»   » ಈ ವಾರ ಸ್ಯಾಂಡಲ್ ವುಡ್ ನಲ್ಲಿ ತ್ರಿವಳಿಗಳ ಜನನ!

ಈ ವಾರ ಸ್ಯಾಂಡಲ್ ವುಡ್ ನಲ್ಲಿ ತ್ರಿವಳಿಗಳ ಜನನ!

Subscribe to Filmibeat Kannada

ಕನ್ನಡ ಚಿತ್ರರಂಗ 2008ರಲ್ಲಿ 100ಕ್ಕೂ ಹೆಚ್ಚು ಮರಿಗಳನ್ನು ಹಾಕಿದೆ.ಈ ವಾರ ಮತ್ತೆ ಮೂರು ಮರಿಗಳನ್ನು ಹಾಕಲಿದೆ . ಹಾಗಾಗಿ ಈ ವರ್ಷ ಉಳಿದ ಉಳಿದ, ಮಕಾಡೆ ಮಲಗಿದ ಚಿತ್ರಗಳ ವಿಚಾರವನ್ನು ಪಕ್ಕಕ್ಕಿಟ್ಟು ಡಿ.5ರಂದು ಬಿಡುಗಡೆಗೊಳ್ಳುತ್ತಿರುವ ಚಿತ್ರಗಳ ಬಗ್ಗೆ ಒಂದು ಇಣುಕು ನೋಟ ಹರಿಸೋಣ.

1. ಪರಮೇಶ ಪಾನವಾಲಾ
ಹ್ಯಾಟ್ರಿಕ್ ಹೀರೊ ಶಿವರಾಜ್ ಕುಮಾರ್ ಅಭಿನಯದ ಈ ಚಿತ್ರ ಒಂದು ತಿಂಗಳ ಹಿಂದೆಯೇ ಬಿಡುಗಡೆಗೊಳ್ಳಬೇಕಿತ್ತು. ಆದರೆ ಚಿತ್ರಮಂದಿರಗಳ ಅಭಾವದ ಕಾರಣ ಈ ವಾರ ತೆರೆಕಾಣುತ್ತಿದೆ. ಆಕಾಶ್, ಅರಸು ಮತ್ತು ಮೆರವಣಿಗೆಯಂತಹ ಯಶಶ್ವಿ ಚಿತ್ರಗಳನ್ನು ನೀಡಿದ ಮಹೇಶ್ ಬಾಬು ಈ ಚಿತ್ರದ ನಿರ್ದೇಶಕ.ಹಾಗಾಗಿ ಈ ಚಿತ್ರ ಪ್ರೇಕ್ಷಕರಲ್ಲಿ ಕುತೂಹಲ ಉಂಟು ಮಾಡಿದೆ.

ತಾರಾಗಣ: ಶಿವರಾಜ್ ಕುಮಾರ್, ಸುರ್ವಿನ್ ಚಾವ್ಲಾ, ಶ್ರೀನಿವಾಸಮೂರ್ತಿ, ಆಶಿಶ್ ವಿಧ್ಯಾರ್ಥಿ, ಚಿತ್ರಾ ಶಣೈ, ಅಕುಲ್ ಬಾಲಾಜಿ, ಸಾಧು ಕೋಕಿಲ, ಶರಣ್ ಮುಖ್ಯ ಭೂಮಿಕೆಯಲ್ಲಿದ್ದಾರೆ.
ಛಾಯಾಗ್ರಹಣ: ವೀನಸ್ ಮೂರ್ತಿ
ಸ೦ಗೀತ: ಹರಿಕ್ರಶ್ಣ
ನಿರ್ಮಾಪಕ: ಆದಿತ್ಯ ಬಾಬು
ನಿರ್ದೇಶಕ: ಮಹೇಶ್ ಬಾಬು

2. ಜನುಮದ ಗೆಳತಿ

ಕನ್ನಡ ಚಿತ್ರರಂಗದಲ್ಲಿ ಉತ್ತಮ ಬ್ರೇಕ್ ಗಾಗಿ ಕಾಯುತ್ತಿರುವ ಶ್ರೀನಗರ ಕಿಟ್ಟಿ ಈ ಚಿತ್ರದ ನಾಯಕ. ಗುಲಾಬಿ ಹೂವಿನ ವ್ಯಾಪಾರಿ ಸಿ.ಆರ್. ಮನೋಹರ್ ನಿರ್ಮಾಣದ ಎರಡನೇ ಚಿತ್ರ ನಾಳೆಯಿಂದ ತನ್ನ ಅದೃಷ್ಟವನ್ನು ತೆರೆಗೆ ಒಡ್ಡಲಿದೆ.

