»   » ಮುಂಗಾರು ಮಳೆಯನ್ನು ಮನೆಗೆ ಕೊಂಡೊಯ್ಯಿರಿ!

ಮುಂಗಾರು ಮಳೆಯನ್ನು ಮನೆಗೆ ಕೊಂಡೊಯ್ಯಿರಿ!

Subscribe to Filmibeat Kannada

'ಮುಂಗಾರು ಮಳೆ' ಬಿಡುಗಡೆಯಾಗಿ ಎರಡು ವರ್ಷಗಳೇ ಸರಿದು ಹೋಗಿವೆ ಆದರೂ 'ಮಳೆ'ಯ ನೆನಪು ಮಾತ್ರ ಸದಾ ಕಾಡುತ್ತಿರುತ್ತದೆ. ಗಣೇಶ್, ಪೂಜಾ ಗಾಂಧಿ, ಅನಂತ್‌ನಾಗ್ ಅಭಿನಯ, ಮೈನವಿರೇಳಿಸುವ ಜೋಗ ಜಲಪಾತ ದೃಶ್ಯಗಳು, ಮನೋಮೂರ್ತಿಸಂಗೀತ, ಜಯಂತ್ ಕಾಯ್ಕಿಣಿ ಸಾಹಿತ್ಯ, ಯೋಗರಾಜ್ ಭಟ್‌ರ ನಿರ್ದೇಶನ...ಹೀಗೆ ಏನೇನೋ ನೆನಪಾಗಿ ಮಳೆ ನಿಂತರು ಮರದ ಹನಿ ನಿಲ್ಲದು ಎಂಬಂತೆ ಕಾಡುತ್ತಿರುತ್ತದೆ.

ಯಶಸ್ವಿ ಕನ್ನಡ ಚಿತ್ರಗಳ ಸಿಡಿ, ವಿಸಿಡಿ ಅಥವಾ ಡಿವಿಡಿಗಳು ಸಿಗುವುದೇ ಅಪರೂಪ. ಅಂತಹ ಅಪರೂಪದ ಪಟ್ಟಿಗೆ ಈಗ ಮುಂಗಾರು ಮಳೆ ಚಿತ್ರದ ವಿಸಿಡಿಯನ್ನು ಸೇರಿಸಿಕೊಳ್ಳಬಹುದು. ಆನಂದ್ ವಿಡಿಯೋ ಈ ಚಿತ್ರದ ವಿಸಿಡಿ/ಡಿವಿಡಿಗಳನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಿದೆ. ವಿಸಿಡಿ ಬೆಲೆ 49 ರು.ಗಳು. ''ವಿಸಿಡಿ ರೂಪದಲ್ಲಿ ಮುಂಗಾರು ಮಳೆ ಬರುತ್ತಿರುರುವುದು ಒಳ್ಳೆಯ ಬೆಳವಣಿಗೆ. ಹಿಟ್ ಚಿತ್ರಗಳ ವಿಸಿಡಿಗಳು ಈ ಹಿಂದೆ ಬಿಡುಗಡೆಯಾಗಿದ್ದೇ ಅಪರೂಪ. ಈ ರೀತಿಯ ಬೆಳವಣಿಗೆ ಅಷ್ಟೋ ಇಷ್ಟೋ ನಕಲಿ ಸಿಡಿ ಹಾವಳಿಯನ್ನು ತಡೆಯುತ್ತದೆ '' ಎಂಬುದು 'ಈ ಪ್ರಪಂಚ' ಬ್ಲಾಗಿನ್ ರವೀಶ್ ಕುಮಾರ್ ಅಭಿಪ್ರಾಯ. ಅವರು ಈಗಾಗಲೇ ಮುಂಗಾರು ಮಳೆ ವಿಸಿಡಿಯನ್ನು ಕೊಂಡುಕೊಂಡಿದ್ದಾರಂತೆ, ನೀವು!?

(ದಟ್ಸ್‌ಕನ್ನಡ ಸಿನಿವಾರ್ತೆ)

Please Wait while comments are loading...