆಯುವ ಒಂದು ರಾತ್ರಿಯ ಕಥೆ
ಇದೊಂದು ಒಂದೇ ರಾತ್ರಿ ನಡೆಯುವ ಕಥೆ. ಇದರಲ್ಲಿ ಥ್ರಿಲ್ಲಿಂಗ್, ಕಾಮಿಡಿ ಮತ್ತು ಎಮೋಷನಲ್ ಅಂಶಗಳು ಇವೆ. ಚಿತ್ರದ ಹೆಸರು '9 ಟು 12'. ಅಶೋಕ್ ಪಾಟೀಲ್ ರಚನೆ ಮತ್ತು ನಿರ್ದೇಶನ ಚಿತ್ರಕ್ಕಿದೆ. ಪೊಲೀಸರ ಜೊತೆ ಎರಡು ರಾತ್ರಿ ಗಸ್ತು ತಿರುಗಿ ಬೆಂಗಳೂರ ಒಂದಷ್ಟು ಮಾಹಿತಿಗಳನ್ನು ಕಲೆಹಾಕಿ ಈ ಚಿತ್ರವನ್ನು ತೆರೆಗೆ ತರುತ್ತಿದ್ದಾರೆ.
ಸದ್ಯಕ್ಕೆ '9 ಟು 12' ಚಿತ್ರದ ಚಿತ್ರೀಕರಣ ಬೆಂಗಳೂರಿನ ಇಂದಿರಾನಗರದ ಇ ಎಸ್ ಐ ಆಸ್ಪತ್ರೆಯಲ್ಲಿ ಭರದಿಂದ ಸಾಗುತ್ತಿದೆ. ಕಿಶೋರ್ ಈ ಚಿತ್ರದ ನಾಯಕನಾಗಿ ಅಭಿನಯಿಸುತ್ತಿದ್ದು, ಪ್ರಮುಖ ಪಾತ್ರದಲ್ಲಿ ಬಿ.ಸಿ.ಪಾಟೀಲ್ ಕಾಣಿಸಿಕೊಳ್ಳುತ್ತಿದ್ದಾರೆ. ಸ್ಮಿತಾ, ಬಿ.ವಿ.ರಾಧಾ, ಎಂ.ಎಸ್.ಉಮೇಶ್, ಅರವಿಂದ್, ಸಿಹಿಕಹಿಚಂದ್ರು, ಬ್ಯಾಂಕ್‌ಜನಾರ್ದನ್ ಮುಂತಾದವರು ಚಿತ್ರದ ತಾರಾಬಳಗದಲ್ಲಿದ್ದಾರೆ.
ನಿರಂಜನ್‌ಬಾಬು ಛಾಯಾಗ್ರಾಹಕರಾಗಿರುವ ಈ ಚಿತ್ರಕ್ಕೆ ಸಾಯಿಕಾರ್ತಿಕ್ ಅವರ ಸಂಗೀತವಿದೆ. ಶಿವಕುಮಾರ್ ಸಂಕಲನ ಬಾಬುಖಾನ್ ಕಲಾ ನಿರ್ದೇಶನ, ಜಯಂತ ಕಾಯ್ಕಿಣಿ, ನಾಗೇಂದ್ರಪ್ರಸಾದ್ ಗೀತರಚನೆ ಹಾಗೂ ವಜ್ರೇಶ್ವರಿ ಮಂಜುನಾಥ್ ಮತ್ತು ರಾಮು ಅವರ ನಿರ್ಮಾಣ ನಿರ್ವಹಣೆ '9 ಟು 12' ಚಿತ್ರಕ್ಕಿದೆ. ಓಂ ಕ್ರಿಯೇಷನ್ಸ್ ಲಾಂಛನದಲ್ಲಿ ಚಿತ್ರವನ್ನು ನಿರ್ಮಿಸಲಾಗುತ್ತಿದೆ.
ಚಿತ್ರದಲ್ಲಿ ಕಿಶೋರ್ ಟ್ಯಾಕ್ಸಿ ಡ್ರೈವರ್ ಆಗಿ ಕಾಣಿಸಲಿದ್ದಾರೆ. ಬಿ ಸಿ ಪಾಟೀಲ್ ಪೊಲೀಸ್ ಅಧಿಕಾರಿ. ಅಶೋಕ್ ಪಾಟೀಲ್ ನಿರ್ದೇಶನ ಮೂರನೆ ಚಿತ್ರವಿದು. ಈ ಹಿಂದೆ ಇವರು 'ಶಾಪ' ಮತ್ತು 'ಜೋಕ್ ಫಾಲ್ಸ್' ಚಿತ್ರಗಳನ್ನು ನಿರ್ದೇಶಿಸಿದ್ದರು. 'ಆತ್ಮೀಯ' ಹಾಗೂ 'ಅವ್ವ' ಚಿತ್ರಗಳಲ್ಲಿ ನಟಿಸಿ ಪಡ್ಡೆ ಹುಡುಗರ ನಿದ್ದೆ ಕೆಡಿಸಿದ್ದ ಕೃಷ್ಣ ಸುಂದರಿ ಸ್ಮಿತಾ ಈ ಚಿತ್ರದ ಮೂಲಕ ಪಡ್ಡೆಗಳ ಹೃದಯಕ್ಕೆ ಲಗ್ಗೆ ಹಾಕಲಿದ್ದಾರೆ.


Click it and Unblock the Notifications