ತಾರಾಗಣ: ಶ್ರೀನಗರ ಕಿಟ್ಟಿ, ಪೂಜಾ ಗಾಂಧಿ, ಜಯಂತಿ, ಅವಿನಾಶ್, ಹರೀಶ್ ರೈ, ಸುರೇಶ್ ಮಂಗಳೂರು, ಕಿಲ್ಲರ್ ವೆಂಕಟೀಶ್,ಕುರಿಗಳು ಪ್ರತಾಪ್ ಮುಂತಾದವರು ಇದ್ದಾರೆ.
ಛಾಯಾಗ್ರಹಣ: ದಿನೇಶ್ ಬಾಬು
ಸಂಗೀತ: ವಿ. ಮನೋಹರ್
ನಿರ್ಮಾಪಕ: ಸಿ.ಆರ್. ಮನೋಹರ್
ನಿರ್ದೇಶಕ: ದಿನೇಶ್ ಬಾಬು

3. ಅಕ್ಕ - ತಂಗಿ
ಕಳೆದ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಿ ಪರಾಭವಗೊ೦ಡ ಎಸ್. ಮಹೇಂದರ್ ನಿರ್ದೇಶನದ ಚಿತ್ರ. ಕನ್ನಡದ ಜನಪ್ರಿಯ ಜಾನಪದ ಗೀತೆ "ಪುಣ್ಯಕೋಟಿ" ಹಾಡಿನಲ್ಲಿ ಬರುವ ಕಥೆಯನ್ನಾಧರಿಸಿದ ಚಿತ್ರ ನಾಳೆಯಿಂದ ಅಕ್ಕ ತಂಗಿಯರ ಜೋಡಿಯನ್ನು ನಾಳೆಯಿಂದ ನೋಡಬಹುದು. ಬೆಂಗಳೂರಿನಲ್ಲಿ ಕೇವಲ ಒಂದು ಚಿತ್ರ ಮಂದಿರದಲ್ಲಿ (ತ್ರಿಭುವನ್) ಹಾಗೂ ರಾಜ್ಯಾದ್ಯಂತ 14 ಜಿಲ್ಲೆಗಳಲ್ಲಿ ಬಿಡುಗಡೆಗೊಳ್ಳಲಿದೆ.

ತಾರಾಗಣ: ಶ್ರುತಿ, ದುನಿಯಾ ರಶ್ಮಿ, ಮೋಹನ್, ಶರಣ್, ಕಿಶೋರ್
ಛಾಯಾಗ್ರಹಣ: ಸುರೇಶ್ ಬಾಬು
ಸ೦ಗೀತ: ವಿ. ಮನೋಹರ್
ನಿರ್ಮಾಪಕ: ರಮೇಶ್ ಯಾದವ್
ನಿರ್ದೇಶಕ: ಎಸ್. ಮಹೇಂದರ್

ಡಿಸೆಂಬರ್ ತಿಂಗಳಲ್ಲಿ ಮತ್ತಷ್ಟು ಚಿತ್ರಗಳು ತೆರೆಕಾಣಲು ಸಿದ್ಧವಾಗಿವೆ. ಅವುಗಳಲ್ಲಿ ಅನು,ಹಾಗೆ ಸುಮ್ಮನೆ,ರಾಕಿ,ಗುಲಾಮ, ನಂಯಜಮಾನ್ರು, ರಾಜ್ ಕುಮಾರಿ, ಶಿವಮಣಿ ಮುಖ್ಯವಾದವು. ಮುಂದಿನ ಶುಕ್ರವಾರಗಲ್ಲಿ ಎರಡು ಮೂರು ಚಿತ್ರಗಳು ಒಟ್ಟಿಗೆ ತೆರೆಕಾಣುವುದು ಗ್ಯಾರಂಟಿ.

(ದಟ್ಸ್ ಕನ್ನಡ ಚಿತ್ರವಾರ್ತೆ)

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada